ವಾಹನ ಸಂಚಾರ, ಫ್ಯಾಕ್ಟರಿ ಬಂದ್ ಆದರೂ ದೆಹಲಿ ಮಾಲಿನ್ಯ ಕಡಿಮೆಯಾಗಿಲ್ಲ ಯಾಕೆ? ರಿಯಾಲಿಟಿ ಚೆಕ್

ಏಪ್ರಿಲ್ 15 ಮತ್ತು 15ರಂದು ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತೆ ಅಪಾಯಕಾರಿ ಮಟ್ಟಕ್ಕೆ ಏರಿರುವುದು ಕಂಡು ಬಂದಿದೆ. ಹವಾಮಾನ ಇಲಾಖೆ ಕೂಡ ಮುನ್ನೆಚ್ಚರಿಕೆ ನೀಡಿತ್ತು.

ದೆಹಲಿಯ ಒಂದು ಚಿತ್ರ

ದೆಹಲಿಯ ಒಂದು ಚಿತ್ರ

 • Share this:
  ನವದೆಹಲಿ(ಏ. 16): ಕೊರೋನಾ ಸೋಂಕು ಹರಡದಂತೆ ನಡೆಯಲು ಮೂರು ವಾರಗಳಿಂದಲೂ ದೇಶವ್ಯಾಪಿ ಲಾಕ್ ಡೌನ್ ಇದೆ. ಸೋಂಕು ಎಷ್ಟರಮಟ್ಟಿಗೆ ನಿಗ್ರಹವಾಗಿದೆಯೋ ಗೊತ್ತಿಲ್ಲ, ಆದರೆ, ದೇಶದ ಬಹುತೇಕ ನಗರಗಳಲ್ಲಿ ಮಾಲಿನ್ಯ ಮಾತ್ರ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ದೇಶದ ಬಹುತೇಕ ಕಾರ್ಖಾನೆಗಳು ಶಟ್ ಡೌನ್ ಆಗಿವೆ. ವಾಹನ ಸಂಚಾರ ಶೇ. 90ರಷ್ಟು ನಿಂತು ಹೋಗಿವೆ. ಇದು ಮಾಲಿನ್ಯ ಸುಧಾರಣೆಗೆ ಕಾರಣವಾಗಿದೆ. ಭಾರೀ ಅಪಾಯಕಾರಿ ಮಟ್ಟದಲ್ಲಿದ್ದ ದೆಹಲಿ ಕೂಡ ರಿಲ್ಯಾಕ್ಸ್ ಆದಂತಿತ್ತು. ಆದರೆ, ವಿಚಿತ್ರವೆಂಬಂತೆ ದೇಶದ ರಾಜಧಾನಿಯಲ್ಲಿ ಮಾಲಿನ್ಯ ಮತ್ತೆ ಏರುತ್ತಿದೆ.

  ಮಾರ್ಚ್ 29ರಂದು ಗಾಳಿಯ ಗುಣಮಟ್ಟ ಪರೀಕ್ಷೆ ಮಾಡಿದಾಗ ಸ್ವಲ್ಪ ಸುಧಾರಿಸಿದಂತಿತ್ತು. ಬೆಳಗ್ಗೆ 7-9ರವರೆಗೆ ಅನಾರೋಗ್ಯ ಮಟ್ಟದಲ್ಲಿತ್ತಾದರೂ ದಿನದ ನಂತರ ಅವಧಿಯಲ್ಲಿ ಸುಧಾರಣೆ ಕಂಡಿತ್ತು. ಆದರೆ, ನಿನ್ನೆ ಮತ್ತು ಇವತ್ತು ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತೆ ಅಪಾಯಕಾರಿ ಮಟ್ಟಕ್ಕೆ ಏರಿರುವುದು ಕಂಡು ಬಂದಿದೆ. ಮೇ 3ರವರೆಗೆ ಲಾಕ್ ಡೌನ್ ಇರುವುದರಿಂದ ವಾಹನಗಳೆಲ್ಲವೂ ಬಹುತೇಕ ಬಂದ್ ಆಗಿವೆ. ಫ್ಯಾಕ್ಟರಿಗಳು ಬಂದ್ ಆಗಿವೆ. ರೈತರು ತಮ್ಮ ಫಸಲು ಸುಡುವ ಕೆಲಸವೂ ನಡೆದಿಲ್ಲ. ಆದರೂ ದೆಹಲಿಯಲ್ಲಿ ಮಾಲಿನ್ಯ ಹೇಗೆ ಹೆಚ್ಚಾಗಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: 2ನೇ ಹಂತದ ಲಾಕ್​ಡೌನ್ ಸಂಕಷ್ಟಕ್ಕೆ ಕೇಂದ್ರದಿಂದ ಇನ್ನೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆ

  ದೆಹಲಿಯಲ್ಲಿ ಅಪಾಯಕಾರಿ ಮಾಲಿನ್ಯಕ್ಕೆ ಕಾರಣವಾಗಿರುವುದು ಮರಳುಗಾಳಿ. ಎರಡು ದಿನಗಳಿಂದ ಪಶ್ಚಿಮದ ಭಾಗದಿಂದ ದೆಹಲಿಗೆ ಮರಳುಗಾಳಿ ಬೀಸುತ್ತಿದೆ. ಭಾರತದ ಹವಾಮಾನ ಇಲಾಖೆ ಕೂಡ ಕೆಲ ದಿನದ ಹಿಂದೆಯೇ ಮುನ್ನೆಚ್ಚರಿಕೆ ನೀಡಿತ್ತು.

  ಈ ಮರಳುಗಾಳಿ ಅಥವಾ ಡಸ್ಟ್ ಸ್ಟಾರ್ಮ್​ ಬಿಟ್ಟರೆ ದೆಹಲಿಯ ಮಾಲಿನ್ಯಕ್ಕೆ ಬೇರೆ ಅಪಾಯ ಸದ್ಯಕ್ಕಿಲ್ಲ. ಲಾಕ್ ಡೌನ್ ಆದಾಗಿನಿಂದ ಗಮನಾರ್ಹ ಸುಧಾರಣೆಯಾಗಿದೆ. ಮೊನ್ನೆಯವರೆಗೂ ದೆಹಲಿ ನಿವಾಸಿಗಳು ಕೊರೋನಾ ಆತಂಕದ ಮಧ್ಯೆಯೂ ನಿಟ್ಟುಸಿರು ಬಿಟ್ಟಿದ್ದರು. ಮಾಲಿನ್ಯಕಾರಕ ನೈಟ್ರೋಜನ್ ಆಕ್ಸೈಡ್ ಮತ್ತು ಪಿಎಂ2.5ಗಳಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿತ್ತು.

  First published: