ಲಾಕ್ ಡೌನ್ ಉಲ್ಲಂಘಿಸಿದವರಿಗೆ ರಸ್ತೆ ಕಸ ಗುಡಿಸುವ ಶಿಕ್ಷೆ – ಬೀದಿಗಿಳಿದ ಸ್ವಾಮೀಜಿಗಳು

ಪೂರಕೆಯನ್ನು ನೀಡಿದ ಪೊಲೀಸ್ ಸಿಬ್ಬಂದಿ, ಸರಿಯಾಗಿ ಗುಡಿಸದೇ ಇದ್ದಲ್ಲಿ ಲಾಠಿ ರುಚಿಯನ್ನೂ ತೋರಿಸಿ, ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ.

news18-kannada
Updated:March 26, 2020, 7:40 PM IST
ಲಾಕ್ ಡೌನ್ ಉಲ್ಲಂಘಿಸಿದವರಿಗೆ ರಸ್ತೆ ಕಸ ಗುಡಿಸುವ ಶಿಕ್ಷೆ – ಬೀದಿಗಿಳಿದ ಸ್ವಾಮೀಜಿಗಳು
ಕಸ ಕುಡಿಸುತ್ತಿರುವ ಯುವಕ
  • Share this:
ಕಲಬುರ್ಗಿ(ಮಾ.26): ದೇಶಾದ್ಯಂತ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿದೆ. ಕೊರೋನಾ ಸೋಂಕಿನ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದರ ಹೊರತಾಗಿಯೂ ಕಲಬುರ್ಗಿಯಲ್ಲಿ ರಸ್ತೆ ಮೇಲೆ ಅಡ್ಡಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ಇದರಿಂದ ಬೇಸತ್ತು ಚೌಕ್ ಪೊಲೀಸ್ ಠಾಣೆ ಸಿಪಿಐ ಶಕೀಲ್ ಅಂಗಡಿ, ಇಂದು ಯುವಕರಿಗೆ ಕಸ ಗುಡಿಸುವ ಶಿಕ್ಷೆ ವಿಧಿಸಿದ್ದಾರೆ.

ಅನಗತ್ಯವಾಗಿ ರಸ್ತೆಗಳಲ್ಲಿ ಅಡ್ಡಾಡುವವರನ್ನು ಹಿಡಿದು, ಸೂಪರ್ ಮಾರುಕಟ್ಟೆಯ ವಿವಿಧ ರಸ್ತೆಗಳನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ. ಪೂರಕೆಯನ್ನು ನೀಡಿದ ಪೊಲೀಸ್ ಸಿಬ್ಬಂದಿ, ಸರಿಯಾಗಿ ಗುಡಿಸದೇ ಇದ್ದಲ್ಲಿ ಲಾಠಿ ರುಚಿಯನ್ನೂ ತೋರಿಸಿ, ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ನಿನ್ನೆಯಷ್ಟೇ ಇದೇ ಅಧಿಕಾರಿ ಅನಗತ್ಯವಾಗಿ ರಸ್ತೆ ಮೇಲೆ ಸುತ್ತಾಡುತ್ತಿದ್ದವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿ, ಲಾಠಿ ರುಚಿಯನ್ನೂ ತೋರಿಸಿದ್ದರು.

ಕಲಬುರ್ಗಿಯ ಕಡಣಿ ಮಾರುಕಟ್ಟೆಯಲ್ಲಿ ಇಂದೂ ಸಹ ಗೊಂದಲ ಮುಂದುವರಿದಿತ್ತು. ಜನ ಗುಂಪು ಗುಂಪಾಗಿ ಬರೋದನ್ನು ತಡೆಯಲು ಪೊಲೀಸರು ತರಕಾರಿ ಮಾಡೋದನ್ನೇ ನಿಲ್ಲಿಸುವಂತೆ ಸೂಚಿಸಿದರು. ಆದರೆ ತರಕಾರಿ ಮಾರಾಟಗಾರರು ಎಂ.ಎಸ್.ಕೆ. ಮಿಲ್ ಬಳಿ ಹೋಗಿ ಮಾರಾಟ ಆರಂಭಿಸುತ್ತಿದ್ದಂತೆಯೇ ಜನ ಅಲ್ಲಿಗೇ ಮುಗಿಬಿದ್ದು, ತರಕಾರಿ ಖರೀದಿಗೆ ಮುಂದಾದರು. ಕೊನೆಗೆ ಪೊಲೀಸರು ರಂಗೋಲಿ ಮೂಲಕ ಬಾಕ್ಸ್ ಗಳನ್ನು ಹಾಕಿ ಅಂತರದಲ್ಲಿ ನಿಂತು ತರಕಾರಿ ಖರೀದಿಗೆ ವ್ಯವಸ್ಥೆ ಮಾಡಿಕೊಟ್ಟರು.

ಇದೇ ವೇಳೆ ಜನರ ವರ್ತನೆಗೆ ಬೇಸತ್ತ ಸ್ವಾಮೀಜಿಯೊಬ್ಬರು ಬೀದಿಗಿಳಿದು ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಿದರು. ಕೊರೋನಾ ಭೀತಿಯಿದ್ದರೂ ಮನೆಗಳಿಂದ ಜನ ಹೊರಬರುತ್ತಿದ್ದು, ಜನತೆಯಲ್ಲಿ ಜಾಗೃತಿ ಮೂಡಿಸಲು ಸೇಡಂ ಪಟ್ಣದಲ್ಲಿ ಸ್ವಾಮೀಜಿಗಳು ಬೀದಿಗಿಳಿದರು. ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮಿಗಳಿಂದ ಜಾಗೃತಿ ಕಾರ್ಯ ನಡೆಯಿತು. ಸೇಡಂ ಪಟ್ಟಣದ ಬೀದಿ ಬೀದಿ ಸುತ್ತಿದ ಸ್ವಾಮೀಜಿಗಳು, ಹೊರಗೆ ಬರದಿರುವಂತೆ ಮನವಿ ಮಾಡಿಕೊಂಡರು. ವೈಯಕ್ತಿಕ ಅಂತರ ಕಾಪಾಡಿಕೊಳ್ಳಿ, ಪೊಲೀಸರು ಹೇಳುವ ನಿಯಮಗಳನ್ನು ಪಾಲಿಸಿ ಎಂದು ಸ್ವಾಮೀಜಿ ಕರೆ ನೀಡಿದರು. ಜನ ಮಾತು ಕೇಳದೇ ಇದ್ದ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಮೂಲಕ ಸಂದೇಶ ಕೊಡಿಸುವ ಕೆಲಸವನ್ನು ಸೇಡಂ ಪೊಲೀಸರು ಮಾಡಿದರು.

ಭಿಕ್ಷುಕರಿಗೆ, ನಿರ್ಗತಿಕರಿಗೆ ಊಟ, ಮಾಸ್ಕ್ ವಿತರಣೆ :

ಪ್ರಧಾನಿ ಮೋದಿ ಭಾಷಣದ ನಂತರ ದೇಶದೆಲ್ಲೆಡೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಮನೆಗಳಿದ್ದವರೇನೋ ಮನೆಗಳಲ್ಲಿ ಇರುತ್ತಾರೆ. ಆದರೆ ಬೀದಿಯಲ್ಲಿ ಭಿಕ್ಷೆ ಬೇಡುವವರ ಮತ್ತು ನಿರ್ಗತಿಕರ ಪರಿಸ್ಥಿತಿ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭಿಕ್ಷೆ ಹಾಕುವವರೂ ಇಲ್ಲ, ಊಟ ನೀಡುವವರೂ ಇಲ್ಲ. ಕಲಬುರ್ಗಿ ಜಿಲ್ಲೆ ವಾಡಿ ಪಟ್ಟಣದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಗಮನಿಸಿದ ವಾಡಿ ಪುರಸಭೆ ಭಿಕ್ಷುಕರು ಮತ್ತು ನಿರ್ಗತಿಕರಿಗೆ ನೆರವಿನ ಹಸ್ತ ಚಾಚಿದೆ. ವಾಡಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಬಳಿ ಊಟಕ್ಕಾಗಿ ಪರದಾಡುತ್ತಿದ್ದ ಭಿಕ್ಷುಕರು ಮತ್ತು ನಿರ್ಗತಿಕರಿಗೆ ಪುರಸಭೆ ಸಿಬ್ಬಂದಿ ಊಟದ ಪಾಕೆಟ್ ಹಾಗೂ ಮಾಸ್ಕ್ ವಿತರಿಸಿದೆ.ಇದನ್ನೂ ಓದಿ : ಕೊರೋನಾ ಭೀತಿ; ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪೆರೆನ್ಸ್​ನ‌ ಮುಖ್ಯಾಂಶಗಳು

ಭಿಕ್ಷುಕರು ಮತ್ತು ನಿರ್ಗತಿಕರ ಪಾಡಿನ ಅರಿವಾದ ಕೂಡಲೇ ಪುರಸಭೆ ಅಧಿಕಾರಿಗಳು, ಕೆಲಸ ಸದಸ್ಯರು ಹಾಗೂ ಶಿಕ್ಷಕರು ಜೊತೆಗೂಡಿ ಅವರಿಗೆ ನೆರವಾಗಲು ಮುಂದಾಗಿದ್ದಾರೆ. ಲಾಕ್ ಡೌನ್ ಆದೇಶ ಮುಗಿಯುವವರೆಗೂ ಭಿಕ್ಷಕರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುರಸಭೆ ಅಧಿಕಾರಿ ಕಾಶಿನಾಥ್ ತಿಳಿಸಿದ್ದಾರೆ.
First published: March 26, 2020, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading