HOME » NEWS » Coronavirus-latest-news » DK SHIVAKUMAR CALLED EMERGENCY MEETING TO DISCUSS ABOUT CORONAVIRUS IN KANAKAPURA GNR

ಕನಕಪುರದಲ್ಲಿ ತೀವ್ರಗೊಂಡ ಕೋವಿಡ್​​-19: ಇಂದು ಸ್ಥಳೀಯ ಮುಖಂಡರ ತುರ್ತು ಸಭೆ ಕರೆದ ಡಿಕೆ ಬ್ರದರ್ಸ್​

ಕನಕಪುರದ ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ನಾನಾ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.

news18-kannada
Updated:June 21, 2020, 1:18 PM IST
ಕನಕಪುರದಲ್ಲಿ ತೀವ್ರಗೊಂಡ ಕೋವಿಡ್​​-19: ಇಂದು ಸ್ಥಳೀಯ ಮುಖಂಡರ ತುರ್ತು ಸಭೆ ಕರೆದ ಡಿಕೆ ಬ್ರದರ್ಸ್​
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು(ಜೂ.21): ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂದು ಮಧ್ಯಾಹ್ನ 2.30ಕ್ಕೆ ಕನಕಪುರ ಟೌನ್ ಮುನಿಷಿಪಾಲಿಟಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕರಾದ ಡಿ.ಕೆ ಶಿವಕುಮಾರ್​​ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಂಸದ ಡಿ.ಕೆ ಸುರೇಶ್​ ಕೂಡ ಭಾಗಿಯಾಗಲಿದ್ದಾರೆ.

ಇನ್ನು, ಕನಕಪುರದಲ್ಲಿ 25  ಕೊರೋನಾ ಪಾಸಿಟಿವ್ ಕೇಸ್  ಕಂಡುಬಂದಿದೆ. ಸೊಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಕೂಡ ಮಾಡಲಾಗಿದೆ. ಹೀಗಿದ್ದರೂ ಕೊರೋನಾ ಸೋಂಕು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಕೋವಿಡ್​​-19 ನಿಯಂತ್ರಣಕ್ಕೆ ಪರಿಹಾರೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಲು ಡಿಕೆಶಿ ಬ್ರದರ್ಸ್​ ಸಭೆ ನಡೆಸುತ್ತಿದ್ಧಾರೆ.

ಕನಕಪುರದ ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ನಾನಾ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಪೊಲೀಸರನ್ನೂ ಬಿಡದೆ ಕಾಡುತ್ತಿದೆ ಕೊರೋನಾ: ಎಚ್ಚೆತ್ತ ಕಮೀಷನರ್ ಭಾಸ್ಕರ್​​ ರಾವ್​​​​ ಠಾಣೆಗಳಿಗೆ ಹತ್ತಾರು ಸೂಚನೆ ರವಾನೆ

ಈ ಸಂಬಂಧ ನ್ಯೂಸ್​​-18 ಕನ್ನಡದೊಂದಿಗೆ ಮಾತಾಡಿದ ಸಂಸದ ಡಿ.ಕೆ ಸುರೇಶ್​​​, ಕನಕಪುರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಡಾಕ್ಟರ್​​ ಮತ್ತು ಬಟ್ಟೆ ವ್ಯಾಪರಿಯೋರ್ವನಿಂದ ಕೊರೋನಾ ಸೋಂಕು ಹರಡಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದೇವೆ ಎಂದರು.
First published: June 21, 2020, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories