HOME » NEWS » Coronavirus-latest-news » DK SHIVAKUMAR ANGRY ON CM BS YEDIYURAPPA AND PM NARENDRA MODI AFTER KARNATAKA CORONAVIRUS CASES RISES SCT

DK Shivakumar: ಕೊರೋನಾದಿಂದ ಜನರನ್ನು ದೇವರೇ ಕಾಪಾಡಬೇಕು; ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಲೇವಡಿ

Karnataka Coronavirus Updates: ಈ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ಇನ್ನು, ಜನರನ್ನು ದೇವರೇ ಕಾಪಾಡಬೇಕು ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

news18-kannada
Updated:April 21, 2021, 12:03 PM IST
DK Shivakumar: ಕೊರೋನಾದಿಂದ ಜನರನ್ನು ದೇವರೇ ಕಾಪಾಡಬೇಕು; ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಲೇವಡಿ
ಡಿಕೆ ಶಿವಕುಮಾರ್.
  • Share this:
ಬೆಂಗಳೂರು (ಏ. 21): ಕರ್ನಾಟಕದಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ. ನಾವು ಕೊರೋನಾ ವಿಷಯದಲ್ಲಿ ರಾಜಕಾರಣ ಮಾಡಬಾರದು ಅಂತ ಸುಮ್ಮನೆ ಇದ್ದೇವೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ಇನ್ನು, ಜನರನ್ನು ದೇವರೇ ಕಾಪಾಡಬೇಕು ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.

ಕೊರೋನಾ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ದೇವರೇ ಕಾಪಾಡಬೇಕು. ಸರ್ಕಾರ ಏನೂ ‌ಮಾಡುತ್ತಿಲ್ಲ. ಪ್ರಧಾನಿ ಮೋದಿಯವರು ತಮ್ಮ ದೊಡ್ಡಸ್ಥಿಕೆ ತೋರಿಸುವುದಕ್ಕೆ ಹೊರದೇಶಕ್ಕೆ ಔಷಧಿ ಕಳಿಸಿ ನಮ್ಮ ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದಾರೆ. ಮೊದಲು ನಿಮಗೆ ಮತ ನೀಡದವರಿಗೆ ಔಷಧಿ ಕೊಡಿ ಎಂದು ಡಿಕೆಶಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾವು ಸರ್ಕಾರಕ್ಕೆ ನಮ್ಮ ಅಭಿಪ್ರಾಯ ಏನಿತ್ತು ಎಂಬುದನ್ನು ಹೇಳಿದ್ದೆವು. ತಜ್ಞರ ಸಮಿತಿಯ ಅಭಿಪ್ರಾಯದಂತೆ ಹೋಗಬೇಕು, ಲಾಕ್ ಡೌನ್ ಮಾಡಬೇಕು ಎಂಬುದು ಸರ್ಕಾರದ ಚಿಂತನೆ ಆಗಿತ್ತು ಎನಿಸುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಸಲಹೆಯಂತೆ ಅವರು ಲಾಕ್ ಡೌನ್ ಮಾಡಿಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ನಾನು ನಿನ್ನೆ ಹೇಳಿದ್ದೇನೆ. ಸರ್ಕಾರ ವಿಫಲವಾಗಿರುವುದಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳೇ ಸಾಕ್ಷಿ ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾದಿಂದ ಸತ್ತವರ ಶವ ಸಂಸ್ಕಾರ ಮಾಡಲು ಒಳ್ಳೆ ರೀತಿಯಲ್ಲಿ ವ್ಯವಸ್ಥೆ ಮಾಡಿ. ನಗರದ ಹೊರವಲಯದಲ್ಲಿ 10 ಎಕರೆ ಜಾಗ ನೀಡಿ ಸೌದೆ ವ್ಯವಸ್ಥೆ ಮಾಡಿ. ಕಡೆ ಕ್ಷಣದಲ್ಲಿ ಮೃತಪಟ್ಟವರ ಮುಖವನ್ನು ಸಂಬಂಧಿಕರು ನೋಡಿಕೊಳ್ಳಲಿ. ಕೇಂದ್ರ ಸುರೇಶ್ ಅಂಗಡಿ ಪಾರ್ಥಿವ ಶರೀರವನ್ನು ತರುವುದಕ್ಕೆ ಆಗಿಲ್ಲ. ಮನೆಯವರು ಕೂಡ ಅವರ ಮುಖ ನೋಡದ ಹಾಗೆ ಮಾಡಿಬಿಟ್ಟರು. ರಾಜಕೀಯ ಇಷ್ಟು ದಿನ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಇವತ್ತಿನ ಪರಿಸ್ಥಿತಿ ನೋಡಿ ಮಾತನಾಡಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ಪಿಎಂ ನರೇಂದ್ರ ಮೋದಿ ಮಾಡಿದ್ದು ಭಾಷಣವಲ್ಲ; ಪ್ರವಚನ. ಸರ್ಕಾರದ ವೈಫಲ್ಯಗಳನ್ನು ನಿನ್ನೆ ರಾಜ್ಯಪಾಲರ ಮುಂದೆ ಹೇಳಿದ್ದೆ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಧಾನಿ ಮೋದಿ ಪ್ರವಚನ‌ ಮಾಡಿದ್ದಾರೆ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಾವಣೆ ಮಾಡೋಕೆ‌ ಆಗುತ್ತಾ? ರಾಜ್ಯದಲ್ಲಿ ಬೆಡ್ ಗಳು, ಆಕ್ಸಿಜನ್ ಕೊರತೆ ಸಾಕಷ್ಟು ಕಾಡುತ್ತಿದೆ. ಒಬ್ಬ ಸಚಿವರು ಕೂಡ ಜಿಲ್ಲೆಗಳಿಗೆ ಹೋಗಿ ಕೋವಿಡ್ ಬಗ್ಗೆ ಸಭೆ ಮಾಡಿಲ್ಲ, ಆಸ್ಪತ್ರೆಗೆ ಹೋಗಿ ಜನರ ಸಮಸ್ಯೆ ಕೇಳಿಲ್ಲ. ಅಗತ್ಯ ಸೇವೆಯ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಿಟ್ಟು ಬೇರೆ ಇಲಾಖೆ ಅಧಿಕಾರಿಗಳನ್ನು ಕೋವಿಡ್ ನಿರ್ವಹಣೆಗೆ ಬಳಕೆ‌ ಮಾಡೋಕೆ ಸರ್ಕಾರಕ್ಕೆ ಏನಾಗಿದೆ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
Published by: Sushma Chakre
First published: April 21, 2021, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories