• ಹೋಂ
  • »
  • ನ್ಯೂಸ್
  • »
  • Corona
  • »
  • Coronavirus: ಕರ್ನಾಟಕದ ಮಕ್ಕಳಲ್ಲಿ Delta Variantನಿಂದಲೇ ಹೆಚ್ಚು ಸೋಂಕು, ಹೆಚ್ಚಿದ ಆತಂಕ

Coronavirus: ಕರ್ನಾಟಕದ ಮಕ್ಕಳಲ್ಲಿ Delta Variantನಿಂದಲೇ ಹೆಚ್ಚು ಸೋಂಕು, ಹೆಚ್ಚಿದ ಆತಂಕ

COVID-19 and children

COVID-19 and children

Delta Variant Covid 19: ಕರ್ನಾಟಕದಲ್ಲಿ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಕೊರೊನಾ ವೈರಸ್ನ ಡೆಲ್ಟಾ ರೂಪಾಂತರವು (Delta Variant) ಕರ್ನಾಟಕದ ಮಕ್ಕಳಲ್ಲಿ ಸೋಂಕು ಹರಡಲು ಮುಖ್ಯ ಕಾರಣವಾಗಿದೆ. ಎರಡನೇ ಅಲೆಯ ಸಮಯದಲ್ಲಿ ವೈರಸ್ನ ಜೀನೋಮ್ ಸೀಕ್ವೆನ್ಸಿಂಗ್ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಕೊರೊನಾ ವೈರಸ್ (Coronavirus) ಎರಡನೇ ಅಲೆ ಮುಗಿಯಿತು, ಇನ್ನೇನು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ನಿಟ್ಟುಸಿರುವ ಬಿಡುವ ಮೊದಲೇ, ಮೂರನೇ ಅಲೆಯ ಭೀತಿ ಎದುರಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮಕ್ಕಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಕೊರೊನಾ ವೈರಸ್ನ ಡೆಲ್ಟಾ ರೂಪಾಂತರವು (Delta Variant) ಕರ್ನಾಟಕದ ಮಕ್ಕಳಲ್ಲಿ ಸೋಂಕು ಹರಡಲು ಮುಖ್ಯ ಕಾರಣವಾಗಿದೆ. ಎರಡನೇ ಅಲೆಯ ಸಮಯದಲ್ಲಿ ವೈರಸ್ನ ಜೀನೋಮ್ ಸೀಕ್ವೆನ್ಸಿಂಗ್ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೊರೊನಾ ವೈರಸ್ ಸೋಂಕಿತ ಮಕ್ಕಳಲ್ಲಿ ಯಾವುದೇ ವಿಶಿಷ್ಟ ರೂಪಾಂತರವಿಲ್ಲ. ಕೊರೊನಾ ಪಾಸಿಟಿವ್ ಬಂದಿರುವ ಹೆಚ್ಚಿನ ಮಕ್ಕಳಲ್ಲಿ ಡೆಲ್ಟಾ ರೂಪಾಂತರ ಕಾಣಿಸಿಕೊಂಡಿದೆ ಎಂದು ಜೀನ್ ಅನುಕ್ರಮಗಳನ್ನು(ಸೀಕ್ವೆನ್ಸಿಂಗ್) ಅಧ್ಯಯನ ಮಾಡುತ್ತಿರುವ ರಾಜ್ಯದ ಜೀನೋಮ್ ಸೀಕ್ವೆನ್ಸಿಂಗ್ ನೋಡಲ್ ಅಧಿಕಾರಿ ಪ್ರೊ ವಿ ರವಿ ಹೇಳಿದ್ದಾರೆ.


ಎರಡನೇ ಅಲೆಯಲ್ಲಿ ಮಕ್ಕಳಿಗೆ ತಗುಲಿದ ವೈರಸ್ ಸೋಂಕಿನ ಜೀನೋಮ್ ಅನುಕ್ರಮಗಳನ್ನು ಅಧ್ಯಯನ ಮಾಡುತ್ತಿರುವುದು ಯಾವ ಹೊಸ ರೂಪಾಂತರಗಳು ಮಕ್ಕಳ ಮೇಲೆದ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ಅಲೆಗೆ ಸಜ್ಜಾಗುವ ಪ್ರಯತ್ನ ಎಂದು ರವಿ ತಿಳಿಸಿದ್ದಾರೆ.


ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕ್ರಮಗಳ ಕುರಿತು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡುವ ತಾಂತ್ರಿಕ ಸಲಹಾ ಸಮಿತಿಯು ಈ ವರ್ಷ ಜೂನ್ ನಲ್ಲಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್ ನ ವೈರಾಲಜಿಯ ಮಾಜಿ ಪ್ರಾಧ್ಯಾಪಕ ಸೇರಿದಂತೆ ಎಂಟು ಸದಸ್ಯರ ಜೀನೋಮಿಕ್ ಸರ್ವೇಲೆನ್ಸ್ ಕಮಿಟಿಯನ್ನು ರಚನೆ ಮಾಡಿ , ಕೊರೊನಾ ಪೀಡಿತ ಮಕ್ಕಳ ಮಾದರಿಗಳಲ್ಲಿ(ಸ್ಯಾಂಪಲ್) ಜೀನ್ ಅನುಕ್ರಮಗಳನ್ನು ಅಧ್ಯಯನ ಮಾಡಲು ಆದೇಶಿಸಿದೆ.


ಇದನ್ನೂ ಓದಿ: Health Tips: ಮುಟ್ಟಿನ ಸಂದರ್ಭದ ಹೊಟ್ಟೆ ನೋವು ನಿವಾರಿಸೋಕೆ ಸರಳ ಉಪಾಯಗಳು ಇಲ್ಲಿವೆ


ಜೀನೋಮ್ ಸೀಕ್ವೆನ್ಸಿಂಗ್ನ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 77 ಪ್ರತಿಶತದಷ್ಟು ಸೋಂಕುಗಳು ಡೆಲ್ಟಾ (ಬಿ .1.617.2) ರೂಪಾಂತರದಿಂದ ಉಂಟಾಗಿವೆ. ಅಲ್ಲದೇ 1413 ಕೊರೊನಾ ಪ್ರಕರಣಗಳಲ್ಲಿ 1089 ಪ್ರಕರಣಗಳು ಡೆಲ್ಟಾ ರೂಪಾಂತರದಿಂದ ಬಂದಿರುವುದು ಎಂಬ ಅಂಶ ಬಹಿರಂವಾಗಿದೆ. 159 ಪ್ರಕರಣಗಳಲ್ಲಿ ಕಪ್ಪ (B.1.617.1) ರೂಪಾಂತರ, 155 ಪ್ರಕರಣಗಳಲ್ಲಿ ಆಲ್ಫಾ (B.1.1.7) ರೂಪಾಂತರ ಕಾಣಿಸಿಕೊಂಡಿದ್ದರೆ , ಬೀಟಾ (B.1.351) ಮತ್ತು ಡೆಲ್ಟಾ ಪ್ಲಸ್ (B.1.617.2.1 (AY.1) ಕ್ರಮವಾಗಿ ಏಳು ಮತ್ತು ಮೂರರಲ್ಲಿ ಕಾಣಿಸಿಕೊಂಡಿದೆ.


ಕರ್ನಾಟಕದಲ್ಲಿ ದಾಖಲಾದ 29.05 ಲಕ್ಷ ಪಾಸಿಟಿವ್ ಪ್ರಕರಣಗಳಲ್ಲಿ ಸುಮಾರು 10 ಪ್ರತಿಶತದಷ್ಟು ಮಕ್ಕಳು 0-19 ವಯಸ್ಸಿನವರಾಗಿದ್ದು, ಸಾವಿನ ಪ್ರಮಾಣ ಶೇಕಡಾ 0.1 ರಷ್ಟಿದೆ ಎಂದು ವರದಿ ತಿಳಿಸಿದೆ.


ಈ ವರ್ಷದ ಆರಂಭದಲ್ಲಿ ವೈರಾಲಜಿ ವಿಭಾಗದ ಪ್ರೊಫೆಸರ್ ರವಿ ಮತ್ತು ಇತರರು ನಡೆಸಿದ ಅಧ್ಯಯನದ ಪ್ರಕಾರ ವೈರಸ್ನ ಹೊಸ ರೂಪಾಂತರಿ ತಳಿಗಳನ್ನು ಅಧ್ಯಯನ ಮಾಡಲು ದೇಶದ ಅನೇಕ ಪ್ರಯೋಗಾಲಯಗಳು ಜೀನೋಮಿಕ್ ಸೀಕ್ವೆನ್ಸಿಂಗ್ ಅನ್ನು ನಡೆಸುತ್ತಿವೆ.


ಇದನ್ನೂ ಓದಿ: ಮನೆಯವರ ಜೊತೆ ಜಗಳ ಆಗಿದ್ದಕ್ಕೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ಬಾಲಕ, ದೇಶ ಬಿಡುವಂಥಾ ಜಗಳ ಏನಪ್ಪಾ?


ಡೆಲ್ಟಾ ರೂಪಾಂತರ (B.1.617). 2) ಕರ್ನಾಟಕದ ಎರಡನೇ ತಲೆಯ ನಂತರ ಹೆಚ್ಚು ಪ್ರಬಲವಾದ ಪರಿಣಾಮ ಬೀರುತ್ತಿದೆ. ಮಾರ್ಚ್ 2021 ರ ನಂತರದ ಎರಡನೇ ಅಲೆಯಲ್ಲಿ, ಡಬಲ್ ಮ್ಯುಟೆಂಟ್ B.1.617.2 ಡೆಲ್ಟಾ ವೇರಿಯಂಟ್ ಮತ್ತು B.1.1.7 ಆಲ್ಫಾ ವೇರಿಯಂಟ್ - UK ಯಲ್ಲಿ ಪತ್ತೆಯಾಗಿದ್ದು ಅದು ಡಿಸೆಂಬರ್ 2020 ರಿಂದ ಮಾರ್ಚ್ 2021 ರವರೆಗೆ ಕರ್ನಾಟಕದಲ್ಲಿ ಹೆಚ್ಚಾಗಿ ಹರಡಲು ಆರಂಭಿಸಿದೆ.
ಮೂರನೆಯ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚು ಕಾಣಿಸುವ ಸಾಧ್ಯತೆಗಳಿವೆ. ಕಳೆದ ವಾರದಲ್ಲಿ, ನೆರೆಯ ಕೇರಳ ಮತ್ತು ಕೇರಳದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕುಗಳು ಕಾಣಿಸಿಕೊಂಡಿರುವ ಕಾರಣದಿಂದಾಗಿ ಕರ್ನಾಟಕದಲ್ಲಿ ಮೂರನೇ ಅಲೆ ಆರಂಭವಾಗುವ ಆತಂಕವಿದೆ.


"ಕೇರಳದ ಸಿರೊಪೊಸಿಟಿವಿಟಿ ದರ ತುಂಬಾ ಕಡಿಮೆ ಇದೆ. ಕೇವಲ 44 ಪ್ರತಿಶತ ಮಾತ್ರವಿದ್ದು ಅದು ಭಾರತದಲ್ಲಿಯೇ ಅತ್ಯಂತ ಕಡಿಮೆ ದರವಾಗಿದೆ. ಕೇರಳದಲ್ಲಿ ಪ್ರಕರಣಗಳ ಏರಿಕೆಗೆ ಸರಿಯಾಗಿ ಕೊರೊನಾ ನಿಯಮಗಳನ್ನು ಪಾಲಿಸದಿರುವುದೇ ಕಾರಣ ಎಂದು ವೈರಾಲಜಿಸ್ಟ್ ಪ್ರೊ ವಿ ರವಿ ಹೇಳಿದ್ದಾರೆ. ಕರ್ನಾಟಕದಲ್ಲಿ, ಇತ್ತೀಚೆಗೆ ಐಸಿಎಂಆರ್ ಅಧ್ಯಯನದಿಂದ 70 ಪ್ರತಿಶತದಷ್ಟು ಸಿರೊಪೊಸಿಟಿವಿಟಿ ದರ ವರದಿಯಾಗಿದೆ. ಸೆರೋ-ಪಾಸಿಟಿವಿಟಿ ಒಂದು ಸೂಚನೆ ಹೊರತು ಇದು ಸಂಪೂರ್ಣ ರಕ್ಷಣೆ ಅಲ್ಲ. ಕರ್ನಾಟಕದ ಗಡಿಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಲಸಿಕೆ ಪಡೆದ ನಂತರ ಕೂಡ, ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪ್ರೊಫೆಸರ್ ರವಿ ಎಚ್ಚರಿಸಿದ್ದಾರೆ.


ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ (5.64), ಕೊಡಗು (4.82), ಉಡುಪಿ (4.69), ಪಾಸಿಟಿವ್ ರೇಟ್ ಇದ್ದು, ಇದು ಜುಲೈ 31 ರಂದು ಏಳು ದಿನಗಳ ಸರಾಸರಿ ವರದಿಯ ಅನುಸಾರ ರಾಜ್ಯದ ಸರಾಸರಿ 1.42 ಕ್ಕಿಂತ ಹೆಚ್ಚಿದೆ. ಗಡಿ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಕರ್ನಾಟಕ ಸರ್ಕಾರವು ಕೇರಳ ಮತ್ತು ಮಹಾರಾಷ್ಟ್ರದಿಂದ ಭೇಟಿ ನೀಡುವವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.


ಇದನ್ನೂ ಓದಿ: Dulquer Salman: ಹೊಸಾ ಮರ್ಸಿಡಿಸ್ ಕಾರ್ ಕೊಂಡ ದುಲ್ಕರ್, 2.5 ಕೋಟಿ ರೂ ಬೆಲೆಯ ಈ ಕಾರಿನ ವಿಶೇಷತೆಗಳೇನು?


ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಜನರ ಕಾರಣದಿಂದ ಕರ್ನಾಟಕದಲ್ಲಿ ಎರಡನೇ ಅಲೆ ಆರಂಭವಾಯಿತು. ಇನ್ನು ಕೇರಳದಲ್ಲಿ, ಕಳೆದ ವಾರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಇದು ನಮಗೆ ಎಚ್ಚರಿಕೆಯ ಗಂಟೆಯಾಗಿದ್ದು ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗಡಿಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಹಿರಿಯ ಅಧಿಕಾರಿಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.


ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 1.5 ರಿಂದ 2 ರಿಂದ 4.5 ಕ್ಕೆ ಏರಿದೆ. ಇದು ಕಳವಳಕಾರಿ ಅಂಶವಾಗಿದ್ದು, ಸೋಂಕು ಇನ್ನೂ ಹೆಚ್ಚು ಹರಡದಂತೆ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.


ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ವ್ಯಕ್ತಿಗಳು ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ನೀಡಬೇಕು ಮತ್ತು ಅದು 72 ಗಂಟೆಗಳಿಗಿಂತ ಹಳೆಯದಾಗಿರಬಾರದು. ಲಸಿಕೆ ಪಡೆದಿದ್ದರೂ ಸಹ ಪರೀಕ್ಷೆ ಕಡ್ಡಾಯ ಎಂದು ಎಂದು ಕರ್ನಾಟಕ ಆರೋಗ್ಯ ಇಲಾಖೆ ಆದೇಶದಲ್ಲಿ ತಿಳಿಸಿದೆ.


ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರಕರಣಗಳು ಒಂದೆಡೆ ಹೆಚ್ಚಾಗುತ್ತಿವೆ, ಇನ್ನೊಂದೆಡೆ ಸರ್ಕಾರ ಶಾಲೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಮೂರನೇ ಅಲೆ ಭೀತಿಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಸಂಘಗಳು ಶಾಲೆಗಳನ್ನು ತೆರೆಯಲು ಅನುಮತಿ ನೀಡಿ ಸರಿಯಾದ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿವೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ಶೇ. 72 ರಷ್ಟು ವ್ಯಾಕ್ಸಿನೇಷನ್ ಮಾಡಲಾಗಿದೆ ಮತ್ತು ಮುಂದಿನ 15 ದಿನಗಳಲ್ಲಿ 100 ಪ್ರತಿಶತ ಲಸಿಕೆಗಳನ್ನು ನೀಡುವ ಯೋಜನೆ ಇದೆ. ಸರ್ಕಾರಿ ಆದೇಶವಿಲ್ಲದೆ ಖಾಸಗಿ ಶಾಲೆಗಳು ಸ್ವಂತವಾಗಿ ತೆರೆಯಲು ಸಾಧ್ಯವಿಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ನಾನು ಶೀಘ್ರದಲ್ಲೇ ಶಾಲಾ ಸಂಸ್ಥೆಗಳ ಸಭೆಯನ್ನು ಕರೆಯುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.


(ಸಂಧ್ಯಾ ಎಂ)

First published: