ಈ ಮೊದಲು ಅಂದರೆ ಮೊದಲನೇ ಅಲೆಯಲ್ಲಿ ಕಂಡು ಬಂದಿದ್ದ ವುಹಾನ್ ವೈರಸ್ಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡವರಿಗೆ 8 ಪಟ್ಟು ಕಡಿಮೆ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ ಎಂದು 100ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರ ಮೇಲೆ ಗಂಗಾರಾಮ್ ಆಸ್ಪತ್ರೆ ಸೇರಿದಂತೆ ದೆಹಲಿಯಲ್ಲಿ ನಡೆಸಿದ ಅಧ್ಯಯನದ ವರದಿ ಈ ವಿಷಯ ತಿಳಿಸಿದೆ.
ಈ ಅಧಯಯನವು ‘Sars-Cov-2 B.1.617.2 Deltavariant Emergence and Vaccine Breakthrough: Collaborative Study’ ಹೆಸರಿನಲ್ಲಿ ಈ ಅಧ್ಯಯನ ನಡೆದಿತ್ತು. ಜೊತೆಗೆ, ಡೆಲ್ಟಾ ವೈರಸ್ ಈ ಮುಂಚಿನ ವುಹಾನ್ ವೈರಸ್ಗಿಂತಲೂ ಹೆಚ್ಚು ಜನರಿಗೆ ಹರಡುತ್ತದೆ ಎಂದು ಹೇಳಲಾಗಿತ್ತು.
ಈ ಅಧ್ಯಯನವನ್ನು ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಥೆರಪೆಟಿಕ್ ಇಮ್ಯೂನಾಲಜಿ ಮತ್ತು ಇನ್ಫೆಕ್ಟಿಯಸ್ ಡಿಸೀಸ್ ಸಂಸ್ಥೆಯ ವಿಜ್ಞಾನಿಗಳ ಸಹಯೋಗದೊಂದಿಗೆ ಭಾರತವು ಈ ಅಧ್ಯಯನ ಕೈಗೊಂಡಿತ್ತು.
ಭಾರತದಾದ್ಯಂತ ವ್ಯಾಕ್ಸಿನ್ ಪಡೆದುಕೊಂಡ 100 ಆರೋಗ್ಯ ಕಾರ್ಯಕರ್ತರ ಮೇಲೆ ಮೂರು ಕೇಂದ್ರಗಳಲ್ಲಿ ಈ ಅಧ್ಯಯನ ನಡೆಸಲಾಗಿತ್ತು. B.1.617.2 ಡೆಲ್ಟಾ ವೈರಸ್ ವ್ಯಾಕ್ಸಿನ್ ತೆಗೆದುಕೊಂಡವರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಜೊತೆಗೆ ಎರಡು ಡೋಸ್ ಲಸಿಕೆ ಪಡೆದುಕೊಂಡವರ ಮೇಲೆ ಶ್ವಾಸಕೋಶದ ಸೋಂಕು ಸಹ ತೀವ್ರತರವಾಗಿ ಇರುವುದಿಲ್ಲ. ಜೊತೆಗೆ ಇತರೆ ರೂಪಾಂತರಿಗಳಾದ B.1.1.7 (Alpha variant) ಮತ್ತು B.1.617.1 (Kappa variant) ಮೇಲು ವ್ಯಾಕ್ಸಿನ್ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನ ಮತ್ತೊಂದು ವಿಚಾರವನ್ನು ತಿಳಿಸಿದ್ದು ಡೆಲ್ಟಾ ವೈರಸ್ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುವ ಶಕ್ತಿ ಹೊಂದಿಲ್ಲ. ಅಲ್ಲದೆ ಕೋವಿಡ್ನಿಂದ ಗುಣಮುಖರಾದವರು ಹೆಚ್ಚಿನ ಪ್ರತಿರೋದಕ ಶಕ್ತಿಯನ್ನು ಈ ಡೆಲ್ಟಾ ರೂಪಾಂತರಿ ವೈರಸ್ ವಿರುದ್ದ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.
ವುಹಾನ್ ವೈರಸ್ಗೆ ಹೋಲಿಸಿದರೆ ಈ ರೂಪಾಂತರಿ ಡೆಲ್ಟಾ ವೈರಸ್ ರಚನೆ ಶ್ವಾಸಕೋಶದ ಎಪಿಥಿಯಲ್ ಕೋಶಗಳಿಗೆ ಹಾನಿ ಮಾಡುವ ಸ್ಪೈಕ್ ಪ್ರೋಟಿನ್ ಗುಣವನ್ನು ಹೊಂದಿದೆ. ಆದ ಕಾರಣ ಇದು ಹೆಚ್ಚು ಜನರಿಗೆ ಹೆಚ್ಚು ವೇಗವಾಗಿ ಹರಡುವಂತಹ ಲಕ್ಷಣ ಹೊಂದಿದೆ ಎಂದೂ ಸಹ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಥೆರಪೆಟಿಕ್ ಇಮ್ಯೂನಾಲಜಿ ಮತ್ತು ಇನ್ಫೆಕ್ಟಿಯಸ್ ಡಿಸೀಸ್ ಸಂಸ್ಥೆಯ ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: HDK vs Sumalatha; ಅವರು ಎಂಎಲ್‌ಎ ಆದ್ರೆ ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ: ಕುಮಾರಸ್ವಾಮಿಗೆ ಸುಮಲತಾ ತಿರುಗೇಟು
ಈ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಶ್ವಾಸಕೋಶಗಳಿಗೆ ಹಾನಿ ಮಾಡಲು ರೂಪಾಂತರ ಮಾಡಿಕೊಂಡು ಬಂದಿದೆ. ನಾವುಗಳು ಈಗ ಸುಮ್ಮನೆ ಕೂರುವ ಸಮಯವಲ್ಲ ಈಗಲೂ ಹೆಚ್ಚಿನ ಎಚ್ಚರಿಕೆ ವಹಿಸಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗದುಕೊಳ್ಳಬೇಕು ಹಾಗೂ, ಈ ಮೊದಲಿಗಿಂತಲೂ ಹೆಚ್ಚು ಜಾಗ್ರತೆವಹಿಸಿ ನಮ್ಮವರನ್ನು ಈ ಕೊರೋನಾದಿಂದ ತಪ್ಪಿಸಿಕೊಳ್ಳುವಂತೆ ಮಾಡಬಹುದು ಎಂದು ಈ ಅಧ್ಯಯನ ಸಮಿತಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ