ಭಾರತೀಯರಿಗೆ ಪುನರ್ಜೀವ ಸಿಗಲಿದೆ; ಕಿರುಚಿತ್ರದ ಮೂಲಕ ಜೀವನ ಮುಗಿದಿಲ್ಲ ಎಂಬ ಸಂದೇಶ

ಒಟ್ಟು 117 ಜನರ ತಂಡವನ್ನು ಕಟ್ಟಿಕೊಂಡು, ಭಾರತ ಸರ್ಕಾರದ ಅನುಮತಿ ಪಡೆದು, ದೇಶದ 14 ರಾಜ್ಯಗಳ ಮೂಲೆ ಮೂಲೆಗೆ 15 ಸದಸ್ಯರ ತಂಡವನ್ನು ಕಳುಹಿಸಿ ಚಿತ್ರೀಕರಣ ಮಾಡಿದ್ದಾರೆ ಭರತ್ ಬಾಲ.

news18-kannada
Updated:June 5, 2020, 11:41 AM IST
ಭಾರತೀಯರಿಗೆ ಪುನರ್ಜೀವ ಸಿಗಲಿದೆ; ಕಿರುಚಿತ್ರದ ಮೂಲಕ ಜೀವನ ಮುಗಿದಿಲ್ಲ ಎಂಬ ಸಂದೇಶ
ಭರತ್ ಬಾಲ, ನಿರ್ದೇಶಕ.
  • Share this:
ಭರತ್ ಬಾಲ ಈ ಹೆಸರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಕಿರು ಚಿತ್ರ, ಸಾಕ್ಷ್ಯ ಚಿತ್ರ, ಕಮರ್ಷಿಯಲ್ಸ್, ಮ್ಯೂಜಿಕ್ ವಿಡಿಯೋಸ್, ಚಲನ ಚಿತ್ರಗಳ ನಿರ್ದೇಶನ, ನಿರ್ಮಾಪಕ ಮಾತ್ರವಲ್ಲದೆ ವಂದೇ ಮಾತರಂ, ಜನ ಗಣ ಮನ ಇಂಕ್ರೆಡಿಬಲ್ ಇಂಡಿಯಾದಿಂದ ಸಾಕಷ್ಟು ಹೆಸರು ಗಳಿಸಿದವರು ಭರತ್ ಬಾಲ. ಸದ್ಯ ಇವರು ಮತ್ತೆ ಸುದ್ದಿಯಲ್ಲಿದ್ದು ‘ಪುನರ್ಜೀವ ಸಿಗಲಿದೆ’ ಎಂಬ ಕಿರು ಚಿತ್ರವನ್ನು ರಾಷ್ಟ್ರ ಮಟ್ಟದಲ್ಲಿ ತಯಾರಿ ಮಾಡಿದ್ದಾರೆ.

9 ವಾರಗಳಿಂದ ಕೊರೋನಾ ಅಟ್ಟಹಾಸಕ್ಕೆ ಕುಗ್ಗಿ ಹೋಗಿರುವ ಭಾರತೀಯರನ್ನ ಪುಟಿದೆಬ್ಬೆಸುವ ಕಿರು ಚಿತ್ರ ‘ಪುನರ್ಜೀವ ಸಿಗಲಿದೆ’. ಕೋವಿಡ್-19 ನಿಂದ ಜೀವನ ಮುಗಿದು ಹೋಗೋವುದಿಲ್ಲ. ಪ್ರತಿಯೊಬ್ಬರಿಗೂ ಜೀವನ ಮತ್ತೆ ಸಿಗುತ್ತದೆ, ಕಂಗಾಲಾಗುವುದು ಬೇಡ ಎನ್ನುವುದು ಈ ಕಿರು ಚಿತ್ರದ ಉದ್ದೇಶ.

Suhana Khan: ಅಮ್ಮನೊಂದಿಗೆ ಬಾಲ್ಕನಿಯಲ್ಲಿ ಕುಳಿತು ಮಳೆಯನ್ನು ಎಂಜಾಯ್​ ಮಾಡಿದ ಸುಹಾನಾ ಖಾನ್​..!

Director Bharat Bala comes up with a documentary, Meendum Ezhuvom, about lockdown
ಚಿತ್ರೀಕರಣದ ಒಂದು ದೃಶ್ಯದ ಫೋಟೋ


ಕಳೆದ ಮಾರ್ಚ್ 24 ರಿಂದ ಭಾರತವಲ್ಲದೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಲಾಕ್ ಡೌನ್ ಹೇರಿಕೆಯಾಗಿದೆ. ಲಾಕ್ ಡೌನ್ ವೇಳೆ ನಿರ್ಜನ ಪ್ರದೇಶ, ಶಾಂತವಾದ ಸ್ಥಳಗಳು, ಮುಚ್ಚಿದ ಅಂಗಡಿಗಳು, ಶಾಲೆ, ಕಾಲೇಜುಗಳು, ಆಫೀಸು, ಮಾಲ್ಸ್ ಹೀಗೆ ಅನೇಕ ಕಾರ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಭರತ್ ಬಾಲ ತಂಡ ಈ ಸಂದರ್ಭವನ್ನು ಸೆರೆ ಹಿಡಿದು ಮುಂದಿನ ಪೀಳಿಗೆಗೆ ತಿಳಿಯುವಂತೆ ಕಿರು ಚಿತ್ರ ತೋರಿಸಲು ಹೊರಟಿದೆ. ಭಾರತದ 1.3 ಬಿಲಿಯನ್ ಜನರ ಬವಣೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ಒಟ್ಟು 117 ಜನರ ತಂಡವನ್ನು ಕಟ್ಟಿಕೊಂಡು, ಭಾರತ ಸರ್ಕಾರದ ಅನುಮತಿ ಪಡೆದು, ದೇಶದ 14 ರಾಜ್ಯಗಳ ಮೂಲೆ ಮೂಲೆಗೆ 15 ಸದಸ್ಯರ ತಂಡವನ್ನು ಕಳುಹಿಸಿ ಚಿತ್ರೀಕರಣ ಮಾಡಿದ್ದಾರೆ ಭರತ್ ಬಾಲ. ಈ ಭೂ ಮಂಡಲದಲ್ಲಿ ಘಟಿಸಿರುವ ವಿಚಾರವನ್ನು ಕ್ಯಾಮೆರಾದಲ್ಲಿ ತುಂಬಲು ಕಾಶ್ಮೀರ ದಿಂದ ಕನ್ಯಾಕುಮಾರಿ, ಗುಜರಾತ್ ಇಂದ ಅಸ್ಸಾಮ್ ವರೆಗೂ ಭರತ್ ಬಾಲ ತಂಡ ಕ್ರಮಿಸಿದೆ.

Elephant Death: ಗರ್ಭಿಣಿ ಕಾಡಾನೆ ಹತ್ಯೆ: ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ಬಿ-ಟೌನ್​ ತಾರೆಯರು..!ಪುನರ್ಜೀವ ಸಿಗಲಿದೆ (ವಿ ವಿಲ್ ರೈಸ್) ಒಂದು ಮೋಟಿವೇಷನಲ್ ಶಾರ್ಟ್ ಮೂವಿ. 4 ನಿಮಿಷದ ಅವಧಿಯನ್ನ ಈ ಕಿರುಚಿತ್ರ ಒಳಗೊಂಡಿದೆ. ಇಲ್ಲಿಯವರೆಗೂ ಕಂಡು ಕೇಳರಿಯದ ಅನಾಹುತವನ್ನ ಈ ಕೋವಿಡ್ 19 ಸೃಷ್ಟಿಸಿದೆ‌. ಇಂತಹ ಸಂಕಷ್ಟದ ಸಮಯವನ್ನು ಮೆಟ್ಟಿ ನಿಂತ ಭಾರತೀಯರಿಗೆ ಬೆಳಕಿನ ಜ್ಯೋತಿ ಇನ್ನೂ ಆರಿಲ್ಲ ಎಂದು ಪ್ರೋತ್ಸಾಹಿಸುವ ಉದ್ದೇಶವೇ 'ಪುನರ್ಜೀವ ಸಿಗಲಿದೆ’ ಕಿರುಚಿತ್ರ.

ಪುನರ್ಜೀವ ಸಿಗಲಿದೆ ಕಿರು ಚಿತ್ರ ಇದೆ ಜೂನ್ 6 ರಿಂದ ಎಲ್ಲ ಡಿಜಿಟಲ್ ವ್ಯವಸ್ಥೆಗಳಲ್ಲಿ ಲಭ್ಯವಿರಲಿದೆ. ಟೀಮ್ ವರ್ಚ್ಯುಯಲ್ ಭಾರತ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ.

First published: June 5, 2020, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading