Remdesivir: ಸೋಂಕಿತರಿಗೆ ಸಿಗುತ್ತಿಲ್ಲ ರೆಮಿಡಿಸಿವರ್; ವೈದ್ಯರಿಂದಲೇ ಅಕ್ರಮ ಮಾರಾಟ; ನಾಲ್ವರ ಬಂಧನ

ರೆಮಿಡಿಸಿವರ್​ ಔಷಧ ಕಾಳಸಂತೆಯಲ್ಲಿ ಮಾರಾಟವಾಗದಂತೆ ಪೊಲೀಸರು ಈಗಾಗಲೇ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರೂ ದಂಧೆಕೋರರು ಮಾತ್ರ ನಿರಾಂತಕವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.

ರೆಮಿಡಿಸಿವರ್​ ಔಷಧ.

ರೆಮಿಡಿಸಿವರ್​ ಔಷಧ.

 • Share this:
  ಬೆಂಗಳೂರು (ಮೇ. 14): ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಔಷಧಿ ರೆಮಿಡಿಸಿವರ್​. ಆಂಟಿ ವೈರಲ್​ ಚುಚ್ಚುಮದ್ದಿಗೆ ಈಗ ಎಲ್ಲೆಡೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ. ಇದೇ ಹಿನ್ನಲೆ ಈಗ ಔಷಧಿಯನ್ನು ಎಂಟು ಹತ್ತುಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ, ರೆಮಿಡಿಸಿವರ್​ ಔಷಧ ಕಾಳಸಂತೆಯಲ್ಲಿ ಮಾರಾಟವಾಗದಂತೆ ಪೊಲೀಸರು ಈಗಾಗಲೇ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರೂ ದಂಧೆಕೋರರು ಮಾತ್ರ ನಿರಾಂತಕವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಸಿಲಿಕಾನ್​ ಸಿಟಿಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯನೊಬ್ಬ ನಕಲಿ ರೆಮಿಡಿಸಿವರ್​ ಔಷಧವನ್ನು ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಬಿದ್ದಿರುವ ಘಟನೆ ನಡೆದಿದೆ. ವೈದ್ಯ ಸಾಗರ್ ಹಾಗೂ ವಾರ್ಡ್ ಬಾಯ್ ಕೃಷ್ಣ ಎಂಬುವವರು ಈ ಕೃತ್ಯ ಎಸುಗಿದ್ದು, ಸದ್ಯ ಪೊಲೀಸರ ವದ್ಲಿದ್ದಾರೆ. ಈ ಇಬ್ಬರೂ ಆರೋಪಿಗಳು ಹತ್ತು ಇಂಜೆಕ್ಷನ್ ನಲ್ಲಿ ಎಂಟು ಅಸ್ಪತ್ರೆಗೆ ಕೊಟ್ಟು ಇನ್ನೂ ಎರಡು ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದರು. ಈ ಖಚಿತ ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿದ್ದಾರೆ.

  ಮತ್ತೊಂದು ಪ್ರಕರಣದಲ್ಲಿ ನಕಲಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಬಂಧಿಸಲಾಗಿದೆ. ಸಂಜಯನಗರ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. ರವಿಕುಮಾರ್ ಮತ್ತು ಮುನಿರಾಜ್ ಎಂಬುವರ ಬಂಧಿತರು. ಆಸ್ಪತ್ರೆಗಳಿಂದ ಖಾಲಿಯಾದ ವಯಲ್ಸ್ ಪಡೆದು ಅದರಲ್ಲಿ ಎನ್ ಎಸ್ ಸೆಲೂಷನ್ ಫೀಲ್ ಮಾಡಿ ಮಾರುತ್ತಿದ್ದರು ಎಂಬುದು ಬಯಲಾಗಿದೆ. ಅಲ್ಲದೇ ಈ ಒಂದು ಇಂಜೆಕ್ಷನ್​ಗೆ 25 ಸಾವಿರ ಹಣ ಪಡೆಯುತ್ತಿದ್ದರು. ಈ ನಕಲಿ ಮಾರಾಟ ಜಾಲದ ಸುಳಿವು ಸಿಕ್ಕ ಪೊಲೀಸರು ಇಂಜೆಕ್ಷನ್ ಗಾಗಿ ಬೇಡಿಕೆ ಇಟ್ಟು ಮಫ್ತಿ ಕಾರ್ಯಾಚರಣೆ ನಡೆಸಿದರು. ಇವರ ಬಳಿಯಲ್ಲಿದ್ದ ಇಂಜೆಕ್ಷನ್​ ಅನ್ನು ಪಡೆದು ತಜ್ಞರಿಗೆ ಕಳುಹಿಸಿದಾಗ ಅದು ನಕಲಿ ಎಂಬುದು ಪತ್ತೆಯಾಗಿದೆ. ಈ ಇಬ್ಬರು ಈಗಾಗಲೇ 15 ವಯಲ್ಸ್ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ.

  ಇದನ್ನು ಓದಿ: ವಿಶೇಷ ಪ್ಯಾಕೇಜ್ ​ಪರಿಹಾರವಿಲ್ಲ; ಬಿಪಿಎಲ್​ ಕಾರ್ಡ್​ಗೆ 5 ಕೆಜಿ ಅಕ್ಕಿ; ಸಿಎಂ ಬಿಎಸ್​ವೈ

  ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ 5 ಲಕ್ಷ ರೆಮಿಡಿಸಿವಿರ್‌ ಇಂಜೆಕ್ಷನ್ ಆಮದು ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ಜಾಗತಿಕ ಟೆಂಡರ್ ಕರೆಯಲಾಗಿದೆ. ರೆಮಿಡಿಸಿವರ್‌ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜತೆಗೆ, ಅಗತ್ಯವಾದ ಎಲ್ಲ ಔಷಧಿಗಳು, ಸಾಮಗ್ರಿಗಳು ಮತ್ತು ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ನಿನ್ನೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದರು.

  ಇದಕ್ಕೂ ಎರಡು ದಿನ ಮುನ್ನ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ರೆಮಿಡಿಸಿವರ್‌ ಅನ್ನು ಸರಕಾರದ ಪಡೆದುಕೊಂಡು ವೈಜ್ಞಾನಿಕವಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಲಾಗುವುದು. ಎಷ್ಟು ಡೋಸ್‌ ಬಂದಿದೆ? ಎಷ್ಟು ಖರ್ಚಾಗಿದೆ? ಎಷ್ಟು ಉಳಿದಿದೆ? ಎಂಬ ಲೈವ್‌ ಸ್ಟೇಟಸ್‌ ಜತೆಗೆ, ಈ ಚುಚ್ಚುಮದ್ದು ಯಾರು ಪಡೆದರು? ಯಾರಿಗೆ ಎಷ್ಟು ಡೋಸ್‌ ನೀಡಲಾಗಿದೆ? ಎಂಬೆಲ್ಲ ಅಂಶಗಳು ಪಬ್ಲಿಕ್‌ ಡೊಮೈನ್‌ನಲ್ಲಿ ಮುಕ್ತವಾಗಿ ಪ್ರಕಟಿಸಲಾಗುವುದು. ಯಾವುದೇ ಮಾಹಿತಿಯನ್ನು ಮುಚ್ಚಿಡುವುದಿಲ್ಲ ಎಂದು ಎಂದು ತಿಳಿಸಿದ್ದರು.
  Published by:Seema R
  First published: