Delhi Coronavirus Updates: ದೆಹಲಿಯ ಮಂಡೋಲಿ ಜೈಲಿಗೂ ತಟ್ಟಿದ ಕೊರೋನಾ ಬಿಸಿ: ಐವರು ಕೈದಿಗಳಿಗೆ ಸೋಂಕು

Mandoli Jail: ಸದ್ಯ ಕೊರೋನಾ ಕಾಣಿಸಿಕೊಂಡ ಮಂಡೋಲಿ ಜೈಲಿನ ಐವರು ಕೈದಿಗಳಿಗೆ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯ ಕೋವಿಡ್​​-19 ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಟ್ರೀಟ್​​ಮೆಂಟ್​​ ಮುಂದುವರಿಸಲಾಗಿದೆ.

news18-kannada
Updated:June 29, 2020, 10:01 AM IST
Delhi Coronavirus Updates: ದೆಹಲಿಯ ಮಂಡೋಲಿ ಜೈಲಿಗೂ ತಟ್ಟಿದ ಕೊರೋನಾ ಬಿಸಿ: ಐವರು ಕೈದಿಗಳಿಗೆ ಸೋಂಕು
ಜೈಲು ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂ.29): ಭಾರತದ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್​ ಅಟ್ಟಹಾಸ ಮುಂದುವರಿದಿದೆ. ನಿನ್ನೆ ಭಾನುವಾರ ದೆಹಲಿಯಲ್ಲಿ ಮಂಡೋಲಿ ಜೈಲಿನಲ್ಲೆ ಮತ್ತೆ ಐವರಿಗೆ ಕೊರೋನಾ ವೈರಸ್​​ ಬಂದಿದೆ. ಈ ಮೂಲಕ ಕೇವಲ ದೆಹಲಿ ಜೈಲಿಗಳಲ್ಲಿ ಇದುವರೆಗೂ 45 ಮಂದಿಗೆ ಕೋವಿಡ್​​-19 ಸೋಂಕು ತಗುಲಿರುವುದಾಗಿ ವರದಿಯಾಗಿದೆ.

ಇನ್ನು, ದೆಹಲಿಯ ತಿಹಾರ್​​​, ಮಂಡೋಲಿ, ರೋಹಿಣಿ ಜೈಲುಗಳಲ್ಲಿ ಇದುವರೆಗೂ 45 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಮಂಡೋಲಿ ಜೈಲಿನಲ್ಲಿ ಕೋವಿಡ್​​-19 ಕೈದಿಯೋರ್ವ ಮೃತಪಟ್ಟ ನಂತರ ಈತನೊಂದಿಗೆ ಇದ್ದ ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದೆವು. ಕೋವಿಡ್​​-19 ಟೆಸ್ಟ್​​ಗೆ ಒಳಗಾದ 29 ಮಂದಿ ಕೈದಿಗಳ ಪೈಕಿ 17 ಮಂದಿಗೆ ಕೊರೋನಾ ಪಾಸಿಟಿವ್​​ ಕಾಣಿಸಿಕೊಂಡಿದೆ ಎಂದು ಹಿರಿಯ ಜೈಲಿನ ಅಧಿಕಾರಿ ತಿಳಿಸಿದ್ದಾರೆ.

ಸದ್ಯ ಕೊರೋನಾ ಕಾಣಿಸಿಕೊಂಡ ಮಂಡೋಲಿ ಜೈಲಿನ ಐವರು ಕೈದಿಗಳಿಗೆ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿಯ ಕೋವಿಡ್​​-19 ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಟ್ರೀಟ್​​ಮೆಂಟ್​​ ಮುಂದುವರಿಸಲಾಗಿದೆ.


ಇದನ್ನೂ ಓದಿ: Bangalore Sealdown: ಬೆಂಗಳೂರಲ್ಲಿ ಈವರೆಗೆ 31 ಪೊಲೀಸ್ ಸ್ಟೇಷನ್ ಸೀಲ್​ಡೌನ್; 140ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು

ಹೊಸ ಐದು ಪಾಸಿಟಿವ್​ ಕೇಸುಗಳ ಮೂಲಕ ಇದುವರೆಗೂ ಕೈದಿ ಸೋಂಕಿತರ ಸಂಖ್ಯೆ 45 ಆಗಿದೆ. ಈ ಪೈಕಿ 17 ಮಂದಿ ಗುಣಮುಖರಾಗಿದ್ದು, ಓರ್ವ ಕೋವಿಡ್​​-19 ರೋಗಿ ಅಸುನೀಗಿದ್ದಾರೆ ಎಂದು ಗೋಯಲ್​​ ಎಂಬುವರು ತಿಳಿಸಿದ್ಧಾರೆ.ಅ
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading