ಮೊದಲ ದಿನದಿಂದ ಕೇಜ್ರಿವಾಲ್​ ದೆಹಲಿ ಜನತೆಗೆ ಸುಳ್ಳನ್ನೇ ಹೇಳುತ್ತಿದ್ದಾರೆ-ಸಂಸದ ಗೌತಮ್​ ಗಂಭೀರ್​

ನ್ಯೂಸ್​18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ಮೊದಲ ದಿನದಿಂದಲೂ ಸುಳ್ಳನ್ನೇ ಹೇಳುತ್ತಾ ಬಂದಿದೆ ಎಂದಿದ್ದಾರೆ.

ಗೌತಮ್ ಗಂಭೀರ್.

ಗೌತಮ್ ಗಂಭೀರ್.

 • Share this:
  ನವದೆಹಲಿ (ಜೂ.10): ದೆಹಲಿಯಲ್ಲಿ ಕೊರೋನಾ ಪ್ರಕರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಶಾಕಿಂಗ್​ ವಿಚಾರ ಬಿಚ್ಚಿಟ್ಟಿರುವ ದೆಹಲಿ ಆಪ್​ ಸರ್ಕಾರ ಜುಲೈ ಮಧ್ಯಂತರದ ವೇಳೆಗೆ ದೆಹಲಿಯಲ್ಲಿ 2.15 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ ಆಗಲಿವೆ ಎಂದು ಹೇಳಿದೆ. ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಆಮ್​ ಆದ್ಮಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

  ನ್ಯೂಸ್​18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ಮೊದಲ ದಿನದಿಂದಲೂ ಸುಳ್ಳನ್ನೇ ಹೇಳುತ್ತಾ ಬಂದಿದೆ ಎಂದಿದ್ದಾರೆ.

  “ಹೊರ ಬಂದು ನೀವು ಸತ್ಯವನ್ನು ಮಾತನಾಡಿ. ಕೇಜ್ರಿವಾಲ್​ ಸರ್ಕಾರ ಮೊದಲ ದಿನದಿಂದ ಸುಳ್ಳನ್ನೇ ಹೇಳುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬುದನ್ನು ಜನರೆದುರು ಬಂದು ಹೇಳಿ. ರೋಗದ ಲಕ್ಷಣ ಇಲ್ಲದವರು ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಡಿ ಎಂದು ಕೇಜ್ರಿವಾಲ್​ ಹೇಳುತ್ತಾರೆ. ಆದರೆ ಅದು ಸರಿ ಅಲ್ಲ. ದೇಹಲಿ ಜನತೆ ಜೊತೆ ಅವರು ಪ್ರಾಮಾಣಿಕರಾಗಿರಬೇಕು. ಏನಾದರೂ ಅಗತ್ಯಬಿದ್ದರೆ ನಮ್ಮನ್ನು ಕೇಳಲಿ ನಾವು ಸಹಾಯ ಮಾಡುತ್ತೇವೆ,” ಎಂದು ಸಹಾಯದ ಭರವಸೆ ನೀಡಿದರು ಗೌತಮ್​.

  ಇದನ್ನೂ ಓದಿ: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಪಾಸಿಟಿವ್‌; ದೆಹಲಿ ಆಸ್ಪತ್ರೆಗೆ ದಾಖಲು

  ದೆಹಲಿಯಲ್ಲಿ ಮದ್ಯದಂಗಡಿಗಳನ್ನು ತೆಗೆದಿರುವ ವಿಚಾರವಾಗಿಯೂ ಗೌತಮ್​ ಗಂಭೀರ್​ ಕಿಡಿ ಕಾರಿದ್ದಾರೆ. “ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಕೇಜ್ರಿವಾಲ್​ ಮಾಡಿದ ದೊಡ್ಡ ಬ್ಲಂಡರ್​. ಇದರ ತೊಂದರೆಗಳು ಹಾಗೂ ಲಾಭಗಳ ಬಗ್ಗೆ ಮೊದಲೇ ಆಲೋಚನೆ ಮಾಡಬೇಕಿತ್ತು. ಮದ್ಯ ತೆಗೆದುಕೊಳ್ಳಲು ಐದು ಕಿಮೀ ಸಾಲಿತ್ತು. ಹೋಟೆಲ್​ಗಳಿಗೆ ಈವರೆಗೆ ಸರ್ಕಾರದಿಂದ ಯಾವುದೇ ಗೈಡ್​ಲೈನ್ ಬಂದಿಲ್ಲ. ಇದು ದೆಹಲಿ ತೆರೆಯಲು ಸರಿಯಾದ ಸಮಯವಲ್ಲ. ಆದರೆ, ಅವರ ಬಳಿ ಹಣವಿಲ್ಲ. ಹೀಗಾಗಿ ದೆಹಲಿ ಓಪನ್​ ಮಾಡಿದ್ದಾರೆ,” ಎಂದು ಆರೋಪಿಸಿದರು.
  First published: