HOME » NEWS » Coronavirus-latest-news » DELHI DOCTOR COMMITTED SUICIDE DUE TO SEVERE STRESS AMID THE DEADLY SECOND WAVE COVID SESR

ಕಣ್ಣೆದುರೇ ಸಾವನ್ನಪ್ಪುತ್ತಿರುವ ಸೋಂಕಿತರು; ರೋಗಿಗಳ ನೋವು ಕಂಡು ವೈದ್ಯ ಆತ್ಮಹತ್ಯೆ

ರೋಗಿಗಳು ತಮ್ಮ ಕಣ್ಣ ಎದುರೇ ಸಾವನ್ನಪ್ಪುತ್ತಿರುವುದನ್ನು ಕಣ್ಣಾರೆ ಕಂಡ ಅವರು ಭಾವನೆಗೆ ಒಳಗಾಗಿ ಮಾನಸಿಕವಾಗಿ ಕುಸಿದಿದ್ದಾರೆ

news18-kannada
Updated:May 1, 2021, 9:42 PM IST
ಕಣ್ಣೆದುರೇ ಸಾವನ್ನಪ್ಪುತ್ತಿರುವ ಸೋಂಕಿತರು; ರೋಗಿಗಳ ನೋವು ಕಂಡು ವೈದ್ಯ ಆತ್ಮಹತ್ಯೆ
ಸಾವನ್ನಪ್ಪಿದ ವೈದ್ಯ
  • Share this:
ನವದೆಹಲಿ (ಮೇ 1): ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣ ಮೀರಿದೆ. ಎಲ್ಲಾ ಆಸ್ಪತ್ರೆಗಳು ಸೋಂಕಿತ ರೋಗಿಗಳಿಂದ ಭರ್ತಿಯಾಗಿದೆ. ಬೆಡ್​ ಸಮಸ್ಯೆ, ಆಕ್ಸಿಜನ್​ ಸಮಸ್ಯೆಯಿಂದ ಸೋಂಕಿತರು ನರಳುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ವೈದ್ಯರು ಸೋಂಕಿತರ ಆರೈಕೆಯಲ್ಲಿ ಬಸವಳಿದು ಹೋಗಿದ್ದಾರೆ. ನಿರಂತರವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಆರೈಕೆಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಇದೇ ರೀತಿ ಬಿಡುವಿಲ್ಲದೇ ಸೋಂಕಿತರ ಉಪಚಾರಕ್ಕೆ ನಿಂತ ವೈದ್ಯರು ಅಲ್ಲಿನ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೋರಕ್​ಪುರದ ವೈದ್ಯ ವಿವೇಕ್​ ರೈ ಜೀವ ಕಳೆದುಕೊಂಡ ರ್ದುದೈವಿ.

ಈ ಕುರಿತು ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ ನ ಮಾಜಿ ಮುಖ್ಯಸ್ಥ ಡಾ ವಾಂಖೇಡ್ಕೆಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ವಿವೇಕ್​ ರೈ ಪ್ರತಿಭಾನ್ವಿತ ವೈದ್ಯರಾಗಿದ್ದರು. ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ನಿರಂತರವಾಗಿ ಸೋಂಕಿತ ರೋಗಿಗಳ ಚಿಕಿತ್ಸೆ ಮಾಡುತ್ತಿದ್ದರು. ಪ್ರತಿನಿತ್ಯ ಏಳರಿಂದ ಎಂಟು ಚಿಂತಾಜನಕ ಸೋಂಕಿತರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅನೇಕರು ಪ್ರಾಣ ಕಳೆದುಕೊಳ್ಳುವುದನ್ನು ನೋಡುತ್ತಿದ್ದ ಅವರಲ್ಲಿ ಒಂದು ರೀತಿಯ ಖಿನ್ನತೆ ಆವರಿಸಿದೆ.
ಸೋಂಕಿನ ಪರಿಸ್ಥಿತಿ ಅವರಲ್ಲಿ ಸಾಕಷ್ಟು ಒತ್ತಡ ಉಂಟು ಮಾಡಿದೆ. ರೋಗಿಗಳು ತಮ್ಮ ಕಣ್ಣ ಎದುರೇ ಸಾವನ್ನಪ್ಪುತ್ತಿರುವುದನ್ನು ಕಣ್ಣಾರೆ ಕಂಡ ಅವರು ಭಾವನೆಗೆ ಒಳಗಾಗಿ ಮಾನಸಿಕವಾಗಿ ಕುಸಿದಿದ್ದಾರೆ. ಈ ಹಿನ್ನಲೆ ಇಂತಹ ನಿರ್ಧಾರ ಕೈ ಗೊಂಡಿದ್ದಾರೆ ಎಂದಿದ್ದಾರೆ.

ಇನ್ನು ವಿವೇಕ್​ ರೈ ಅವರ ಹೆಂಡತಿ ಕೂಡ ಕೂಡ ವೈದ್ಯರಾಗಿದ್ದು, ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಕೋವಿಡ್​ ಬಿಕ್ಕಟ್ಟನ್ನು ನಿರ್ವಹಿಸುವಾಗ ಭಾವನಾತ್ಮಕವಾಗಿ ವೈದ್ಯರು ಯಾವ ರೀತಿ ಒತ್ತಡಕ್ಕೆ ಒಳಗಾಗುತ್ತಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆ ಹೇಗೆ ಅವರನ್ನು ಹತಾಶರನ್ನಾಗಿ ಮಾಡುತ್ತದೆ. ಈ ಮೂಲಕ ಮೂಲಭೂತ ಅವ್ಯವಸ್ಥೆ, ಕೆಟ್ಟ ವಿಜ್ಞಾ, ಕೆಟ್ಟ ಆಡಳಿತ ಮತ್ತು ರಾಜಕೀಯ ಹೇಗೆ ಯುವ ವೈದ್ಯರನ್ನು ಕೊಲ್ಲುತ್ತಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸಾವಿನ ವೇಳೆ ವೈದ್ಯರು ಬರೆದಿರುವ ಡೆತ್​ನೋಟ್​ ಅನ್ನು ದಕ್ಷಿಣ ದೆಹಲಿಯ ಮಾಲ್ವಿಯಾ ನಗರ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಏಮ್ಸ್​ಗೆ ಕಳುಹಿಸಲಾಗಿದ್ದು, ಈ ಕುರಿತು ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಾದ್ರೂ ನಿದ್ದೆಯಿಂದ ಎದ್ದು ಕೆಲಸ ಮಾಡಬೇಕು-ಸೋನಿಯಾ ಗಾಂಧಿ ಕಿಡಿ!

ದೇಶದಲ್ಲಿ ಕೋವಿಡ್​ ಎರಡನೇ ಅಲೆ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಇದರಿಂದಾಗಿ ವೈದ್ಯಕೀಯ ತುರ್ತು ಬಿಕ್ಕಟ್ಟು ಎದುರಾಗಿದೆ. ದೆಹಲಿ ಮಾತ್ರವಲ್ಲದೇ ಅನೇಕ ರಾಜ್ಯಗಳಲ್ಲಿ ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಬೆಡ್​ಸಿಗದೇ ಇತರೆ ಸೋಂಕಿತರು ಪರದಾಡುವಂತೆ ಆಗಿದೆ.

ಎರಡನೇ ಅಲೆ ಸೋಂಕು ಹೆಚ್ಚು ಭೀಕರವಾಗಿದ್ದು, ಅತಿ ಹೆಚ್ಚಿನ ಜನರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಆಕ್ಸಿಜನ್​ಗಾಗಿ ಪರಿತಪಿಸುತ್ತಿದ್ದಾರೆ.

ಇಂದು  ಕೂಡ ಆಮ್ಲಜನಕದ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ವೈದ್ಯರು ಸೇರಿದಂತೆ ಕನಿಷ್ಠ 8 ರೋಗಿಗಳು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ. ಆಮ್ಲಜನಕದ ಕೊರತೆಯಿಂದಾಗಿಯೇ ರೋಗಿಗಳು ಸಾವನ್ನು ಅಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.
Published by: Seema R
First published: May 1, 2021, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories