HOME » NEWS » Coronavirus-latest-news » DISTRICT ADMINISTRATION CIRCUS TO CONTROL CORONAVIRUS CASES IN DHARAWAD GNR

ಧಾರವಾಡದಲ್ಲಿ ಕೊರೋನಾ ರಣಕೇಕೆ: ಸೋಂಕು ತಹಬದಿಗೆ ತರಲು ಜಿಲ್ಲಾಡಳಿತ ಹರಸಾಹಸ

ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಯಾರೂ ಉಲ್ಲಂಘಿಸಬಾರದು. ಜಾರಿಯಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ‌ ಎಚ್ಚರಿಕೆ ನೀಡಿವೆ.


Updated:August 2, 2020, 5:08 PM IST
ಧಾರವಾಡದಲ್ಲಿ ಕೊರೋನಾ ರಣಕೇಕೆ: ಸೋಂಕು ತಹಬದಿಗೆ ತರಲು ಜಿಲ್ಲಾಡಳಿತ ಹರಸಾಹಸ
ಸಾಂದರ್ಭಿಕ ಚಿತ್ರ.
  • Share this:
ಧಾರವಾಡ(ಜು.30): ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ನೂರರಿಂದ ಇನ್ನೂರರವರೆಗೆ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಕೊವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ‌. ಜಿಲ್ಲೆಯಲ್ಲಿನ ಕೋವಿಡ್ ಹರಡುವಿಕೆಯ ಗ್ರೌಂಡ್ ರಿಯಾಲಿಟಿ ಬೆಚ್ಚಿ ಬೀಳಿಸುವಂತಿದೆ.

ಜಿಲ್ಲೆಯಲ್ಲಿ ಮೊದಲ ಕೊರೋನಾ ಪ್ರಕರಣ ದೃಢಪಟ್ಟಿದ್ದು, ಮಾರ್ಚ್ 22ರಂದು. ಆಸ್ಟ್ರೇಲಿಯಾ ಮತ್ತು ದುಬೈ ಪ್ರವಾಸದಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಅದಾದ ನಂತರ ಕೊರೋನಾ ಗ್ರಾಫ್ ಏರುತ್ತಲೆ ಸಾಗಿದ್ದು, ಈಗಾಗಲೇ ಮೂರು ಸಾವಿರದ ಗಡಿ ದಾಟಿದೆ.

ಒಟ್ಟು 109 ಸೋಂಕಿತರು ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕು‌ದಿನೇದಿನೇ ಹೆಚ್ಚುತ್ತಾ ಸಾಗಿರುವ ಕುರಿತು ವಿವರ ಈ ಕೆಳಗಿನಂತಿದೆ. ಇದುವರೆಗೂ ಒಟ್ಟು 3553 ಜನರಲ್ಲಿ ಸೋಂಕು ದೃಢಪಟ್ಟಿದೆ. ಸುಮಾರು 37791 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಇಷ್ಟೊಂದು ತೀವ್ರಗತಿಯಲ್ಲಿ ಹಬ್ಬೋಕೆ ಕೆಲವು ಕಾರಣಗಳನ್ನು ಈ ರೀತಿ ಪಟ್ಟಿ ಮಾಡಬಹುದು.

A) ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಲಿಲ್ಲ.
B) ಜನರು ಸಾಮಾಜಿಕ ಅಂತರ ಮರೆತು ಗುಂಪುಗೂಡುತ್ತಿದ್ದಾರೆ.
C) ಮಾರುಕಟ್ಟೆಗಳಲ್ಲಿ ಜನಜಂಗುಳಿ ನಿಯಂತ್ರಣಕ್ಕೆ ಬಂದಿಲ್ಲ.D) ಸೋಂಕಿತರನ್ನು ಕ್ವಾರಂಟೈನ್ ಮಾಡಲು ವಿಳಂಭವಾಗುತ್ತಿದೆ.
E) ಪ್ರಾಥಮಿಕ ಸಂಪರ್ಕಿತರನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ.
F) ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದ್ದು‌, ಅವರ‌ ಓಡಾಟದಿಂದ ಸೋಂಕು ಹರಡುತ್ತಿದೆ.
G) ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಿಂದ ಹಾಸ್ಪಿಟಲ್ ಕ್ವಾರಂಟೈನ್ ಉದ್ದೇಶಪೂರ್ವಕವಾಗಿ ವಿಳಂಭ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ.
E) ರೋಗ ಲಕ್ಷಣಗಳು ಹೆಚ್ಚಿನ ಸೋಂಕಿತರಲ್ಲಿ ಇಲ್ಲದ ಕಾರಣ ತಕ್ಷಣ ಆಸ್ಪತ್ರೆಗೆ ಬರುತ್ತಿಲ್ಲ, ಇಂತಹವರಿಂದ ಬಹಳಷ್ಟು ಜನರಿಗೆ ವೈರಾಣು ಹರಡುತ್ತಿದೆ.

ಸೋಂಕು ತಡೆಗೆ ಜಿಲ್ಲಾಡಳಿತ‌ ಕೂಡ ಶತಪ್ರಯತ್ನ ನಡೆಸಿದ್ದು, ಕೆಲವು ಉದಾಹರಣೆಗಳು ಇಲ್ಲಿವೆ.

A) ಲಾಕ್‌ಡೌನ್ ನಿಯಮ ಪಾಲಿಸುವಂತೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ.
B) ಕೋವಿಡ್ ಕೇರ್ ಸೆಂಟರ್‌ಗಳು, ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ.
C) ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿ ನಿಗಾ ಇಡಲು ಸಾಕಷ್ಟು ಪರಿಶ್ರಮ ಪಡಲಾಗುತ್ತಿದೆ.
D) ಕೊರೋನಾ ಸೋಂಕಿತರು ಪತ್ತೆಯಾಗುವ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ.

ಅಧಿಕಾರಿಗಳು ಸೀಲ್‌ಡೌನ್‌ ಪ್ರದೇಶದ ಪ್ರಾಥಮಿಕ ಸಂಪರ್ಕ ಹೊಂದಿದವರ ಮಾಹಿತಿ, ಗರ್ಭಿಣಿ, ಬಾಣಂತಿಯರು, ಮಕ್ಕಳು ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ಆರೋಗ್ಯದ ವ್ಯಕ್ತಿಗಳ ಮಾಹಿತಿ ಹೊಂದಿರುತ್ತಾರೆ. ಈ ಕುರಿತು ಆರೋಗ್ಯ ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಪ್ರದೇಶದ ಅಧಿಕಾರಿಯನ್ನು  ಸಂಪರ್ಕಿಸಿ ತಮ್ಮ ತೊಂದರೆ ನಿವೇದಿಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಯಾರೂ ಉಲ್ಲಂಘಿಸಬಾರದು. ಜಾರಿಯಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ‌ ಎಚ್ಚರಿಕೆ ನೀಡಿವೆ.

ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ, ನಿಯಮ ಪಾಲಿಸದೇ ಹೊರಗಡೆ ಅನಗತ್ಯವಾಗಿ ತಿರುಗಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರೇ ಪ್ರತಿನಿತ್ಯ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಕೋವಿಡ್ ಸೋಂಕಿತರನ್ನು ಕ್ವಾರಟೈನ್ ಮಾಡಲು ವಿವಿಧ ಹಂತಗಳನ್ನು ಅನುಸರಿಸಲಾಗುತ್ತಿದೆ.

ಮೊದಲ ಹಂತದಲ್ಲಿ ಸೋಂಕು ಇದ್ದು ಲಕ್ಷಣಗಳು ಕಡಿಮೆ ಇರುವವರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇರಿಸಲಾಗುತ್ತಿದೆ. ಘಂಟಿಕೇರಿ ವಸತಿ ನಿಲಯ, ಬೆಂಗೇರಿ ವಸತಿ ನಿಲಯ, ಸಂಜೀವಿನಿ ಆಯುರ್ವೇದ ಕಾಲೇಜು, ಬಿ.ಡಿ. ಜತ್ತಿ ವಸತಿ ನಿಲಯ, ದೇಶಪಾಂಡೆ ಪ್ರತಿಷ್ಠಾಣದ ಕಟ್ಟಡ ಸೇರಿದಂತೆ ವಿವಿಧ ಹೊಟೆಲ್‌ಗಳಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಎರಡನೇಯ ಹಂತದಲ್ಲಿ ಸೋಂಕು ಇದ್ದು ಕೆಮ್ಮು, ಜ್ವರ, ನೆಗಡಿ ಸೇರಿದಂತೆ ರೋಗ ಲಕ್ಷಣಗಳಿರುವವರನ್ನು ನಿಗದಿತ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಮೂರನೆಯ ಹಂತದಲ್ಲಿ ತೀವ್ರ ಉಸಿರಾಟದ ತೊಂದರೆ ಸೇರಿದಂತೆ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರನ್ನು ಐಸೋಲೇಷನ್ ವಾರ್ಡ್‌ಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.

ಆರಂಭದಲ್ಲಿ ಹುಬ್ಬಳ್ಳಿ - ಧಾರವಾಡ ಅವಳಿ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕೊರೋನಾ ಸೋಂಕು ಈಗ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಕಲಘಟಗಿ, ನವಲಗುಂದ, ಕುಂದಗೋಳ, ಅಳ್ನಾವರ, ಅಣ್ಣಿಗೇರಿ ತಾಲ್ಲೂಕಿನ ನೂರಾರು ಗ್ರಾಮಗಳಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.
Youtube Video

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆಗೈದ ಹೆಂಡತಿ; ಪತ್ನಿ ಸೇರಿ ಏಳು ಮಂದಿ ಬಂಧನ

ಜಿಲ್ಲಾಡಳಿತದ ಜೊತೆಗೆ ತಾಲ್ಲೂಕು ಆಡಳಿತ ಯಂತ್ರವೂ ರೋಗ ನಿಯಂತ್ರಣಕ್ಕೆ ಸಾಕಷ್ಟು ತಲೆ ಕೆಡಿಸಿಕೊಂಡಿದೆ. ಒಟ್ಟಾರೆ ಧಾರವಾಡ ಜಿಲ್ಲೆ ಕೊರೊನಾ ಹಾಟ್‌ಸ್ಪಾಟ್ ಆಗಿದ್ದು ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಅನ್ನೋ ಆತಂಕ ಜನಸಾಮಾನ್ಯರನ್ನು ಕಾಡುತ್ತಿದೆ.
Published by: Ganesh Nachikethu
First published: July 30, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories