HOME » NEWS » Coronavirus-latest-news » DOCTOR SWEAT DRENCHED PICTURE SHOWS WHAT ITS LIKE TO WEAR A PPE SUIT FOR LONG HOURS KVD

Real Hero: ಬಿರು ಬೇಸಿಗೆಯಲ್ಲಿ ಗಂಟೆಗಟ್ಟಲೇ PPE ಕಿಟ್ ಧರಿಸುವ ವೈದ್ಯನ ಕರುಣಾಜನಕ ಕಥೆ..!

PPE ಕಿಟ್​​ ಧರಿಸಿ ನಾವೆಲ್ಲಾ ಗಂಟೆಗಟ್ಟಲೇ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ನಾನು ದೂರಲ್ಲ, ಹೆಮ್ಮೆ ಇದೆ. ನಾನೊಬ್ಬನೇ ಅಲ್ಲ ನನ್ನಂತ ವೈದ್ಯರು, ನರ್ಸ್​ಗಳು, ವೈದ್ಯಕೀಯ ಸಿಬ್ಬಂದಿಯ ಸ್ಥಿತಿಯೂ ಹೀಗೆ ಇದೆ.

Kavya V | news18-kannada
Updated:April 30, 2021, 3:49 PM IST
Real Hero: ಬಿರು ಬೇಸಿಗೆಯಲ್ಲಿ ಗಂಟೆಗಟ್ಟಲೇ PPE ಕಿಟ್ ಧರಿಸುವ ವೈದ್ಯನ ಕರುಣಾಜನಕ ಕಥೆ..!
ಡಾ.ಸೋಹಿಲ್ ಮಾಕ್ವಾನ
  • Share this:
ಅಹಮದಾಬಾದ್​: ಕೊರೋನಾ ಕೂಪದಲ್ಲಿ ದೇಶ ನರಳುತ್ತಿದೆ. ಭಾರತೀಯ ವೈದ್ಯಕೀಯ ಕ್ಷೇತ್ರ ಹಿಂದೆಂದೂ ಕಾಣದ ಭಯಾನಕ ಒತ್ತಡದಲ್ಲಿದೆ. ತನ್ನ ಸಾಮರ್ಥ್ಯ ಮೀರಿ ಜನರ ಜೀವ ಉಳಿಸಲು ವೈದ್ಯಕೀಯ ಲೋಕ ನಿಂತಿದೆ. ಕೊರೋನಾ ಯುದ್ಧದ ಮುಂದಾಳ್ವ ವಹಿಸಿರುವ ವೈದ್ಯರು, ನರ್ಸ್​​ಗಳು ತಮ್ಮ ಜೀವವನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ. ಸೋಂಕಿತರ ಸೇವೆಗೆ ನಿಲ್ಲುವ ಈ ಕೊರೋನಾ ವಾರಿಯರ್ಸ್​ಗೇ ವೈರಸ್​ ತಟ್ಟುವ ಸಾಧ್ಯೆತೆಗಳು ಹೆಚ್ಚು. ತಮ್ಮನ್ನು ತಾವು ರಕ್ಷಿಸಿಕೊಂಡು ಮತ್ತೊಬ್ಬರನ್ನು ರಕ್ಷಿಸಬೇಕಾದ ಅನಿವಾರ್ಯ ಸ್ಥಿತಿ. ಕೋವಿಡ್​ ವಾರ್ಡ್​ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್​ಗಳು ಹಾಗೂ ಇತರೆ ಸಿಬ್ಬಂದಿ ನಿರಂತರವಾಗಿ PPE ಕಿಟ್​ ಧರಿಸಲೇಬೇಕು. ಹೀಗೆ ದಿನಗಟ್ಟಲೇ PPE ಕಿಟ್​​ ಧರಿಸಿ ಅನುಭವಿಸೋ ಹಿಂಸೆಯನ್ನು ವೈದ್ಯರೊಬ್ಬರು ತೆರೆದಿಟ್ಟಿದ್ದಾರೆ.

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಲವು ಪದರಗಳ PPE ಕಿಟನ್ನು ಧರಿಲೇಬೇಕು. ಈ ಬೇಸಿಗೆ ಕಾಲದಲ್ಲಿ ದಿನವೀಡಿ PPE ಕಿಟ್​ ಧರಿಸುವವರು ಬೆವರಿನಲ್ಲಿ ತೋಯ್ದು ತೊಪ್ಪೆಯಾಗಿರುತ್ತಾರೆ. ಇದನ್ನು ಫೋಟೋಗಳ ಮೂಲಕ ಗುಜರಾತ್​ನ ಅಹಮದಾಬಾದ್​ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಸೋಹಿಲ್​ ಮಾಕ್ವಾನ ತೆರೆದಿಟ್ಟಿದ್ದಾರೆ. ಇಡೀ ದಿನ ಕೆಲಸ ಮಾಡಿದ ಬಳಿಕ PPE ಕಿಟ್​ ತೆಗೆದಾಗ ನಮ್ಮ ಸ್ಥಿತಿ ಹೇಗಿರುತ್ತೆ ಎಂದು ಫೋಟೋ ಮೂಲಕ ತೋರಿಸಿದ್ದಾರೆ. ಇಡೀ ದೇಹ ಬೆವರಿನಿಂದ ತೋಯ್ದಿರುವ ಫೋಟೋ ಸದ್ಯ ಎಲ್ಲರ ಕರುಳು ಹಿಂಡುತ್ತಿದೆ.

ದಾರಾಪುರದ GMERS ಮೆಡಿಕಲ್​ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಸೋಹಿಲ್​ ಮಾಕ್ವಾನ ತಮ್ಮ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ. ಸದ್ಯ ಅವರ ಟ್ವೀಟ್​ ದೇಶದ ಜನರ ಗಮನ ಸೆಳೆದಿದೆ. PPE ಕಿಟ್​​ ಧರಿಸಿ ನಾವೆಲ್ಲಾ ಗಂಟೆಗಟ್ಟಲೇ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ನಾನು ದೂರಲ್ಲ, ಹೆಮ್ಮೆ ಇದೆ. ನಾನೊಬ್ಬನೇ ಅಲ್ಲ ನನ್ನಂತ ವೈದ್ಯರು, ನರ್ಸ್​ಗಳು, ವೈದ್ಯಕೀಯ ಸಿಬ್ಬಂದಿಯ ಸ್ಥಿತಿಯೂ ಹೀಗೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ನೊಂದ ಭಾರತಕ್ಕೆ ಬಲ ತುಂಬಿದ ದೊಡ್ಡಣ್ಣ; ಅಗತ್ಯ ವಸ್ತುಗಳನ್ನು ವಿಮಾನಗಳಲ್ಲಿ ತುಂಬಿ ಕಳುಹಿಸಿದ ಅಮೆರಿಕ!

ಈ ಸಂಕಷ್ಟ ಕಾಲದಲ್ಲಿ ನಾವೆಲ್ಲಾ ತುಂಬಾ ಕಷ್ಟಪಟ್ಟು, ಶ್ರಮ ಹಾಕಿ ಕೆಲಸ ಮಾಡುತ್ತಿದ್ದೇವೆ. ಸೋಂಕಿತರಿಗೆ 1 ಅಡಿ ಅಂತರದಲ್ಲಿ ನಾವಿದ್ದೇವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವ ಒತ್ತಡ ನಮ್ಮ ಮೇಲಿದೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಬೇಸಿಗೆಯಲ್ಲಿ PPE ಕಿಟ್​ ಧರಿಸಿ ಕೆಲಸ ಮಾಡುತ್ತಿರುವುದು ಕಷ್ಟವಿದೆ. ಆದರೆ ನಾನೊಬ್ಬನೇ ಅಲ್ಲ ಆಸ್ಪತ್ರೆಯ ಎಲ್ಲಾ ಸ್ಥರಗಳ ಸಿಬ್ಬಂದಿಯೂ ಹೀಗೆ ದುಡಿಯುತ್ತಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಡಾ.ಸೋಹಿಲ್​ ಬರೆದುಕೊಂಡಿದ್ದಾರೆ. ನಮ್ಮಗಾಗಿ ದುಡಿಯುತ್ತಿರುವ ನಿಮ್ಮಂಥ ವೈದ್ಯರಿಗೆ ನಮ್ಮದೊಂದು ಸಲಾಂ.
Published by: Kavya V
First published: April 30, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories