DK Shivakumar: ಜೂ.7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​​ ಪದಗ್ರಹಣ

DK Shivakumar Oath Taking Ceremony: ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಬೆಂಗಳೂರಿಗೆ ಕರೆಸಿ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡೋದ್ರ ಮೂಲಕ ಲಕ್ಷಾಂತರ ಕಾರ್ಯಕರ್ತರ ಮುಂದೆ ಅಧಿಕಾರ ಸ್ವೀಕಾರ ಮಾಡಿಕೊಳ್ಳಲು ಮುಂದಾಗಿದ್ರು. ಆದರೆ ಕೊರೋನಾದಿಂದ ದೊಡ್ಡ ಮಟ್ಟದ ಪದ ಗ್ರಹಣ ಕಾರ್ಯಕ್ರಮ ಬಿಟ್ಟು, ಸರಳವಾಗಿ ಕಾರ್ಯಕ್ರಮ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ಬೆಂಗಳೂರು(ಮೇ.28): ಕೊರೋನಾ ಲಾಕ್​​ಡೌನ್ ನಡುವೆಯೂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ. ಜೂನ್ 7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಜವಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಬರೀ ರಾಜ್ಯದ ಆಯ್ದ ಗಣ್ಯರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಮುಖಂಡರು ಆಗಲಿ ಪಕ್ಷದ ಕಾರ್ಯಕರ್ತರಿಗಾಗಲಿ, ಅಭಿಮಾನಿಗಳಿಗೆ ಆಹ್ವಾನ ನೀಡಿಲ್ಲ.

ಯಾಕೆಂದರೆ ಕೊರೋನಾ ಲಾಕ್ ಡೌನ್ ಇರೋದ್ರಿಂದ ಹೆಚ್ಚು ಜನರು ಸೇರಬಹುದು ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಸರಳವಾಗಿ ತನ್ನ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆ ಕಾರ್ಯಕ್ರಮ ನೋಡುವುದಕ್ಕೆ ಅವಕಾಶ ಸಿಗಲಿಲ್ಲ ಎಂದು ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಡಿಕೆಶಿ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ಸರಳ ಸಮಾರಂಭ ‌ವನ್ನು ಕಾರ್ಯಕರ್ತರು, ಅಭಿಮಾನಿಗಳಿಗೆ ತಲುಪಿಸಲು ಡಿಕೆ ಶಿವಕುಮಾರ್ ಪ್ಲಾನ್ ರೂಪಿಸಿದ್ದಾರೆ.. ಅದು ಏನು ಅಂದರೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮ ವನ್ನು ನೇರವಾಗಿ ವೀಕ್ಷಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಎಲ್ ಇಡಿ ಪರದೆಗಳನ್ನು ಹಾಕಲು ಸಿದ್ದತೆ ನಡೆಸಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ಗಳಲ್ಲೂ ಒಂದೊಂದು ಎಲ್ ಇಡಿ ಪರದೆ ಅಳವಡಿಕೆ ಮಾಡಲಾಗುತ್ತೆ.

ಅಲ್ಲಿ ಸಾರ್ವಜನಿಕರು, ಅಭಿಮಾನಿಗಳು ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗುತ್ತೆ. ಗ್ರಾಮ ಪಂಚಾಯತಿ ಕಚೇರಿ ಎದುರಿನ ಮೈದಾನದಲ್ಲಿ ಒಂದು ಸಣ್ಣದಾಗಿ ಪೆಂಡಾಲ್ ಹಾಕಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತೆ. ಕೊರೋನಾ ಹಿನ್ನೆಲೆ ಸೋಷಿಯಲ್ ಡಿಸ್ಟೇನ್ಸ್ ನಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಲು ಅಲ್ಲಿ ವ್ಯವಸ್ಥೆ ಮಾಡಲಾಗುತ್ತೆ.

ಇನ್ನೂ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಡಿಕೆಶಿ ಪದಗ್ರಹಣ ಸಮಾರಂಭವನ್ನು ವೀಡಿಯೋ ಕಾನ್ಪೆರೆನ್ಸ್ ಮೂಲಕ ಅದನ್ನು ನೇರವಾಗಿ ಪ್ರತಿ ಗ್ರಾಮ ಪಂಚಾಯತಿ ಯಲ್ಲಿ ಅಳವಡಿಸಲಾಗಿರುವ ಎಲ್ ಇಡಿ ಪರದೆಗೆ ತಲುಪಿಸಲು ವ್ಯವಸ್ಥೆ ಕೂಡ ಮಾಡಲಾಗಿದೆ.. ಒಟ್ಟಾರೆ ದೇಶಕ್ಕೆ ಮಹಾಮಾರಿ ಕೊರೋನಾದಂತಹ ದೊಡ್ಡ ಖಾಯಿಲೆ ಬಂದಿಲ್ಲ ಎಂದಿದ್ರೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ದೊಡ್ಡ ಮಟ್ಟದಲ್ಲಿ ತನ್ನ ಪದಗ್ರಹಣ ಸಮಾರಂಭ ಮಾಡಿಕೊಳ್ತಿದ್ರು.

ಇದನ್ನೂ ಓದಿ: ಕ್ಯಾಂಟೀನ್​​ಗೆ ಇಂದಿರಾ ಗಾಂಧಿ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಲಿಲ್ಲವೇ? - ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಬೆಂಗಳೂರಿಗೆ ಕರೆಸಿ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡೋದ್ರ ಮೂಲಕ ಲಕ್ಷಾಂತರ ಕಾರ್ಯಕರ್ತರ ಮುಂದೆ ಅಧಿಕಾರ ಸ್ವೀಕಾರ ಮಾಡಿಕೊಳ್ಳಲು ಮುಂದಾಗಿದ್ರು. ಆದರೆ ಕೊರೋನಾದಿಂದ ದೊಡ್ಡ ಮಟ್ಟದ ಪದ ಗ್ರಹಣ ಕಾರ್ಯಕ್ರಮ ಬಿಟ್ಟು, ಸರಳವಾಗಿ ಕಾರ್ಯಕ್ರಮ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಈಗಾಗಲೇ ಪದಗ್ರಹಣ ಸಿದ್ದತೆ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಜೊತೆ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ‌ಸಭೆಯಲ್ಲಿ ತನ್ನ ಪದಗ್ರಹಣ ಕಾರ್ಯಕ್ರಮ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ತನ್ನ ಪದಗ್ರಹಣ ಕಾರ್ಯಕ್ರಮ‌ ಜನರಿಗೆ ತಲುಪಿಸುವ ಜವಬ್ದಾರಿ ನಿಮ್ಮದು ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆಯೂ ಸೂಚನೆ ಕೊಟ್ಟಿದ್ದಾರೆ.

ಇದೀಗ ಡಿಕೆಶಿ ಸೂಚನೆ ಯಿಂದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಗಳು ಸ್ಥಳೀಯ ಮಟ್ಟದಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ವನ್ನು ತಲುಪಿಸಲು ಎಲ್ಲಾ ರೀತಿಯಲ್ಲೂ ಸಿದ್ದತೆ ನಡೆಸುತ್ತಿದ್ದಾರೆ..

*ಪದಗ್ರಹಣ ಸಮಾರಂಭದ ಮೂಲಕ ಕಾರ್ಯಕರ್ತರಿಗೆ ಡಿಕೆಶಿ ಸಂದೇಶ*

ವಿಜೃಂಭಣೆಯಿಂದ ಅಲ್ಲದೆ ಇದ್ರು ಡಿಕೆಶಿ ಸರಳವಾಗಿ ತನ್ನ ಪದಗ್ರಹಣ ಕಾರ್ಯಕ್ರಮ ವನ್ನು ಮಾಡಿಕೊಳ್ಳುತ್ತಿದ್ದಾರೆ. ವೀಡಿಯೋ ಕಾನ್ಪೆರೆನ್ಸ್ ಮೂಲಕ ತನ್ನ ಕಾರ್ಯಕ್ರಮ ವನ್ನು ಜನರಿಗೆ ತಲುಪಿಸಿ, ಅಭಿಮಾನಿಗಳಿಗೂ ಕಾರ್ಯಕರ್ತರಿಗೂ ಡಿಕೆಶಿ ಸಂದೇಶ ತಲುಪಿಸಲಿದ್ದಾರೆ.

ಕಾಂಗ್ರೆಸ್ ನಲ್ಲಿ ಸಾಮಾನ್ಯವಾಗಿ ಪಕ್ಷದ ಅಧ್ಯಕ್ಷರಾದವರು ಮುಂದಿನ ಚುನಾವಣೆಯಲ್ಲಿ ಸಿಎಂ ಅಂತಾ ಸಂಪ್ರದಾಯ ಇದೆ, ಅದರಂತೆ ಡಿಕೆಶಿ ಇವಾಗ ಪಕ್ಷದ ಜವಬ್ದಾರಿ ವಹಿಸಿಕೊಂಡು ಮುಂದೆ ರಾಜ್ಯ ದ ಸಿಎಂ ಆಗುವ ಕನಸ್ಸು ಕಂಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವತ್ತು ಪಕ್ಷದ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಳ್ಳೋದ್ರ ಮೂಲಕ ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರ ತರಲು ಪ್ರಯತ್ನ ಮಾಡೋಣ ಎಂದು ಸಂದೇಶ ಕೊಡಲಿದ್ದಾರೆ..

ಡಿಕೆಶಿಯವರ ಈ ಸಂದೇಶ ಪಕ್ಷದ ಕಚೇರಿಯಲಿ ಕುಳಿತು ನೇರವಾಗಿ ನೋಡಲು ಸಾಧ್ಯವಾಗದೆ ಇದ್ರೂ  ವೀಡಿಯೋ ಮೂಲಕ ಅದೇ ಸಮಯದಲ್ಲಿ ವೀಕ್ಷಿಸುವ ಅವಕಾಶ ಇದೀಗ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರಿಗೆ ಸಿಕ್ಕಿದಂತಾಗಿದೆ.
First published: