Covid 19: ಮಾನಸಿಕ ಒತ್ತಡ ಜಾಸ್ತಿ ಆದ್ರೆ ಅದ್ರಿಂದಲೂ ಕೋವಿಡ್ ಸೋಂಕು ತಗಲುತ್ತಂತೆ, ಎಚ್ಚರ!

ಅಧ್ಯಯನವು ಸಾಂಕ್ರಾಮಿಕ ರೋಗದ ಆರಂಭದಲ್ಲಿ ಒತ್ತಡ, ಆತಂಕ ಅಥವಾ ಖಿನ್ನತೆಗೆ ಒಳಗಾದ ಜನರು ಕೋವಿಡ್ -19ಗೆ ಹೆಚ್ಚಾಗಿ ತುತ್ತಾಗಿದ್ದಾರೆ ಮತ್ತು ಅವರ ರೋಗಲಕ್ಷಣಗಳು ಇತರರಿಗಿಂತ ಹೆಚ್ಚು ತೀವ್ರವಾಗಿದ್ದವು ಎಂಬುವುದನ್ನು ಕಂಡುಹಿಡಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನಲ್ಸ್ ಆಫ್ ಬಿಹೇವಿಯರಲ್ ಮೆಡಿಸಿನ್ ಜರ್ನಲ್' ('Annals of Behavioral Medicine) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಆತಂಕ, ಒತ್ತಡ ಅಥವಾ ಖಿನ್ನತೆಗೆ (Depression) ಒಳಗಾದ ಜನರು ತಮ್ಮನ್ನು ತಾವು ಕೋವಿಡ್ -19 ಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು(Researchers) ಕಂಡುಕೊಂಡಿದ್ದಾರೆ. ಅಧ್ಯಯನದ ಪ್ರಕಾರ, ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಮಾನಸಿಕ(Psychological) ಯಾತನೆ ಅನುಭವಿಸಿದ್ದ ಅದೆಷ್ಟೋ ಜನರು ಕೋವಿಡ್ -19 ಸೋಂಕಿಗೆ ತುತ್ತಾಗಿರುವರೆಂದು ವರದಿ ಮಾಡಿದ್ದಾರೆ.

ಆರೋಗ್ಯದ ಮೇಲೆ ದುಷ್ಪರಿಣಾಮ
ಕೋವಿಡ್ -19 ಅನೇಕ ದೇಶಗಳನ್ನು ಸಂಪೂರ್ಣ ಲಾಕ್‌ಡೌನ್‌ಗೆ ತೆರಳುವಂತೆ ಪ್ರೇರೇಪಿಸಿತು ಮತ್ತು ಜನರನ್ನು ತಮ್ಮ ಮನೆಗಳ ನಾಲ್ಕು ಗೋಡೆಗಳೊಳಗೆ ಸೀಮಿತಗೊಳಿಸಿತು. ಸಾಮಾಜಿಕವಾಗಿ ಇತರರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದ ಜನರು ಒಂಟಿಯಾಗಿ ಇರುವಂತಹ ಪರಿಸ್ಥಿತಿ ಎದುರಾಯಿತು. ಪರಿಣಾಮವಾಗಿ ಅವರ ಮಾನಸಿಕ ಆರೋಗ್ಯವು ಹದಗೆಟ್ಟಿತು. ವರ್ಕ್ ಫ್ರಮ್ ಹೋಂ ನ ಹಳಿತಪ್ಪಿದ ಸ್ವರೂಪವೂ ಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅವರಲ್ಲಿ ಹತಾಶೆ, ಕಿರಿಕಿರಿ, ಬಳಲಿಕೆ ಮತ್ತು ಒತ್ತಡದ ಭಾವನೆಯನ್ನು ಹೆಚ್ಚಿಸಿತು .

ಅಧ್ಯಯನದಿಂದ ಬಹಿರಂಗ
ಒತ್ತಡ, ಪ್ರತ್ಯೇಕತೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕೊರೊನಾ ವೈರಸ್‌ಗೆ ಹೆಚ್ಚು ಒಳಗಾಗುತ್ತಾರೆಯೇ..? ಎಂಬುದನ್ನು ನಿರ್ಧರಿಸುವ ಉದ್ದೇಶದಿಂದ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಕವಿತಾ ವೆಧಾರ ಅವರ ನೇತೃತ್ವದಲ್ಲಿ ಅಧ್ಯಯನವೊಂದನ್ನು ನಡೆಸಲಾಯಿತು. ಈ ಅಧ್ಯಯನವು ಸಾಂಕ್ರಾಮಿಕ ರೋಗದ ಆರಂಭದಲ್ಲಿ ಒತ್ತಡ, ಆತಂಕ ಅಥವಾ ಖಿನ್ನತೆಗೆ ಒಳಗಾದ ಜನರು ಕೋವಿಡ್ -19ಗೆ ಹೆಚ್ಚಾಗಿ ತುತ್ತಾಗಿದ್ದಾರೆ ಮತ್ತು ಅವರ ರೋಗಲಕ್ಷಣಗಳು ಇತರರಿಗಿಂತ ಹೆಚ್ಚು ತೀವ್ರವಾಗಿದ್ದವು ಎಂಬುವುದನ್ನು ಕಂಡುಹಿಡಿದಿದೆ.

ಇದನ್ನೂ ಓದಿ: UKಯಲ್ಲೂ Omicron ಹೊಸ ಉಪ ರೂಪಾಂತರ BA.2 ಭೀತಿ: 53 ಸೀಕ್ವೆನ್ಸ್‌ಗಳು ಪತ್ತೆ, ತಜ್ಞರೇ ಶಾಕ್!

SARS-CoV-2 ಗೆ ತುತ್ತಾಗುವ ಅಪಾಯ
ಈ ಅಧ್ಯಯನವು ಮಹತ್ವದ್ದಾಗಿದೆ. ಏಕೆಂದರೆ ಇದು ಸಾಂಕ್ರಾಮಿಕ ರೋಗದ ಮಾನಸಿಕ ಆರೋಗ್ಯ ಅಂಶಗಳ ಬಗ್ಗೆ ಚರ್ಚೆಯನ್ನು ಹಿಮ್ಮುಖಗೊಳಿಸುತ್ತದೆ" . ವಾಸ್ತವವಾಗಿ, ಹೆಚ್ಚಿದ ಒತ್ತಡ, ಆತಂಕ ಮತ್ತು ಖಿನ್ನತೆಯು ಸಾಂಕ್ರಾಮಿಕ ರೋಗದ ಲಕ್ಷಣಗಳಲ್ಲ, ಆದರೆ SARS-CoV-2 ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುವ ಅಂಶಗಳಾಗಿವೆ ಎಂದು ಪ್ರೊಫೆಸರ್ ವೆಧಾರ ಹೇಳಿದರು. ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ಕಾಗ್ನಿಟಿವ್ ಬಿಹೇವಿಯರಲ್ ಸೈಕೋಥೆರಪಿಯ ಪ್ರಾಧ್ಯಾಪಕ ಪ್ರೊಫೆಸರ್ ಟ್ರೂಡಿ ಚಾಲ್ಡರ್ ಮತ್ತು ಆಕ್ಲೆಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪ್ರೊಫೆಸರ್ ವೆಧಾರ ಅವರೊಂದಿಗೆ ಅಧ್ಯಯನವನ್ನು ನಡೆಸಿದರು.

ಅಧ್ಯಯನ ಮುಂದಿನ ಹಂತ
ಏಪ್ರಿಲ್ 2020ರಲ್ಲಿ ಸಮೀಕ್ಷೆಯನ್ನು ಭರ್ತಿ ಮಾಡಿದ ಮತ್ತು ನಂತರ ಡಿಸೆಂಬರ್ 2020ರಲ್ಲಿ ಕೋವಿಡ್ -19 ರೋಗಲಕ್ಷಣಗಳನ್ನು ವರದಿ ಮಾಡಿದ 1,100 ಜನರ ಮೇಲೆ ಈ ವೀಕ್ಷಣಾ ಸಂಶೋಧನೆಯನ್ನು ನಡೆಸಲಾಯಿತು. ಸಮರ್ಥನೆಯನ್ನು ಬೆಂಬಲಿಸುವ ಪುರಾವೆಯಾಗಿ, ಪ್ರೊಫೆಸರ್ ಟ್ರೂಡಿ ಅವರು, ಹಿಂದಿನ ಅಧ್ಯಯನಗಳು ದುಃಖ ಮತ್ತು ವೈರಲ್ ಸೋಂಕುಗಳ ಬೆಳವಣಿಗೆಯ ನಡುವಿನ ಬಲವಾದ ಪರಸ್ಪರ ಸಂಬಂಧವನ್ನು ಖಚಿತ ಪಡಿಸಿವೆ, ಮತ್ತಿದು ದುರ್ಬಲತೆಯನ್ನು ಸೂಚಿಸುತ್ತದೆ. ಸೋಂಕು ದೃಢ ಪಟ್ಟವರಲ್ಲಿ ಈ ಸಂಬಂಧವು ಮುಂದುವರಿದಿದೆಯೇ? ಎಂದು ಅನ್ವೇಷಿಸುವುದು ನಮ್ಮ ಅಧ್ಯಯನ ಮುಂದಿನ ಹಂತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Omicron: ಮಕ್ಕಳನ್ನ ಬೆಂಬಿಡದೇ ಕಾಡುತ್ತಿದೆ ಮಹಾಮಾರಿ : ಮಕ್ಕಳಲ್ಲಿ ರೂಪಾಂತರಿ ಓಮೈಕ್ರಾನ್ ಸೋಂಕಿನ ಲಕ್ಷಣವೇನು..?

ಕೋವಿಡ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ನ್ಯೂರೋಕಾಗ್ನಿಷನ್, ಮಾತು, ಗಮನ ಮತ್ತು ಚಲನೆಯಂತಹ ಬೆಳವಣಿಗೆಯ ಅಸ್ವಸ್ಥತೆಗಳೊಂದಿಗೆ, ಸೋಂಕಿನ ನಂತರ ಮಕ್ಕಳಲ್ಲಿ ಆತಂಕ, ದುಃಖ ಮತ್ತು ಮೂಡ್ ಡಿಸಾರ್ಡರ್‌ಗಳು ಹೆಚ್ಚು ಪ್ರಚಲಿತವಾಗಿವೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ಡಾ. ಚಾರು ದತ್ ಅರೋರಾ, ಸಲಹೆಗಾರ ವೈದ್ಯ ಮತ್ತು ಸಾಂಕ್ರಾಮಿಕ ರೋಗ ತಜ್ಞ, ಏಷ್ಯನ್ ಆಸ್ಪತ್ರೆ, ಫರಿದಾಬಾದ್, ಇವರು ಕೋವಿಡ್ ನಂತರದ ಸೋಂಕುಗಳಿಗೆ ಒಡ್ಡಿಕೊಂಡ ನಂತರ ಮಕ್ಕಳು ಅನುಭವಿಸಬಹುದಾದ ಆರೋಗ್ಯ ತೊಡಕುಗಳ ಕುರಿತು ಮಾತನಾಡಿದ್ದಾರೆ.
Published by:vanithasanjevani vanithasanjevani
First published: