news18-kannada Updated:April 15, 2020, 8:46 PM IST
ಚಿತ್ರ ಬಿಡಿಸುತ್ತಿರುವ ಮಕ್ಕಳು
ಕಾರವಾರ(ಏ.15): ಲಾಕ್ ಡೌನ್ ಮುಗಿಯಿತು ಎನ್ನುವಾಗಲೇ ಎರಡನೇ ಹಂತದ ಲಾಕ್ ಡೌನ್ ಘೋಷಣೆಯಾಗಿದೆ. ಈ ಮದ್ಯೆ ಮತ್ತೆ ಜನ ಆತಂಕಕ್ಕೀಡಾಗಿದ್ದು, ದುಡಿಯುವ ಕೈಗಳು ಮತ್ತೆ ಕುಗ್ಗಿವೆ. ಒಂದಲ್ಲೊಂದು ರೀತಿಯಲ್ಲಿ ಸಂಸಾರದ ಬಾರವನ್ನ ಹೊತ್ತು ಚಿಂತಾಕ್ರಾಂತರಾಗಿರುವ ಕುಟುಂಬಕ್ಕೆ ಮನೆಯಲ್ಲಿದ್ದು ಒಂದಿಷ್ಟು ಸಮಯ ಬೇರೆಡೆ ಸೆಳೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮನೆಯಿಂದಲೇ ವಿವಿಧ ಸ್ಪರ್ಧೆ ಏರ್ಪಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯವರು ಉತ್ತರ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರವಾರ ನಗರ ವ್ಯಾಪ್ತಿಯ ಜನರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪದ್ಯ ರಚನೆ ಹೀಗೆ ವಿವಿದ ಕ್ರೀಯಾತ್ಮಕ ಸ್ಪರ್ಧೆಗಳನ್ನ ಏರ್ಪಡಿಸಿದ್ದಾರೆ. ಲಾಕ್ ಡೌನ್ ನಿಂದ ಹತ್ತು ಹಲವು ಸಮಸ್ಯೆ ಎದುರಿಸುತ್ತಿರುವ ಮನಸ್ಸನ್ನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಇಂತ ಸ್ಪರ್ಧೆ ಏರ್ಪಡಿಸಲಾಗಿದ್ದು ನಗದು ಬಹುಮಾನಗಳನ್ನ ಕೂಡಾ ಇಡಲಾಗಿದೆ. ಈ ಸ್ಪರ್ಧೆ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿದ್ದು ಪಾಲಕರು ಸಹಾಯ ಮಾಡಬಹುದಾಗಿದೆ.
ಈಗಾಗಲೆ ಶಾಲೆ, ಟ್ಯೂಷನ್ ಇಲ್ಲದೆ ಮಕ್ಕಳು ಮನೆಯಲ್ಲೆ ಇದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಇದು ರಜಾ ದಿನವಾಗಿರುವುದರಿಂದ ಸಂಬಂಧಿಕರ ಮನೆಗೆ ತೆರಳುವವರು ಮನೆಯ ನಾಲ್ಜು ಗೋಡೆಯ ಮಧ್ಯೆ ಇದ್ದು, ಬೇಸರದಿಂದ ಇದ್ದಾರೆ. ಇಂತಹ ಮನಸ್ಸಿಗೆ ಒಂದಿಷ್ಟು ಕೆಲಸ ಕೊಡುವ ನಿಟ್ಟಿನಲ್ಲಿ ಮತ್ತು ಕ್ರೀಯಾತ್ಮಕ ಪ್ರತಿಭೆಗಳು ಹೊರಹುಮ್ಮುವ ನಿಟ್ಟಿನಲ್ಲಿ ಇಂತ ಸ್ಪರ್ಧೆಯನ್ನ ಏರ್ಪಡಿಸಿ ಮಕ್ಕಳ ಜೊತೆಗೆ ಪಾಲಕರಿಗೂ ಆಸಕ್ತಿ ತರುವ ಉದ್ದೇಶ ಇದಾಗಿದೆ.
ಇನ್ನೂ ಪ್ರಬಂಧ ಸ್ಪರ್ಧೆಯಲ್ಲಿ ಲಾಕ್ ಡೌನ್ ವರ್ಸಸ್ ದೈನಂದಿನ ಚಟುವಟಿಕೆಯ ವಿಷಯ ಮತ್ತು ಪ್ರವಾಸೋದ್ಯದಲ್ಲಿ ಯಾವೆಲ್ಲ ಬದಲಾವಣೆ ತರಬೇಕು ಹೀಗೆ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿಷಯಗಳನ್ನ ನೀಡಲಾಗಿದೆ.
ಇದನ್ನೂ ಓದಿ :
ಏ.17ಕ್ಕೆ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್ -ರೇವತಿ ಸರಳ ವಿವಾಹ : ಕುಮಾರಸ್ವಾಮಿ
ಲಾಕ್ ಡೌನ್ ನಿಂದ ದುಡಿತವಿಲ್ಲದ ಮನಸ್ಸು ಚಿಂತಿತವಾಗುತ್ತದೆ. ಆ ಮನಸ್ಸನ್ನ ಒಳ್ಳೆಯ ವಾತಾವರಣದೆಡೆ ಕರದೊಯ್ದು ಒತ್ತಡದ ಮನಸ್ಸಿಗೆ ಒಂದಿಷ್ಟು ನೆಮ್ಮದಿ ನೀಡುವದಾಗಿದೆ. ಈ ಸ್ಪರ್ಧೆಯ ಉದ್ದೇಶ. ಇಂತ ಸ್ಪರ್ಧೆಯಿಂದ ಮಕ್ಕಳೊಂದಿಗೆ ಪಾಲಕರಿಗೂ ಒಂದಿಷ್ಟು ಕಾಲಹರಣ ಆಗುತ್ತಿದೆ ಅಂತಾರೆ ಪಾಲಕರು ಹಾಗೂ ಮಕ್ಕಳು.
ಒಟ್ಟಾರೆ ಚಿಂತಿತ ಮನಸ್ಸಿಗೆ ಒಂದಿಷ್ಟು ನೆಮ್ಮದಿ ನೀಡಿ ಕ್ರೀಯಾತ್ಮಕ ಪ್ರತಿಭೆ ಹೊರಹುಮ್ಮುವ ನಿಟ್ಟಿನಲ್ಲಿ ಕಾರವಾರದ ನಗರಸಭೆ ನಡೆಸುತ್ತಿರುವ ಈ ಸ್ಪರ್ಧೆ ಉತ್ತಮ ಬೆಳವಣಿಗೆಯಾಗಿದೆ.
(ವರದಿ : ದರ್ಶನ್ ನಾಯ್ಕ)
First published:
April 15, 2020, 8:33 PM IST