Delhi Coronavirus Updates: ದೆಹಲಿಯಲ್ಲಿ ಕೋವಿಡ್​​-19 ಕಾವು: ಒಂದೇ ದಿನ 2,089 ಕೇಸ್​​​, 1.10 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

21,146 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಇಲ್ಲಿಯತನಕ ಸುಮಾರು ಏಳು ಲಕ್ಷ ಮಂದಿಗೆ ಕೋವಿಡ್​​-19 ಟೆಸ್ಟ್​​​ ಮಾಡಲಾಗಿದೆ. ದೆಹಲಿಯಲ್ಲಿ ಕಂಟೈನ್ಮೆಂಟ್ ಜೋನ್​​ಗಳ ಸಂಖ್ಯೆ 448ರಷ್ಟಿದೆ.

news18-kannada
Updated:July 11, 2020, 10:10 AM IST
Delhi Coronavirus Updates: ದೆಹಲಿಯಲ್ಲಿ ಕೋವಿಡ್​​-19 ಕಾವು: ಒಂದೇ ದಿನ 2,089 ಕೇಸ್​​​, 1.10 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ
ಅರವಿಂದ್ ಕೇಜ್ರಿವಾಲ್
  • Share this:
ನವದೆಹಲಿ(ಜು.11): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​​-19 ವೈರಸ್​​ ಆರ್ಭಟ ಮುಂದುವರಿದಿದೆ​. ಹೀಗಾಗಿ ಮಾರಕ ಕೊರೋನಾಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಶುಕ್ರವಾರ ಒಂದೇ ದಿನ 2,089 ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1,09,140ಕ್ಕೆ ಏರಿಕೆಯಾಗಿದೆ ಎಂದು ದೆಹಲಿ ಸರ್ಕಾರದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇನ್ನು, ಒಂದೇ ದಿನ ಮಾರಕ ಕೋವಿಡ್​-19 ಸೋಂಕಿಗೆ 42 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಕೊರೋನಾ ವೈರಸ್​ಗೆ ಬಲಿಯಾದವರ ಸಂಖ್ಯೆ3,300ಕ್ಕೆ ಏರಿಕೆಯಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಪರೀಕ್ಷೆಯಲ್ಲಿ ತೀವ್ರ ಏರಿಕೆ ಹೊರತಾಗಿಯೂ ದೆಹಲಿಯ ಪ್ರತೀ ನಿತ್ಯದ ಕೇಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕುಸಿತ ಕಂಡು ಬಂದಿದೆ. ಈವರೆಗೂ ಒಟ್ಟು 1,09,140 ಪ್ರಕರಣಗಳಲ್ಲಿ 84694 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 21,146 ಸಕ್ರಿಯ ಕೇಸುಗಳು ಮಾತ್ರ ಇವೆ.

21,146 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಇಲ್ಲಿಯತನಕ ಸುಮಾರು ಏಳು ಲಕ್ಷ ಮಂದಿಗೆ ಕೋವಿಡ್​​-19 ಟೆಸ್ಟ್​​​ ಮಾಡಲಾಗಿದೆ. ದೆಹಲಿಯಲ್ಲಿ ಕಂಟೈನ್ಮೆಂಟ್ ಜೋನ್​​ಗಳ ಸಂಖ್ಯೆ 448ರಷ್ಟಿದೆ.

ಇನ್ನು, ಭಾರತದಲ್ಲಿ ನಿನ್ನೆ 26,506 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 7,93,802ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಂದೇ ದಿನ ಕೊರೋನಾಗೆ 475 ಮಂದಿ ಅಸುನೀಗಿದ್ದಾರೆ.

ಇನ್ನು, ವಿಶ್ವದಾದ್ಯಂತ ಕಳೆದ 24 ಗಂಟೆಯಲ್ಲಿ 228,102 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಗತ್ತಿನ ವಿವಿಧ ದೇಶಗಳಲ್ಲಿ ಸೋಂಕಿತರ ಸಂಖ್ಯೆಯೂ 1 ಕೋಟಿ 25 ಲಕ್ಷ ದಾಟಿದೆ. ಇದುವರೆಗೂ ಕೊರೋನಾಗೆ ಕಳೆದ ಏಳು ತಿಂಗಳಿನಲ್ಲಿ 559,000 ಜನರ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇದನ್ನೂ ಓದಿ: Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆ

ಈ ಮಧ್ಯೆ ಮೊನ್ನೆ ಮೊನ್ನೆಯಷ್ಟೇ ಮಾರಕ ರೋಗವಾಗಿ ಪರಿಣಮಿಸಿರುವ ಕೊರೋನಾಗೆ ಆಗಸ್ಟ್ 15ರೊಳಗೆ ಕೋವ್ಯಾಕ್ಸಿನ್ ಲಭ್ಯವಾಗಲಿದೆ ಎಂಬ ಶುಭಸುದ್ದಿ ಸಿಕ್ಕಿತ್ತು. ಆದರೀಗ ಕೇಂದ್ರ ಸರ್ಕಾರದ ಅಧಿಕಾರಿಗಳ ಪ್ರಕಾರ 2021ಕ್ಕೂ ಮೊದಲು ಯಾವುದೇ ರೀತಿಯ ಲಸಿಕೆ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಂಸದೀಯ ಸಮಿತಿ ಸಭೆಗೆ‌ ಅಧಿಕಾರಿಗಳು ಇಂಥ ನಿರಾಶಾದಾಯಕ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
Published by: Ganesh Nachikethu
First published: July 11, 2020, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading