ಕೊರೋನಾ ವೈರಸ್ ದಾಳಿ ಮಾಡಿದಾಗ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

ಸಹಜವಾಗಿಯೇ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಣ್ಣ ಜ್ವರ ಬಂದರೂ ಜನರು ಆಸ್ಪತ್ರೆಗೆ ತೆರಳುತ್ತಿದ್ದಾರೆ. ಹಾಗಾದರೆ ಸಾಮಾನ್ಯ ಜ್ವರಕ್ಕೂ ಕೊರೋನಾ ಬಂದಾಗ ದೇಹದಲ್ಲಾಗುವ ಬದಲಾವಣೆಗೂ ವ್ಯತ್ಯಾಸವಿದೆ.

news18-kannada
Updated:March 27, 2020, 11:07 AM IST
ಕೊರೋನಾ ವೈರಸ್ ದಾಳಿ ಮಾಡಿದಾಗ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ಗುರುವಾರ ಒಂದೇ ದಿನ 88 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅನೇಕರು ಕೊರೋನಾ ಲಕ್ಷಣಗಳೇನು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಇಲ್ಲಿದೆ ಉತ್ತರ.

ಮುಂದುವರಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಕೊರೋನಾ ವೈರಸ್​ ತಡೆಯಲು ಮಾತ್ರ ಅಮೆರಿಕದ ಬಳಿ ಸಾಧ್ಯವಾಗುತ್ತಿಲ್ಲ. ಗುರುವಾರ ಒಂದೇ ದಿನ ಅಮೆರಿಕದಲ್ಲಿ 10 ಸಾವಿರ ಪ್ರಕರಣ ದಾಖಲಾಗಿದೆ.ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 85,327ಕ್ಕೆ ಏರಿಕೆ ಆಗಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 220 ಜನರು ಮೃತಪಟ್ಟಿದ್ದಾರೆ.

ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರು ಲಕ್ಷಣ ಗೋಚರವಾಗುತ್ತಿಲ್ಲ. ಬುಧವಾರ ಒಂದೇ ದಿನ ಇಟಲಿಯಲ್ಲಿ 712 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 8,215ಕ್ಕೆ ಏರಿಕೆ ಆಗಿದೆ. ಒಟ್ಟು 80 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್​ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್​ನಲ್ಲಿ ಈವರೆಗೆ 4365 ಸಾವುಗಳು ಸಂಭವಿಸಿವೆ.

ಇದನ್ನೂ ಓದಿ: ಕೊರೋನಾಗೆ ತತ್ತರಿಸಿದ ವಿಶ್ವದ ದೊಡ್ಡಣ್ಣ; ಒಂದೇ ದಿನ ಅಮೆರಿಕದಲ್ಲಿ 10 ಸಾವಿರ ಹೊಸ ಪ್ರಕರಣ

ಇದು ಸಹಜವಾಗಿಯೇ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಣ್ಣ ಜ್ವರ ಬಂದರೂ ಜನರು ಆಸ್ಪತ್ರೆಗೆ ತೆರಳುತ್ತಿದ್ದಾರೆ. ಹಾಗಾದರೆ ಸಾಮಾನ್ಯ ಜ್ವರಕ್ಕೂ ಕೊರೋನಾ ಬಂದಾಗ ದೇಹದಲ್ಲಾಗುವ ಬದಲಾವಣೆಗೂ ವ್ಯತ್ಯಾಸವಿದೆ.

ಸಾಮಾನ್ಯ ಜ್ವರ ಬಂದರೆ ನೆಗಡಿಯಾಗಿ ಮೂಗು ಕಟ್ಟುತ್ತದೆ. ತಲೆನೋವು ಬರುತ್ತದೆ.   ಆದರೆ ಕೊರೋನಾ ವೈರಸ್​ ನಿಮ್ಮ ದೇಹಕ್ಕೆ ದಾಳಿ ಇಟ್ಟರೆ ನೆಗಡಿಯ ಮಾತೇ ಬರುವುದಿಲ್ಲ. ಇದು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ, ಒಣಕೆಮ್ಮು ಕಾಣಿಸಿಕೊಳ್ಳುತ್ತದೆ.  ಹೀಗಾಗಿ, ನೆಗಡಿ ಆದ ತಕ್ಷಣ ಭಯ ಬೀಳುವ ಅಗತ್ಯ ಇಲ್ಲವೇ ಇಲ್ಲ. ಆದರೆ, ಒಣಕೆಮ್ಮು ಕಾಣಿಸಿಕೊಂಡರೆ ಆಸ್ಪತ್ರೆಗೆ ಭೇಟಿ ನೀಡುವುದನ್ನು ಮಾತ್ರ ಮರೆಯಬೇಡಿ.
First published: March 27, 2020, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading