• ಹೋಂ
  • »
  • ನ್ಯೂಸ್
  • »
  • Corona
  • »
  • Ramdev: ಕೊರೊನಿಲ್ ಬಗ್ಗೆ ಸುಳ್ಳುಸುದ್ದಿ ಹರಡದಂತೆ ದೆಹಲಿ ವೈದ್ಯಕೀಯ ಸಂಘ ಮನವಿ; ಯೋಗಗುರುಗೆ ನೋಟಿಸ್ ಜಾರಿ

Ramdev: ಕೊರೊನಿಲ್ ಬಗ್ಗೆ ಸುಳ್ಳುಸುದ್ದಿ ಹರಡದಂತೆ ದೆಹಲಿ ವೈದ್ಯಕೀಯ ಸಂಘ ಮನವಿ; ಯೋಗಗುರುಗೆ ನೋಟಿಸ್ ಜಾರಿ

ಬಾಬಾ ರಾಮ್​ದೇವ್​​.

ಬಾಬಾ ರಾಮ್​ದೇವ್​​.

ದೆಹಲಿ ವೈದ್ಯಕೀಯ ಸಂಘವನ್ನು ಪ್ರತಿನಿಧಿಸುವ ವಕೀಲ ರಾಜೀವ್ ದತ್ತಾ ಅವರು ಬಾಬಾ ರಾಮ್​ದೇವ್ ಅವರ ಸುಳ್ಳು ಹೇಳಿಕೆಗಳಿಂದಾಗಿ, ಜನರು ಲಸಿಕೆ ಪಡೆಯಲು ನಿರುತ್ಸಾಹ ತೋರಿಸಿದರು. ಇದು ಚುಚ್ಚುಮದ್ದಿನ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಜೀವಗಳಿಗೆ ನೋವುಂಟು ಮಾಡುತ್ತದೆ ಎಂದು ವಾದಿಸಿದರು.

ಮುಂದೆ ಓದಿ ...
  • Share this:

    ನವದೆಹಲಿ: ಪತಂಜಲಿ ಸಂಸ್ಥೆಯ ಕೊರೋನಿಲ್ ಕಿಟ್ ಕೋವಿಡ್-19 ಗುಣಪಡಿಸುತ್ತದೆ ಎಂದು ತಪ್ಪು ಮಾಹಿತಿ ನೀಡಿದ ಯೋಗ ಗುರು ಬಾಬಾ ರಾಮ್​ದೇವ್​ಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ನೀಡಿದೆ. ರಾಮ್​ದೇವ್ ಅವರು ತಮ್ಮ ಸಂಸ್ಥೆಯ ಕೊರೊನಿಲ್ ಕಿಟ್ ಬಗ್ಗೆ ಜನರಿಗೆ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ವೈದ್ಯಕೀಯ ಸಂಘ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.


    ಜುಲೈ 13 ಕ್ಕೆ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕದವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಮತ್ತು ಮೊಕದ್ದಮೆಗೆ ಸ್ಪಂದಿಸಬೇಡಿ ಎಂದು ಹೈಕೋರ್ಟ್ ಮೌಖಿಕವಾಗಿ ರಾಮದೇವ್ ಅವರಿಗೆ ಸೂಚಿಸಿದೆ.


    ಕೋವಿಡ್ -19 ಗೆ ಚಿಕಿತ್ಸೆ ಎಂದು ಹೇಳಲಾದ ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಬಗ್ಗೆ ಸುಳ್ಳು ಮಾಹಿತಿ ಹರಡದಂತೆ ಬಾಬಾ ರಾಮ್‌ದೇವ್ ಅವರಿಗೆ ನಿರ್ದೇಶನ ನೀಡಬೇಕು ಎಂದು ದೆಹಲಿ ವೈದ್ಯಕೀಯ ಸಂಘ ಮನವಿ ಮಾಡಿತ್ತು.


    ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ಬಾಬಾ ರಾಮದೇವ್ ಅವರ ಅಭಿಪ್ರಾಯಗಳನ್ನು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಒಳಗೊಂಡಿದೆ ಮತ್ತು ಅಭಿವ್ಯಕ್ತಿ ಸಾರ್ವಜನಿಕ ಅಭಿಪ್ರಾಯದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. “ಜನರಿಗೆ ವಾಕ್ ಸ್ವಾತಂತ್ರ್ಯವಿಲ್ಲವೇ? ಹೋಮಿಯೋಪತಿ ನಕಲಿ ಎಂದು ನಾನು ಭಾವಿಸಿದರೆ, ಹೋಮಿಯೋಪತಿ ವೈದ್ಯರು ನನ್ನ ವಿರುದ್ಧ ಮೊಕದ್ದಮೆ ಹೂಡಬೇಕೇ? ” ಎಂದು ಅವರು ಪ್ರಶ್ನಿಸಿದರು. ಆದ್ದರಿಂದ, ಮೊಕದ್ದಮೆ ಹೂಡುವುದಕ್ಕಿಂತ ಮಾರಕ ವೈರಸ್‌ಗೆ ಪರಿಹಾರವನ್ನು ಕಂಡು ಹಿಡಿಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ ಎಂದು ದೆಹಲಿ ವೈದ್ಯಕೀಯ ಸಂಘಕ್ಕೆ ನ್ಯಾಯಮೂರ್ತಿ ಹೇಳಿದರು.


    ಇದನ್ನು ಓದಿ: Karnataka Lockdown Extension: ಕರ್ನಾಟಕದಲ್ಲಿ ಜೂನ್​ 14ರವರೆಗೆ ಲಾಕ್​ಡೌನ್ ವಿಸ್ತರಣೆ; ಸಂಜೆ ಘೋಷಿಸಲಿರುವ ಸಿಎಂ


    ದೆಹಲಿ ವೈದ್ಯಕೀಯ ಸಂಘವನ್ನು ಪ್ರತಿನಿಧಿಸುವ ವಕೀಲ ರಾಜೀವ್ ದತ್ತಾ ಅವರು ಬಾಬಾ ರಾಮ್​ದೇವ್ ಅವರ ಸುಳ್ಳು ಹೇಳಿಕೆಗಳಿಂದಾಗಿ, ಜನರು ಲಸಿಕೆ ಪಡೆಯಲು ನಿರುತ್ಸಾಹ ತೋರಿಸಿದರು. ಇದು ಚುಚ್ಚುಮದ್ದಿನ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಜೀವಗಳಿಗೆ ನೋವುಂಟು ಮಾಡುತ್ತದೆ ಎಂದು ವಾದಿಸಿದರು.


    ಅಲೋಪತಿ ಮತ್ತು ಅಲೋಪತಿ ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಐಎಂಎ ಬುಧವಾರ ರಾಮದೇವ್ ಅವರ ಮೇಲೆ ಮಾನಹಾನಿ ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು. ಒಂದು ವೇಳೆ ಕ್ಷಮೆ ಕೇಳಲಿದಿದ್ದರೆ ಯೋಗ ಗುರುಗಳಿಂದ 1,000 ಕೋಟಿ ರೂ. ಪರಿಹಾರವನ್ನು ಸಂಘವು ಕೋರುತ್ತದೆ ಎಂದು ಹೇಳಿದೆ.

    Published by:HR Ramesh
    First published: