HOME » NEWS » Coronavirus-latest-news » DK SHIVAKUMAR INAUGURATES PROGRAM TO DISTRIBUTE VEGETALES AND RATIONS TO 50000 POOR FAMILIES ACROSS MALUR SNVS

ಮಾಲೂರಿನ ಜನರಿಗೆ ತರಕಾರಿ, ದಿನಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ; ಶಾಸಕ ನಂಜೇಗೌಡರ ಮೇಲೆ ಡಿಕೆಶಿ ರೇಗಿದ್ದು ಯಾಕೆ?

ದಿನಸಿ ವಿತರಿಸುವ ಉದ್ಘಾಟನಾ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ನಂಜೇಗೌಡರು ಯೋಜಿಸಿದ್ದರು. ಈ ಸುದ್ದಿ ತಿಳಿದ ಡಿಕೆ ಶಿವಕುಮಾರ್ ಅವರು ಜನರನ್ನು ಸೇರಿಸಬೇಡಿ ಎಂದು ಶಾಸಕರಿಗೆ ತಿಳಿಹೇಳಿದರಂತೆ.

news18-kannada
Updated:April 16, 2020, 2:06 PM IST
ಮಾಲೂರಿನ ಜನರಿಗೆ ತರಕಾರಿ, ದಿನಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ; ಶಾಸಕ ನಂಜೇಗೌಡರ ಮೇಲೆ ಡಿಕೆಶಿ ರೇಗಿದ್ದು ಯಾಕೆ?
ಡಿಕೆ ಶಿವಕುಮಾರ್
  • Share this:
ಬೆಂಗಳೂರು/ಕೋಲಾರ(ಏ. 16): ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೋಲಾರದ ಮಾಲೂರು ತಾಲೂಕಿನ ಬಡಜನರ ನೆರವಿಗೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಲೂರಿನಾದ್ಯಂತ 50 ಸಾವಿರ ಬಡ ಕುಟುಂಬಗಳಿಗೆ ತರಕಾರಿ ಮತ್ತು ದಿನಸಿ ವಿತರಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರು ಚಾಲನೆ ನೀಡಿದ್ದಾರೆ.

ಇವತ್ತು ಮಾಲೂರಿನ ಕೊಮ್ಮನಹಳ್ಳಿ ಗ್ರಾಮದ ಚನ್ನರಾಯಸ್ವಾಮಿ ದೇಗುಲದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 28 ಗ್ರಾಮ ಪಂಚಾಯಿತಿಗಳಿಗೆ ತರಕಾರಿ, ದಿನಸಿ ಕೊಂಡೊಯ್ಯುವ ವಾಹನಗಳಿಗೆ ಪೂಜೆ ಕೂಡ ಮಾಡಲಾಯಿತು. ಡಿಕೆ ಶಿವಕುಮಾರ್ ಜೊತೆ ಮಾಜಿ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಶಾಸಕ ಕೆ.ವೈ. ನಂಜೇಗೌಡ ಮೊದಲಾದವರಿದ್ದರು. ಕಾರ್ಯಕ್ರಮ ಉದ್ಘಾಟನೆಗೆ ಬಂದ ಡಿಕೆ ಶಿವಕುಮಾರ್ ಅವರಿಗೆ ಯುವತಿಯರು ಆರತಿ ಬೆಳಗೆ ಸ್ವಾಗತ ಕೋರಿದರು.

ಇದನ್ನೂ ಓದಿ: COVID-19: ಸಾವಿನ ದವಡೆಯಿಂದ ಪಾರಾದ 106 ವರ್ಷದ ಬ್ರಿಟನ್ ಮಹಿಳೆ; ಆಕೆಯ ಆರೋಗ್ಯ ಗುಟ್ಟೇನು?

ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ ಅವರು ಇದೇ ಕೊಮ್ಮನಹಳ್ಳಿ ಗ್ರಾಮದವರೇ ಆಗಿದ್ಧಾರೆ. ಆದರೆ, ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಡಿಕೆ ಶಿವಕುಮಾರ್ ಅವರು ಮಾಲೂರು ಶಾಸಕರನ್ನು ಎಚ್ಚರಿಸಿದ ಘಟನೆ ನಡೆಯಿತು. ದಿನಸಿ ವಿತರಿಸುವ ಉದ್ಘಾಟನಾ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ನಂಜೇಗೌಡರು ಯೋಜಿಸಿದ್ದರು. ಈ ಸುದ್ದಿ ತಿಳಿದ ಡಿಕೆ ಶಿವಕುಮಾರ್ ಅವರು ಜನರನ್ನು ಸೇರಿಸಬೇಡಿ ಎಂದು ಶಾಸಕರಿಗೆ ತಿಳಿಹೇಳಿದರಂತೆ.

ಕೊರೋನಾ ಸೋಂಕು ಹರಡುವ ಭೀತಿ ಇದೆ. ಸುಮ್ಮನೆ ಜನರನ್ನು ಸೇರಿಸಿದರೆ ಅಪಾಯ ಆಗಬಹುದು. ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸುವುದು ಕಷ್ಟವಾಗುತ್ತದೆ. ಜನರನ್ನು ಸೇರಿಸಿ ನಾನು ದಿನಸಿ ಹಂಚಿದರೆ ಅಪಕೀರ್ತಿ ಪಡೆಯಬೇಕಾಗುತ್ತದೆ. ಯಾವುದೇ ಕಾರಣಕ್ಕೆ ಹೆಚ್ಚು ಜನರನ್ನು ಕಾರ್ಯಕ್ರಮಕ್ಕೆ ಸೇರಿಸಬೇಡಿ. ಸಾಮಾಜಿಕ ಅಂತರ ಪಾಲನೆಗೆ ಕ್ರಮ ಕೈಗೊಳ್ಳಿ ಎಂದು ಕೆ.ವೈ. ನಂಜೇಗೌಡ ಅವರಿಗೆ ಡಿಕೆಶಿ ಸೂಚಿಸಿದರು ಎಂದು ಮೂಲಗಳು ನ್ಯೂಸ್18 ಕನ್ನಡಕ್ಕೆ ತಿಳಿಸಿವೆ.

ವರದಿ: ಚಿದಾನಂದ ಪಟೇಲ್ / ರಘುರಾಜ್

Youtube Video
First published: April 16, 2020, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories