ಕಾರವಾರ(ಏ.02) : ಕಳೆದ ಮೂರು ದಿನದಿಂದ ಭಾರೀ ಚರ್ಚೆಯಲ್ಲಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮಕ್ಕೆ ಹೋಗಿ ಬಂದಿರುವರಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಕೂಡಾ ಇದ್ದಾರೆ. ರಾಜ್ಯದ ವಿವಿದ ಜಿಲ್ಲೆಯ ಜನರನ್ನ ಕಾಡಿದ ಆತಂಕ ಈಗ ಉತ್ತರ ಕನ್ನಡ ಜಿಲ್ಲೆಯ ಜನರಿಗೂ ಆವರಿಸಿದೆ.
ಹೌದು ರಾಜ್ಯದಿಂದ ದೆಹಲಿ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋದವರಲ್ಲಿ ಉತ್ತರ ಕನ್ನಡ ಜಿಲ್ಲೆಯ 8 ಜನ ಇದ್ದಾರೆ ಎಂಬ ಖಚಿತ ಮಾಹಿತಿ ಪೋಲಿಸ್ ಇಲಾಖೆಯ ತನಿಖೆಯಿಂದ ಹೊರಬಿದ್ದಿದೆ. ಈ ಎಂಟು ಜನರ ಪ್ರಯಾಣದ ಇತಿಹಾಸ ನೋಡಿದ್ರೆ ಉತ್ತರ ಕನ್ನಡ ಜಿಲ್ಲೆ ಅರ್ಧ ಭಾಗ ಸುತ್ತಿ ಗೋವಾ ಗಡಿ ಭಾಗ ಕೂಡಾ ಸುತ್ತಾಡಿದ್ದಾರೆ. ಈಗ ಇವರನ್ನ ಹಿಡಿದು ತಂದು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಈ ಎಂಟು ಮಂದಿಯ ಪೈಕಿ ಓರ್ವ ಗೋವಾದಲ್ಲೆ ಇಳಿದುಕೊಂಡಿದ್ದಾನೆ. ಈ ಎಂಟು ಜನ ಕೂಡಾ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯವರಾಗಿದ್ದಾರೆ. ಈಗಾಗಲೇ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ರಣಕೇಕೆ ಶುರುವಾಗಿದ್ದು, ಎಂಟು ಕೊರೋನಾ ಸೋಂಕಿತರು ಪತ್ತೆ ಆಗಿದ್ದಾರೆ. ಈ ಮದ್ಯೆ ನಿಜಾಮುದ್ದೀನ್ ಸಭೆಗೆ ಹೋಗಿ ಬಂದಿರುವರು ಜಿಲ್ಲೆಯವರು ಇರುವುದರಿಂದ ಮತ್ತಷ್ಟು ತಲೆ ನೋವು ತಂದಿದೆ.
ಇನ್ನೂ ಇವತ್ತಿಗೆ ದೇಶ ಲಾಕ್ ಡೌನ್ ಆಗಿ ಒಂದು ವಾರ ಕಳೆದಿದೆ. ಲಾಕ್ ಡೌನ್ ಉಲ್ಲಂಘನೆಯ 10 ಪ್ರಕರಣ ಗಳು ದಾಖಲಾಗಿವೆ. ಜಿಲ್ಲೆಯ ಭಟ್ಕಳ, ಹಳಿಯಾಳ, ದಾಂಡೇಲಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಹಳಿಯಾಳದಲ್ಲಿ ಲಾಕ್ ಡೌನ್ ಇದ್ದರೂ ಕೂಡಾ ನಮಾಜ್ ನಲ್ಲಿ ಭಾಗಿಯಾದವರ ಮೇಲೆ ಎಪ್ಐಆರ್ ದಾಖಲಿಸಲಾಗಿದೆ. ಡ್ರೋನ್ ಕ್ಯಾಮೆರಾದ ಮೂಲಕವೂ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು ಕರ್ತವ್ಯದಲ್ಲಿ ತಲ್ಲಿನರಾಗಿದ್ದಾರೆ.
ಇದನ್ನೂ ಓದಿ : ಕೊರೋನಾ ಕರಾಳತೆ - ಸೋಂಕಿತರ ಸೇವೆಗಾಗಿ ಮದುವೆಯನ್ನೇ ಮುಂದೂಡಿದ ದಿಟ್ಟ ವೈದ್ಯೆ
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಜಾಮುದ್ದೀನ್ ಘಟನೆ ಆತಂಕ ಹುಟ್ಟಿಸಿದೆ. ಇನ್ನೊಂದೆಡೆ ಭಟ್ಕಳದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವುದು ಕೂಡಾ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ. ಈ ಮಧ್ಯೆ ಪೊಲೀಸ್ ಇಲಾಖೆ ಕೂಡಾ ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ