ದಿಲ್ಲಿ ಪೋಸ್ಟ್​ | ವೇಯ್ಟ್ ಆ್ಯಂಡ್ ವಾಚ್ ಮೂಡಿನಲ್ಲಿ ರಾಜಕಾರಣಿಗಳು, ಸಜ್ಜನ ದುರ್ಜನ ಆದ, ಬೆಂಕಿಯುಂಡೆ ಥಂಡಾ ಆದ ಕತೆ!

ನವದೆಹಲಿ ಕೇವಲ ರಾಷ್ಟ್ರ ನಾಯಕರ ಕೇಂದ್ರ ಸ್ಥಾನವಷ್ಟೇ ಅಲ್ಲ. ರಾಜ್ಯ ನಾಯಕರ ಚಲನವಲನಗಳು ಕೂಡ ಆರಂಭಗೊಳ್ಳುವುದು ಇದೇ ದೆಹಲಿಯಿಂದ. ಸರ್ಕಾರ ಮಟ್ಟದ ಕೆಲಸಗಳಿಂದ ಹಿಡಿದು ಹೈಕಮಾಂಡ್ ಕೃಪೆಗಾಗಿ ಎಲ್ಲ ನಾಯಕರು ದೆಹಲಿಗೆ ಬರುತ್ತಾರೆ. ಹೀಗೆ ಬಂದ ನಾಯಕರ ಮಾತುಕತೆ, ಸನ್ನಿವೇಶ ಎಲ್ಲವೂ ಸುದ್ದಿಯಾಗುವುದಿಲ್ಲ. ಸುದ್ದಿಯಾಗದ ಕುತೂಹಲಕಾರಿ, ಅಚ್ಚರಿಯ ಕೆಲವು ಸಂಗತಿಗಳು ದಿಲ್ಲಿ ಪೋಸ್ಟ್​ನಲ್ಲಿ ಪ್ರಕಟವಾಗಲಿದೆ.

ದಿಲ್ಲಿ ಪೋಸ್ಟ್.

ದಿಲ್ಲಿ ಪೋಸ್ಟ್.

  • Share this:
ಸಾಮಾನ್ಯವಾಗಿ ಎಂಥದೇ ಪರಿಸ್ಥಿತಿಯಲ್ಲೂ ರಾಜಕಾರಣಿಗಳು ರಾಜಕಾರಣವನ್ನೇ ಮಾಡುತ್ತಾರೆ, ರಾಜಕಾರಣದ ಬಗ್ಗೆನೇ ಯೋಚನೆ ಮಾಡುತ್ತಾರೆ ಎಂಬ ಮಾತಿದೆ. ಆದರೆ ಕೊರೋನಾ ಈ ಮಾತನ್ನು ಸ್ವಲ್ಪ ಮಟ್ಟಿಗಾದರೂ ಸುಳ್ಳು ಮಾಡಿದೆ. ದೇಶದ ಘಟಾನುಘಟಿ ರಾಜಕಾರಣಿಗಳೆಲ್ಲಾ ವೇಯ್ಟ್ ಆ್ಯಂಡ್ ವಾಚ್ ಮೂಡಿಗೆ ಹೋಗಿಬಿಟ್ಟಿದ್ದಾರೆ. ಇದೊಂಥರಾ ಸಾಮಾಜಿಕ ಅಂತರ...

ಬಹುತೇಕ ಈ ತಲೆಮಾರಿನ‌ ಜನ ನೋಡೇ ಇಲ್ಲ ಎನ್ನುವ ಇನ್ನೊಂದು ಬೆಳವಣಿಗೆ ಆಗಿದೆ. ಆಳುವ ಪಕ್ಷಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಖುಲ್ಲಂ ಖುಲ್ಲಾ ಬೆಂಬಲ ನೀಡಿಬಿಟ್ಟಿವೆ. ಒಳಗೊಳಗೆ ಏನೇನು ಲೆಕ್ಕಾಚಾರ ಇದೆಯೋ ಏನೋ? ಆದರೆ ಹೊರಗಂತೂ ಬೆಂಬಲ ನೀಡಿವೆ. ಉದಾಹರಣೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್. ಸದಾ ಕೇಂದ್ರ ಸರ್ಕಾರದ ವಿರುದ್ಧ ಜಗಳವಾಡುತ್ತಿದ್ದ ಕೇಜ್ರಿವಾಲ್ ಎರಡನೇ ಸಲ ಲಾಕ್​ಡೌನ್ ಮುಂದುವರೆಸಿದಾಗ ಮುಕ್ತವಾಗಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಜ್ಜನ 'ದುರ್ಜನ' ಆದರೆ?

ಕೊರೋನಾ ಬಗ್ಗೆ ದೇಶದಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ. ಆದರೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ 'ನಾಪತ್ತೆ' ಆಗಿದ್ದಾರೆ. ನಾಪತ್ತೆ ಅಂದರೆ ಲಿಟ್ರರಿಯಾಗಿ ನಾಪತ್ತೆ ಆಗಿದ್ದಾರೆ ಅಂತಾ ಅಲ್ಲ. ಅವರು ಆರೋಗ್ಯ ಸಚಿವರಾಗಿದ್ದರೂ, ಕೊರೋನಾ ರೋಗ ಕಾಡುತ್ತಿರುವಾಗ ಆ್ಯಕ್ಟೀವ್ ಆಗಿಲ್ಲ ಅಂತಾ. ಹರ್ಷವರ್ಧನ್ ಬಗ್ಗೆ 'ಬಿಜೆಪಿಯಲ್ಲಿರುವ ಸಜ್ಜನ' ಎಂಬ ಮಾತಿದೆ. ಅದೇ ಕಾರಣಕ್ಕೆ ಅವರನ್ನು ಬಿಜೆಪಿ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಮಾತುಗಳೂ‌ ಕೇಳಿಬಂದಿದ್ದವು. ಆದರೀಗ ಅವರು ಕೊರೋನಾದ ಎಲ್ಲಾ ‌ಚಟುವಟಿಕೆಗಳಿಂದ ದೂರ ಉಳಿದು 'ದುರ್ಜನ' ಎನಿಸಿಕೊಳ್ಳುತ್ತಿದ್ದಾರೆ. ಅವರಾಗೇ ದೂರ ಇದ್ದಾರೋ? ದೂರ ಇಡಲ್ಪಡಲಾಗಿದೆಯೋ? ಎಂಬುದನ್ನು ಹೇಳುವುದು ಕಷ್ಟ.

ಥಂಡಾ ನಿರ್ಮಲಾ ಸೀತಾರಾಮನ್!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರದು ಇನ್ನೊಂದು ಕತೆ.‌ ಅವರು ಸದಾ ಕೆಂಡಾಮಂಡಲವಾಗೇ ಇರುತ್ತಾರೆ. ಪತ್ರಕರ್ತರಷ್ಟೇ ಅಲ್ಲ, ಸಂಸದರ ವಿಷಯದಲ್ಲೂ ಅಷ್ಟೇ. ಎಷ್ಟು ಎಂದರೆ ಅವರದೇ ಪಕ್ಷದ ಸಂಸದರು-ಸಚಿವರು ಕೂಡ 'ಆಯಮ್ಮನಾ' ಅಂತಾ ರಾಗ ಎಳೆಯುತ್ತಾರೆ. ಆದರೀಗ ಇಂಥ ಬೆಂಕಿ ಚೆಂಡು ನಿರ್ಮಲಾ ಸೀತಾರಾಮನ್ ಥಂಡಾ ಆಗಿಬಿಟ್ಟಿದ್ದಾರೆ. ದೇಶದ ಎಕಾನಮಿ ಎರ್ರಾಬಿರ್ರಿ ಬೀಳತೊಡಗಿರುವುದು, ಅದನ್ನು ನಿಭಾಯಿಸಲು ಸಾಧ್ಯವಾಗದೇ ಇರುವುದು ಒಂದು ಕಾರಣವಾದರೆ, ಕೊರೋನಾ ಇಶ್ಯು ಕಳೆದ ಮೇಲೆ ಅವರಿಂದ ಹಣಕಾಸು ಖಾತೆ ಕಿತ್ತುಕೊಳ್ಳಲಾಗುತ್ತದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಓಡಾಡುತ್ತಿರುವು ಇನ್ನೊಂದು ಕಾರಣ.

ಸಚಿವರು ಪೇಚು

ಕೊರೋನಾ ಸೋಂಕು ಹರಡುವಿಕೆ ಮತ್ತು ಲಾಕ್​ಡೌನ್ ನಿರ್ವಹಣೆ ಬಗ್ಗೆ ನಿಗಾವಹಿಸಿ ಅಂತಾ ಮೋದಿ ತಮ್ಮ ಸಚಿವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸಚಿವರು ಪ್ರತಿದಿನ ವರದಿ ನೀಡಬೇಕು. ಆದರೆ ನಿಖರವಾದ ವರದಿ ನೀಡಲಾರದೆ ಸಚಿವರು ಪೇಚಿಗೆ ಸಿಲುಕಿದ್ದಾರೆ. ಸಚಿವರ ವರದಿ ಪಿಎಂಓಗೆ ತಲುಪುವಷ್ಟರಲ್ಲಿ ಅವರಿಗೆ ಜವಾಬ್ದಾರಿ ನೀಡಲಾಗಿರುವ ರಾಜ್ಯ-ಜಿಲ್ಲೆಗಳಲ್ಲಿ ಇನ್ನೇನಾದರೊಂದು ಆಗಿರುತ್ತದೆ‌. ಅದನ್ನು ಸೇರಿಸುವುದರೊಂದಿಗೆ ಮತ್ತಿನ್ನೇನಾದರೂ ಒಂದು.

ಮೋದಿ ಮಾತಿಗೆ ಕೇರ್ ಮಾಡದ ಯೋಗಿ

ಈಗ ಬಿಜೆಪಿ ಎಂದರೆ ಮೋದಿ, ಮೋದಿ ಎಂದರೆ ಬಿಜೆಪಿ. ಆದರೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಯೋಗಿ ಗ್ರಾಫು ಕೂಡ ಮೇಲೇರತೊಡಗಿದೆಯಂತೆ. ಯೋಗಿ ಮೊದಲಿನಷ್ಟು ಮೋದಿ ಮಾತನ್ನು ಕೇಳುತ್ತಿಲ್ಲವಂತೆ. ಮೋದಿ ಲಾಕ್​ಡೌನ್ ಘೋಷಣೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಹೇಳಿದ ಮೇಲೂ, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದ ಬಳಿಕವೂ‌ ಯೋಗಿ ರಾಮನವಮಿ ಮಾಡಿದರಂತೆ. ಯೋಗಿ ಗೊತ್ತಿಲ್ಲದೆ ಮಾಡಿದ ತಪ್ಪಲ್ಲ ಇದು ಎನ್ನುತ್ತಾರೆ ಉತ್ತರ ಪ್ರದೇಶ ಮೂಲದವರು.

ಏ. 20ರ ನಿರೀಕ್ಷೆಯಲ್ಲಿ ರಾಜ್ಯ ನಾಯಕರು

ಲಾಕ್​ಡೌನ್ ಶುರುವಾಗಿ ದೆಹಲಿಯಲ್ಲಿ ಹೋಂ ಕ್ವಾರಂಟೈನ್ ಅನುಭವಿಸುತ್ತಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಸಂಸದ ಶಿವಕುಮಾರ್ ಉದಾಸಿ ಈಗ ಏಪ್ರಿಲ್ 20 ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದಾರೆ. ಏಪ್ರಿಲ್ 14ಕ್ಕೆ ಲಾಕ್​ಡೌನ್ ಮುಗಿಯುತ್ತೆ, ಬೆಂಗಳೂರಿಗೆ ಹಾರಿಬಿಡಬಹುದೆಂದು ಮೂವರೂ ಫ್ಲೈಟ್ ಬುಕ್ ಮಾಡಿದ್ದರು. ಆದರೀಗ ಲಾಕ್​ಡೌನ್ ಮುಂದುವರೆದಿದೆ. ಇವರಿಗೆ ಮಾತ್ರ ದೆಹಲಿಯಲ್ಲಿ ಮುಂದುವರೆಯುವುದು ಕಷ್ಟವಾಗುತ್ತಿದೆ. ಜೊತೆಗೆ ದೆಹಲಿಯಲ್ಲಿ ಬಿಸಿಲು ಕೂಡ ಜಾಸ್ತಿ ಆಗುತ್ತಿದೆ. ಅಂದಹಾಗೆ ಹರಿಪ್ರಸಾದ್ ಮತ್ತು ಉದಾಸಿಗೆ ಓದುವ ಅಭ್ಯಾಸ ಇದೆ. ಹರಿಪ್ರಸಾದ್ ಇತಿಹಾಸ, ಸಾಮಾಜಿಕ ವಿಷಯಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳವರು. ಉದಾಸಿ ಆರ್ಥಿಕ ವಿಷಯಗಳ ಮೇಲೆ ಒಲವುಳ್ಳವರು. ಸದಾನಂದಗೌಡರಿಗೆ ಪ್ರತಿದಿನ ಅವರಿಗೆ ಉಸ್ತುವಾರಿ ನೀಡಲಾಗಿರುವ ಕೇರಳ, ಲಕ್ಷದ್ವೀಪಗಳ ಮುಖ್ಯಮಂತ್ರಿಗಳು, ಚೀಫ್ ಸೆಕ್ರೆಟರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುವುದೇ ಕೆಲಸ. ಮಧ್ಯೆ ಮಧ್ಯೆ ಗ್ರೂಪ್ ಆಫ್ ಮಿನಿಸ್ಟರ್ಸ್ ಮೀಟಿಂಗ್
First published: