ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟನೆ; ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸರಣಿ ಸಭೆ

ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ ನೂತನ ಘಟಕಗಳು ಹಾಗೂ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎನ್ನಲಾಗಿದೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

 • Share this:
  ಬೆಂಗಳೂರು(ಮೇ.21): ಕೊರೋನಾ ಲಾಕ್​​ಡೌನ್​​ ಅಂತ್ಯಗೊಳ್ಳುತ್ತಿದಂತೆಯೇ ಪಕ್ಷ ಸಂಘಟನೆ ಮಾಡಲು ಕರ್ನಾಟಕ ಕಾಂಗ್ರೆಸ್​ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ನೇತೃತ್ವದಲ್ಲಿ ಇಂದು ಸರಣಿ ಸಭೆಗಳು ನಡೆಯಲಿವೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಕೆಲಸ ಕಾರ್ಯಗಳು ಹೇಗೆ ಚುರುಕುಗೊಳಿಸಬೇಕು ಎನ್ನುವುದರ ಕುರಿತು ಚರ್ಚೆ ನಡೆಯಲಿದೆ.

  ಇನ್ನು, ಡಿ.ಕೆ ಶಿವಕುಮಾರ್​​ ಅಧ್ಯಕ್ಷತೆಯಲ್ಲಿ ಮಹಿಳಾ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಯುವ ಕಾಂಗ್ರೆಸ್‌, ವಿದ್ಯಾರ್ಥಿ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆ ನಡೆಯಲಿದೆ. ಜತೆಗೆ ನಾಳೆ ಮಾಜಿ ಶಾಸಕರು, ನಿಗಮ, ಮಂಡಳಿ ಅಧ್ಯಕ್ಷರು ಮತ್ತು ನಾನಾ ಘಟಕಗಳ ಮಂಚೂಣಿ ನಾಯಕರ ಸಭೆಯೂ ನಿಗದಿಯಾಗಿದೆ.

  ಈ ಹಿಂದಿನ ಉಪಚುನಾವಣೆಯಲ್ಲಿ ಸೋಲು, ಪಕ್ಷದ ಆಂತರಿಕ ಬಿಕ್ಕಟ್ಟು ಹಾಗೂ ಮುಖಂಡರ ನಡುವಿನ ಗೊಂದಲದ ಬಗ್ಗೆ ಚರ್ಚೆಯಾಗಲಿದೆ. ಜತೆಗೆ ವಿಸರ್ಜನೆಯಾಗಿದ್ದ ಕೆಪಿಸಿಸಿ ಘಟಕಗಳನ್ನು ಮತ್ತೆ ಪುನಾರಚನೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

  ಇದನ್ನೂ ಓದಿ: Cyclone Amphan – ಕೊರೋನಾ ದಾಳಿಗಿಂತಲೂ ಮಾರಕ ಅಂಪನ್ ಚಂಡಮಾರುತ; ಬಂಗಾಳದಲ್ಲಿ 12 ಸಾವು?

  ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ ನೂತನ ಘಟಕಗಳು ಹಾಗೂ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎನ್ನಲಾಗಿದೆ.

  ಇನ್ನು, ಪಕ್ಷ ಮರು ಸಂಘಟಿಸಲು ನೀವು ಸ್ವತಂತ್ರರು ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಡಿ.ಕೆ ಶಿವಕುಮಾರ್​​ಗೆ ಅನಮತಿ ನೀಡಿದ್ದಾರೆ.
  First published: