HOME » NEWS » Coronavirus-latest-news » DELHI TEMPORARILY SUSPENDED THE VACCINATION DRIVE 18 44 SESR

ದೇಶದೆಲ್ಲೆಡೆ ಲಸಿಕೆಗೆ ಹಾಹಾಕಾರ; ಕರ್ನಾಟಕದ ಬಳಿಕ ದೆಹಲಿಯಲ್ಲೂ ಮೂರನೇ ಹಂತದ ವಾಕ್ಸಿನ್​ಗೆ ತಡೆ

ದೆಹಲಿಯಲ್ಲಿ ಲಸಿಕೆ ಕೊರತೆ ಎದುರಾಗಿರುವ ಹಿನ್ನಲೆ ಮೂರನೇ ಹಂತದ ಲಸಿಕೆಗೆ ತಡೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ತಿಳಿಸಿದ್ದಾರೆ.

news18-kannada
Updated:May 13, 2021, 4:04 PM IST
ದೇಶದೆಲ್ಲೆಡೆ ಲಸಿಕೆಗೆ ಹಾಹಾಕಾರ; ಕರ್ನಾಟಕದ ಬಳಿಕ ದೆಹಲಿಯಲ್ಲೂ ಮೂರನೇ ಹಂತದ ವಾಕ್ಸಿನ್​ಗೆ ತಡೆ
ಸಾಂದರ್ಭಿಕ ಚಿತ್ರ.
  • Share this:
ದೆಹಲಿ (ಮೇ. 13):  ಮೂರನೇ ಹಂತದ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಮೇ. 1 ರಿಂದ ಚಾಲನೆ ನೀಡಿದೆಯಾದರೂ ಹಲವು ರಾಜ್ಯಗಳಲ್ಲಿ ಅಗತ್ಯ ಲಸಿಕೆಯೇ ಇಲ್ಲ. ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಲಸಿಕೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಎರಡನೇ ಹಂತದ ಲಸಿಕೆ ಅಂದರೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್​ ನೀಡಲಾಗಿದ್ದು, ಎರಡನೇ ಡೋಸ್​ಗೆ ಲಸಿಕೆ ಕೊರತೆ ಕಂಡು ಬಂದಿದೆ. ಈ ನಡುವೆ ಮೂರನೇ ಹಂತದ 18-44 ವರ್ಷದವರಿಗೆ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಈ ಕಾರ್ಯ ಆರಂಭದಲ್ಲಿಯೇ ಸಾಕಷ್ಟು ಗೊಂದಲ ಮೂಡಿಸಿದೆ. ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕೆ ಕಾರ್ಯ ಸ್ಥಗಿತಗೊಂಡಿದೆ.

ಲಸಿಕೆ ಲಭ್ಯತೆ ಇಲ್ಲದ ಹಿನ್ನಲೆ ಮಹಾರಾಷ್ಟ್ರದಲ್ಲಿ ಈಗಾಗಲೇ ಮೂರನೇ ಹಂತದ ಲಸಿಕೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಕರ್ನಾಟಕದಲ್ಲೂ ಕೂಡ ಮೇ 10 ರಿಂದ ಆರಂಭಗೊಂಡಿದ್ದ ಲಸಿಕೆ ವಿತರಣಾ ಕಾರ್ಯ ನಾಲ್ಕು ದಿನದೊಳಗೆ ಸ್ಥಗಿತಗೊಂಡಿದೆ.

ಲಸಿಕೆ ಕೊರತೆ ಹಿನ್ನಲೆ ವ್ಯಕ್ತವಾದ ವ್ಯಾಪಕ ಟೀಕೆ ಹಿನ್ನಲೆ ರಾಜ್ಯ ಸರ್ಕಾರ ಶುಕ್ರವಾರದಿಂದ ಮೂರನೇ ಹಂತದ ಲಸಿಕೆ ವಿತರಣೆಯನ್ನು ಸ್ಥಗಿತಗೊಳಿಸಿದ್ದು, 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್​ ಲಸಿಕೆ ಮಾತ್ರ ವಿತರಣೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ದೆಹಲಿಯಲ್ಲೂ 18 ರಿಂದ 44 ವರ್ಷದ ಲಸಿಕೆ ವಿತರಣಾ ಕಾರ್ಯಕ್ಕೆ ತಡೆ ನೀಡಲಾಗಿದೆ,
ದೆಹಲಿಯಲ್ಲಿ ಲಸಿಕೆ ಕೊರತೆ ಎದುರಾಗಿರುವ ಹಿನ್ನಲೆ ಮೂರನೇ ಹಂತದ ಲಸಿಕೆಯನ್ನು ತಡೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ತಿಳಿಸಿದ್ದಾರೆ. ಕೋವಾಕ್ಸಿನ್​ ಹೆಚ್ಚವರಿ ಲಸಿಕೆ ಹಂಚಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಭಾರತ್​ ಬಯೋಟೆಕ್​ ಸ್ಪಷ್ಟಪಡಿಸಿದೆ. ಈ ಹಿನ್ನಲೆ ಈ ಕಾರ್ಯಕ್ಕೆ ಸ್ಥಗಿತ ಗೊಳಿಸಲಾಗಿದೆ ಎಂದಿದ್ದಾರೆ.

ಇದನ್ನು ಓದಿ: ಕೋವಿಡ್​ ಪರಿಹಾರ ನಿಧಿಗೆ ಸಚಿವರ 1 ವರ್ಷದ ವೇತನ; ಸಚಿವರ ತಿಂಗಳ ಸಂಬಳವೆಷ್ಟು ಗೊತ್ತಾ!

ಲಸಿಕೆ ಕೊರತೆ ಹಿನ್ನಲೆ ತಮಿಳುನಾಡು ಸರ್ಕಾರ ಈಗಾಗಲೇ ಜಾಗತಿಕ ಟೆಂಡರ್​ ಘೋಷಿಸಿದ್ದು, ರಾಜಸ್ಥಾನ ಕೂಡ ಇದೇ ರೀತಿಯ ಕ್ರಮಕ್ಕೆ ಮುಂದಾಗಲಿದೆ ಎನ್ನಲಾಗಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯ ಕೂಡ ಈಗಾಗಲೇ ಜಾಗತಿಕ ಟೆಂಡರ್​ ಮೂಲಕ ಲಸಿಕೆ ಪೂರೈಕೆ ಕ್ರಮಕ್ಕೆ ಮುಂದಾಗಿದೆ. ಉತ್ತರ ಖಂಡ ಸರ್ಕಾರ ಮುಂದಿನ ಎರಡು ತಿಂಗಳಲ್ಲಿ ಸುಮಾರು 20 ಲಕ್ಷ ಡೋಸ್​ ರಷ್ಯಾ ನಿರ್ಮಿತ ಸ್ಪಟ್ನಿಕ್​ ಲಸಿಕೆ ಆಮದು ಮಾಡಿಕೊಳ್ಳಲು ಸಜ್ಜಾಗಿದೆ.ಈ ನಡುವೆ ಲಸಿಕೆ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಮೇ 20ರೊಳಗೆ 1.5 ಕೋಟಿ ಕೋವಿಶೀಲ್ಡ್​ ಲಸಿಕೆಯನ್ನು ತಲುಪಿಸುವ ಭರವಸೆಯನ್ನು ಸೆರಂ ಸಂಸ್ಥೆ ಸಿಇಒ ಪೂನವಾಲ ನೀಡಿದ್ದಾರೆ.

ಸೆರಂ ಸಂಸ್ಥೆ ಮತ್ತು ಭಾರತ್​ ಬಯೋಟೆಕ್​ ಮುಂದಿನ ನಾಲ್ಕು ತಿಂಗಳ ಉತ್ಪಾದನಾ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಅನ್ವಯ 10 ಕೋಟಿ ಮತ್ತು 7.8 ಕೋಟಿ ಕಲಸಿಕೆ ನೀಡುವುದಾಗಿ ತಿಳಿಸಿದ್ದಾರೆ.
Published by: Seema R
First published: May 13, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories