• Home
  • »
  • News
  • »
  • coronavirus-latest-news
  • »
  • ಆರ್. ಅಶೋಕ್ ಒಬ್ಬ ನಕಲಿ ನಾಯಕ; ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಫ್ಯಾನ್ಸ್ ಗುಟುರು

ಆರ್. ಅಶೋಕ್ ಒಬ್ಬ ನಕಲಿ ನಾಯಕ; ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಫ್ಯಾನ್ಸ್ ಗುಟುರು

ಡಿಕೆ ಶಿವಕುಮಾರ್​ -ಆರ್ ಅಶೋಕ್​

ಡಿಕೆ ಶಿವಕುಮಾರ್​ -ಆರ್ ಅಶೋಕ್​

DK Shivakumar: ವಲಸೆ ಕಾರ್ಮಿಕರು ಕಷ್ಟದಲ್ಲಿದ್ದಾಗ ಇವರು ಎಲ್ಲಿದ್ದರು? ಈಗ ಒಬ್ಬರು ಸಹಾಯ ಮಾಡಿದ ತಕ್ಷಣ ಟೀಕೆ ಮಾಡೋಕೆ ಬಂದಿದ್ದಾರೆಂದು ಆರ್.ಅಶೋಕ್ ವಿರುದ್ಧ ರಾಮನಗರ ಜಿಲ್ಲೆಯಲ್ಲಿ ಡಿಕೆಶಿ ಫ್ಯಾನ್ಸ್ ಗುಡುಗಿದ್ದಾರೆ.

  • Share this:

    ರಾಮನಗರ: ಕಾರ್ಮಿಕರನ್ನು ಉಚಿತವಾಗಿ ಸಾಗಿಸಲು ಕೆಎಸ್ಸಾರ್ಟಿಸಿಗೆ ಡಿಕೆ ಶಿವಕುಮಾರ್ ಕೊಟ್ಟಿರುವ ಚೆಕ್ ನಕಲಿ ಎಂದು ಆರ್. ಅಶೋಕ್ ಮಾಡಿದ ಆರೋಪ ಇದೀಗ ಡಿಕೆಶಿ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿದೆ. ಆರ್. ಅಶೋಕ್ ನಕಲಿ ನಾಯಕ ಎಂದು ಡಿಕೆಶಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.


    ಏನಿದು ಚೆಕ್ ಗಲಾಟೆ?


    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇದ್ದ ಉತ್ತರ ಕರ್ನಾಟಕ ಹಾಗೂ ಇತರೆ ಭಾಗದ ವಲಸೆ ಕಾರ್ಮಿಕರನ್ನ ಅವರ ಊರುಗಳಿಗೆ ಕಳುಹಿಸಲು ರಾಜ್ಯ ಸರ್ಕಾರ KSRTC ಬಸ್ ಗಳನ್ನ ನಿಯೋಜನೆ ಮಾಡಿತ್ತು. ಆದರೆ ಕಾರ್ಮಿಕರು ಅವರ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಎಂದಿನ ದರಕ್ಕಿಂತ ದುಪ್ಪಟ್ಟು ದರವನ್ನ ಕೊಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಕ್ರಮವನ್ನು ರಾಜ್ಯ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರತರವಾಗಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಜೊತೆಗೆ KPCC ಯಿಂದ 1 ಕೋಟಿ ರೂಪಾಯಿ ಚೆಕ್ ಕೊಟ್ಟು ವಲಸೆ ಕಾರ್ಮಿಕರ ಬಸ್ ದರವನ್ನ KPCC ಭರಿಸಲಿದೆ ಎಂದು ರಾಜ್ಯ KSRTC ಎಂ.ಡಿ ಗೆ ಚೆಕ್ ಕಳುಹಿಸಿದ್ದರು. ಆದರೆ ನಂತರ ಚೆಕ್ ಪಡೆಯಲು KSRTC ಎಂ.ಡಿ ನಿರಾಕರಣೆ ಮಾಡಿದರು. ರಾಜ್ಯ ಸರ್ಕಾರ ಕೂಡ ಅವರ ಊರುಗಳಿಗೆ ಉಚಿತ ಪ್ರಯಾಣ ಮಾಡಲು ವಲಸೆ ಕಾರ್ಮಿಕರಿಗೆ ಅವಕಾಶ ಕಲ್ಪಿಸಿತು.


    ಇದನ್ನೂ ಓದಿ: ಮುಂದುವರೆದ ವಲಸೆ ಕಾರ್ಮಿಕರ ಪ್ರಯಾಣ; ಮೆಜೆಸ್ಟಿಕ್‌ನಲ್ಲಿ ಜನ ಜಂಗುಳಿ, ಬೆಂಗಳೂರು ಖಾಲಿ ಖಾಲಿ!


    ಆದರೆ ಡಿ.ಕೆ. ಶಿವಕುಮಾರ್ ಕೊಟ್ಟಿರುವ ಚೆಕ್ ನಕಲಿ ಎಂದು ರಾಜ್ಯ ಬಿಜೆಪಿ ಸರ್ಕಾರದ ಕಂದಾಯ ಸಚಿವ ಆರ್. ಅಶೋಕ್ ಕುಟುಕಿದ್ದರು. ಇದು ಕನಕಪುರ ಬಂಡೆಯ ಅಭಿಮಾನಿಗಳನ್ನ ಕೆಣಕಿದಂತಾಗಿದೆ. ರಾಮನಗರ ಜಿಲ್ಲೆಯ ಡಿಕೆಶಿ ಬಾಯ್ಸ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಡಿಕೆಶಿ ಬೆಂಬಲಿಗರು ಆರ್. ಅಶೋಕ್ ವಿರುದ್ಧ ಸಮರ ಸಾರಿದ್ದಾರೆ.



    ಆರ್. ಅಶೋಕ್ ಒಬ್ಬ ನಕಲಿ ನಾಯಕ. ಕೈಯಿಂದ ಒಂದು ನಯಾಪೈಸೆ ಕೊಡಲು ಸಾಧ್ಯವಿಲ್ಲ. ಆದರೆ, ಕೊಟ್ಟವರ ಬಗ್ಗೆಯೇ ಟೀಕೆ ಮಾಡ್ತಾರೆಂದು ಡಿಕೆಶಿ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.


    ರಾಜ್ಯದಲ್ಲಿ ಲಾಕ್​ಡೌನ್ ಇರುವ ಕಾರಣ KPCC ಸ್ಥಾನದ ಅಧಿಕಾರ ಹಸ್ತಾಂತರ ಇನ್ನೂ ಆಗಿಲ್ಲ. ಹಾಗಾಗಿ ಚೆಕ್​ನಲ್ಲಿ ಹಿಂದಿನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ಸಹಿ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು, ಕೊಟ್ಟಿರುವ ಚೆಕ್ ನಕಲಿ ಎಂದು ಆರ್. ಅಶೋಕ್ ಟೀಕೆ ಮಾಡ್ತಿದ್ದಾರೆ. ಆದರೆ ವಲಸೆ ಕಾರ್ಮಿಕರು ಕಷ್ಟದಲ್ಲಿದ್ದಾಗ ಇವರು ಎಲ್ಲಿದ್ದರು? ಈಗ ಒಬ್ಬರು ಸಹಾಯ ಮಾಡಿದ ತಕ್ಷಣ ಟೀಕೆ ಮಾಡೋಕೆ ಬಂದಿದ್ದಾರೆಂದು ಆರ್.ಅಶೋಕ್ ವಿರುದ್ಧ ರಾಮನಗರ ಜಿಲ್ಲೆಯಲ್ಲಿ ಡಿಕೆಶಿ ಫ್ಯಾನ್ಸ್ ಗುಡುಗಿದ್ದಾರೆ.


    ವರದಿ: ಎ.ಟಿ. ವೆಂಕಟೇಶ್


    Published by:Vijayasarthy SN
    First published: