HOME » NEWS » Coronavirus-latest-news » DELHI LOCKDOWN EXTENDED TILL MAY 24 TO CURB COVID 19 SPREAD SAYS ARVIND KEJRIWAL MAK

LockDown: ದೆಹಲಿಯಲ್ಲಿ ಕೊರೋನಾ ಚೇತರಿಕೆ ಕಂಡರೂ ಮತ್ತೆ ಒಂದು ವಾರ ಲಾಕ್​ಡೌನ್ ವಿಸ್ತರಿಸಿದ ಕೇಜ್ರಿವಾಲ್ ಸರ್ಕಾರ

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,430 ಪ್ರಕರಣಗಳು ದಾಖಲಾಗಿವೆ. ಪಾಸಿಟಿವ್ ಪ್ರಮಾಣವು ಶೇ.10 ಕ್ಕೆ ಇಳಿದಿದೆ. ಕ್ರಮೇಣ ದೆಹಲಿ ಮತ್ತೆ ಟ್ರ್ಯಾಕ್‌ನಲ್ಲಿ ಬರುತ್ತಿದೆ. ಮುಂದಿನ ವಾರ ಚೇತರಿಕೆ ಉತ್ತಮವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

news18-kannada
Updated:May 16, 2021, 4:23 PM IST
LockDown: ದೆಹಲಿಯಲ್ಲಿ ಕೊರೋನಾ ಚೇತರಿಕೆ ಕಂಡರೂ ಮತ್ತೆ ಒಂದು ವಾರ ಲಾಕ್​ಡೌನ್ ವಿಸ್ತರಿಸಿದ ಕೇಜ್ರಿವಾಲ್ ಸರ್ಕಾರ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.
  • Share this:
ನವ ದೆಹಲಿ (ಮೇ 16); ಕೊರೋನಾ ಸೋಂಕನ್ನು ನಿಯಂತ್ರಿಸುವ ಕಾರಣಕ್ಕಾಗಿ ಕಳೆದ 5 ವಾರಗಳಿಂದ ದೆಹಲಿಯಲ್ಲಿ ಲಾಕ್​ಡೌನ್​ ಘೋಷಿಸಲಾಗಿತ್ತು. ಲಾಕ್​ಡೌನ್ ಕಾರಣದಿಂದಾಗಿ ಸೋಂಕು ಇದೀಗ ನಿಯಂತ್ರಣಕ್ಕೆ ಬಂದಿದೆ. ಆದರೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನೂ ಒಂದು ವಾರಗಳ ಕಾಲ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಇಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ದೆಹಲಿಯಲ್ಲಿ ಕೋವಿಡ್​ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಆದರೆ, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇನ್ನೂ ಶೇ.5ಕ್ಕಿಂತ ಕೆಳಕ್ಕೆ ಇಳಿದಿಲ್ಲ. ಹೀಗಾಗಿ ಮತ್ತೊಂದು ವಾರಗಳ ಕಾಲ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ. ಹೀಗಾಗಿ ಕಳೆದ ವಾರ ಸ್ಥಗಿತಗೊಂಡ ಮೆಟ್ರೋ ಸೇವೆ ಸೇರಿದಂತೆ ಎಲ್ಲಾ ಪ್ರಸ್ತುತ ನಿರ್ಬಂಧಗಳು ಜಾರಿಯಲ್ಲಿರುತ್ತವೆ" ಎಂದು ಅವರು ತಿಳಿಸಿದ್ದಾರೆ.

"ಲಾಕ್​ಡೌನ್ ತೀರ್ಮಾನದಿಂದಾಗಿ ಕಳೆದ ಕೆಲವು ದಿನಗಳಲ್ಲಿ ನಾವು ಗಳಿಸಿದ ಲಾಭವನ್ನು ಕಳೆದುಕೊಳ್ಳಲು ಈಗ ಬಯಸುವುದಿಲ್ಲ. ನಾವು ಇನ್ನೂ ಒಂದು ವಾರದವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸುತ್ತಿದ್ದೇವೆ. ನಾಳೆಯ ಬದಲು, ಮುಂದಿನ ಸೋಮವಾರ, ದೆಹಲಿಯಲ್ಲಿ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಏಪ್ರಿಲ್ ಮಧ್ಯದಲ್ಲಿ ಶೇ.35 ರಷ್ಟಿದ್ದ ಪಾಸಿಟಿವ್ ಪ್ರಮಾಣವು ಇದೀಗ ಶೇ.11.32 ಕ್ಕೆ ಇಳಿದಿದೆ. ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಆದರೆ, ಇದನ್ನು ಶೇ.5ಕ್ಕಿಂತ ಕಡಿಮೆ ಮಾಡುವ ಅಗತ್ಯವಿದೆ ಎಂದು ದೆಹಲಿ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ 24 ಗಂಟೆಗಳ ಅವಧಿಯಲ್ಲಿ 6,430 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದು ಏಪ್ರಿಲ್ 7 ರ ನಂತರದ ಅತಿ ಕಡಿಮೆ ಸಂಖ್ಯೆಯಾಗಿದೆ. ಇದೇ ಅವಧಿಯಲ್ಲಿ 337 ಸಾವುಗಳು ಸಂಭವಿಸಿವೆ. ಇದೇ ಕಾರಣಕ್ಕೆ ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ ದೆಹಲಿಯಲ್ಲಿ ಮತ್ತೆ ಲಾಕ್​ಡೌನ್ ವಿಸ್ತರಿಸಲಾಗಿದೆ ಎನ್ನಲಾಗುತ್ತಿದೆ.

"ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,430 ಪ್ರಕರಣಗಳು ದಾಖಲಾಗಿವೆ. ಪಾಸಿಟಿವ್ ಪ್ರಮಾಣವು ಶೇ.10 ಕ್ಕೆ ಇಳಿದಿದೆ. ಕ್ರಮೇಣ ದೆಹಲಿ ಮತ್ತೆ ಟ್ರ್ಯಾಕ್‌ನಲ್ಲಿ ಬರುತ್ತಿದೆ. ಮುಂದಿನ ವಾರ ಚೇತರಿಕೆ ಉತ್ತಮವಾಗಲಿದೆ ಎಂದು ನಾನು ಭಾವಿಸುತ್ತೇನೆ. ಆದರೆ. ನಿರ್ಬಂಧಗಳು ಮೊದಲಿನಂತೆಯೇ ಇರುತ್ತದೆ "ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಕೋವಿಡ್ ಸಂಖ್ಯೆಗಳು ಗಗನಕ್ಕೇರಿದ್ದವು. ಆಕ್ಸಿಜನ್ ಹಾಗೂ ಬೆಡ್​ ಕೊರತೆಯಿಂದಾಗಿ ಕೊರೋನಾ ರೋಗಿಗಳು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ತಮಗೆ ಆಮ್ಜಜನಕದ ಅಗತ್ಯ ಇದೆ ಎಂದು ಆಸ್ಪತ್ರೆ ನೇರವಾಗಿ ಹೈಕೋರ್ಟ್​ಗೆ ಮನವಿ ಮಾಡಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಕೊರೋನಾ ನಿಯಂತ್ರಿಸುವ ಸಲುವಾಗಿ ದೆಹಲಿಯಲ್ಲಿ ಲಾಕ್​ಡೌನ್ ಘೋಷಿಸಲಾಗಿ, 5ನೇ ವಾರ ಸತತವಾಗಿ ಲಾಕ್​ಡೌನ್ ಮುಂದುವರೆದಿದೆ. ಇದೀಗ ಮತ್ತೆ ಒಂದು ವಾರಗಳ ಕಾಲ ಲಾಕ್​ಡೌನ್ ವಿಸ್ತರಿಸಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ತಜ್ಞರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ : CoronaVirus: ಕೋವಿಡ್​ ರೋಗಿಗಳಿಗೆ ಧೈರ್ಯ ತುಂಬಿದ ಕೊಪ್ಪಳದ ಗವಿಮಠದ ಸ್ವಾಮೀಜಿಭಾರತದಾದ್ಯಂತ ಬಹುತೇಕ ಅನೇಕ ರಾಜ್ಯ ಸರ್ಕಾರಗಳು ಇದೀಗ ಲಾಕ್​ಡೌನ್ ಘೋಷಿಸಿವೆ. ಜನ ಮನೆಯಿಂದ ಹೊರ ಬರದಂತೆ ತಡೆಯಲು ನಾನಾ ನಿಯಮಗಳನ್ನು ಜಾರಿಗೆ ತಂದಿವೆ. ಪರಿಣಾಮ ಭಾರತದಲ್ಲೂ ಸಹ ಒಟ್ಟಾರೆಯಾಗಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ವಾರದವರೆಗೆ ದಿನವೊಂದಕ್ಕೆ ಸರಾಸರಿಯಾಗಿ 4 ಲಕ್ಷ ಕೋವಿಡ್​ ಕೇಸ್​ಗಳು ದಾಖಲಾಗುತ್ತಿದ್ದವು. ಸಾವಿನ ಸಂಖ್ಯೆಯೂ ಅಧಿಕವಾಗಿತ್ತು.
Youtube Video

ಆದರೆ, ಈಗ ಕೋವಿಡ್​ ಸಂಖ್ಯೆಯಲ್ಲೂ ಇಳಿಮುಖ ಕಂಡು ಬರುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಸುಮಾರು 3.11 ಲಕ್ಷ ಹೊಸ ಕೋರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ.  ಈ ಮೂಲಕ ಭಾರತವು ಕಳೆದ 25 ದಿನಗಳ ಅಂತರದ ನಂತರ ದೈನಂದಿನ COVID-19 ಪ್ರಕರಣಗಳಲ್ಲಿ ಕಡಿಮೆ ಏರಿಕೆ ಕಂಡಿದೆ ಎನ್ನಲಾಗಿದೆ. ಅಲ್ಲದೆ, ಇಂದು ಬೆಳಿಗ್ಗೆ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ 4,077 ಜನ ಕೋವಿಡ್​ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 2,70,284 ಕ್ಕೆ ಏರಿಕೆಯಾಗಿದೆ.
Published by: MAshok Kumar
First published: May 16, 2021, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories