ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಸಕ್ರಿಯವಾಗಿರುತ್ತಾರೆ. ಈಗ ಲಾಕ್ಡೌನ್ನಲ್ಲೂ ವರ್ಮಾ ಸಾಕಷ್ಟು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಲಾಕ್ಡೌನ್ನಲ್ಲಿ ರಾಮ್ ಗೋಪಾಲ್ ವರ್ಮಾ ಕೊರೋನಾ ವೈರಸ್ ಕುರಿತಾಗಿ ಒಂದು ಹಾಡು ಬರೆದಿದ್ದಾರೆ. ಆ ಹಾಡನ್ನು ಇಂದು ಬಿಡುಗಡೆ ಮಾಡುವುದಾಗಿ ನಿನ್ನೆಯೇ ಟ್ವೀಟ್ ಮಾಡಿದ್ದರು. ಈ ಹಾಡು ಕೇಳುವವರು ಸ್ಯಾನಿಟೈಸರ್ನಿಂದ ಕೈ ತೊಳೆದುಕೊಂಡು ಕೇಳಿ ಎಂದು ಹ್ಯೂಮರಸ್ ಆಗಿ ಟ್ವೀಟ್ ಮಾಡಿದ್ದಾರೆ.
కరోనా వైరస్ పైన నేనే రాసి,పాడిన “కనిపించని పురుగు” అనే పాటని రేపు బయట పడేయబోతున్నాను...చేతులు కడుక్కొని వినండి.
ಈ ಹಾಡಿನ ಕುರಿತಾಗಿ ಮತ್ತೊಂದು ಟ್ವೀಟ್ ಮಾಡಿರುವ ವರ್ಮಾ ಅವರು, ಹಾಡಿನ ಪ್ರೊಮೊವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿರುವುದಾಗಿ ಬರೆದುಕೊಂಡಿದ್ದಾರೆ. ಸಂಪೂರ್ಣ ಹಾಡು ಇಂದು ಸಂಜೆ 5.30ಕ್ಕೆ ಬಿಡುಗಡೆಯಾಗಲಿದೆ ಎಂದೂ ತಿಳಿಸಿದ್ದಾರೆ.
ಇನ್ನು ಯೂಟ್ಯೂಬ್ನಲ್ಲಿ ರಾಮ್ ಗೋಪಾಲ್ ವರ್ಮಾ ಅವರೇ ಬರೆದು ಹಾಡಿರುವ ಈ ಪ್ರೋಮೊ ಸದ್ಯ ಟ್ವಿಟರ್ ಟ್ರೆಂಡಿಂಗ್ನಲ್ಲಿ 13ನೇ ಸ್ಥಾನದಲ್ಲಿದೆ.
ಇನ್ನು ರಾಮ್ ಗೋಪಾಲ್ ವರ್ಮಾರ ತೆಲುಗು ಹಾಡಿನ ಪ್ರೋಮೊ ನೋಡಿದ ಹಾಗೂ ಕೇಳಿದವರು ಕಮೆಂಟ್ ಮಾಡುತ್ತಿದ್ದಾರೆ. ಕೊರೋನಾ ಮೇಲಿನ ನಿಮ್ಮ ಹಾಡು ಕೇಳಿದರೆ ಸಾಕು ವೈರಸ್ ಸತ್ತು ಹೋಗುತ್ತದೆ ಎಂದು ಕೆಲವರು ಬರೆದರೆ, ಮತ್ತೆ ಕೆಲವರು ನಿಮ್ಮ ಹಾಡು ಕೇಳಿದರೆ ಸಾಕು ವೈರಸ್ ಭಯಪಟ್ಟು ಓಡಿ ಹೋಗುತ್ತದೆ ಎಂದಿದ್ದಾರೆ. ಇನ್ನೂ ಕೆಲವರು ಪೊಲೀಸರ ಕೈಯಲ್ಲಿ ಸಿಕ್ಕಿ ಚಟ್ನಿಯಾದಾಗಲೂ ಇಷ್ಟು ನೋವಾಗಿರಲಿಲ್ಲ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.
![Director Ram Gopal Varma released his song on Corona and its going viral]()
ಯೂಟ್ಯೂಬ್ನಲ್ಲಿ ರಾಮ್ಗೋಪಾಲ್ ಹಾಡಿನ ಪ್ರೋಮೊಗೆ ಬಂದ ಕಮೆಂಟ್ಗಳು
Urvashi Rautela: ಹಾಟ್ ಫೋಟೋಗಳ ಜೊತೆ ಕ್ಯೂಟ್ ಸಂದೇಶ ಕೊಟ್ಟ ಬೋಲ್ಡ್ ನಟಿ ಊರ್ವಶಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ