Delhi Coronavirus: ದೆಹಲಿಯಲ್ಲಿ ಕೋವಿಡ್​​-19: ಒಂದೇ ದಿನ 2,909 ಕೇಸ್​​​, 60 ಸಾವಿರ ದಾಟಿದ ಸೋಂಕಿತರ ಸಂಖ್ಯೆ

Delhi Coronavirus Updates: ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು 3 ಸಾವಿರ ದಾಟುತ್ತಲೇ ಇವೆ. ಹೀಗಾಗಿ ಇದನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಸಿಎಂ ಅರವಿಂದ್​​​​ ಕೇಜ್ರಿವಾಲ್​​ ಮೂರನೇ ಬಾರಿಗೆ ವರ್ಚುವಲ್​​​ ಸಭೆ ಮಾಡಿದ್ದಾರೆ.

news18-kannada
Updated:June 23, 2020, 9:21 AM IST
Delhi Coronavirus: ದೆಹಲಿಯಲ್ಲಿ ಕೋವಿಡ್​​-19: ಒಂದೇ ದಿನ 2,909 ಕೇಸ್​​​, 60 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೊರೋನಾ ವಾರಿಯರ್ಸ್
  • Share this:
ನವದೆಹಲಿ(ಜೂ.23): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೋವಿಡ್​​-19 ವೈರಸ್​​ ಹಾವಳಿ ಮುಂದುವರೆದಿದೆ. ಸೋಮಾವರ ಒಂದೇ ದಿನದಲ್ಲಿ ಸುಮಾರು 2,909 ಮಂದಿಗೆ ಕೊರೋನಾ ಪಾಸಿಟಿವ್​​ ಕಾಣಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ರಾಜ್ಯ, ಸರ್ಕಾರದ ಪ್ರಕಾರ ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2,909 ಕೊರೋನಾ ಪಾಸಿಟಿವ್​​ ಕೇಸುಗಳು ಪತ್ತೆಯಾದ ಪರಿಣಾಮ ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 62,655ಕ್ಕೆ ಏರಿಕೆಯಾಗಿದೆ. ಜತೆಗೆ ಈ ಮಹಾಮಾರಿ ಕೋವಿಡ್​​-19 ಸೋಂಕಿಗೆ ಒಂದೇ ದಿನ 58 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇದುವರೆಗೂ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 2,233 ಆಗಿದೆ.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು 3 ಸಾವಿರ ದಾಟುತ್ತಲೇ ಇವೆ. ಹೀಗಾಗಿ ಇದನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಸಿಎಂ ಅರವಿಂದ್​​​​ ಕೇಜ್ರಿವಾಲ್​​ ಮೂರನೇ ಬಾರಿಗೆ ವರ್ಚುವಲ್​​​ ಸಭೆ ಮಾಡಿದ್ದಾರೆ.

ಇದನ್ನೂ ಓದಿ: Petrol Price: 17 ದಿನಗಳಿಂದ ನಿರಂತರವಾಗಿ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ

ಈ ಮಧ್ಯೆ ಇತ್ತೀಚೆಗಷ್ಟೇ ಕೊರೋನಾ ಸೋಂಕಿಗೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​​​ ಪ್ಲಾಸ್ಮಾ ಚಿಕಿತ್ಸೆ ನೀಡಿದ ಕಾರಣ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿತ್ತು.

ಜೈನ್ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಹಿನ್ನೆಲೆಯಲ್ಲಿ ಮ್ಯಾಕ್ಸ್ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಪ್ಲಾಸ್ಮಾ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿತ್ತು. ಚಿಕಿತ್ಸೆ ಬಳಿಕ ಈಗ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಆರೋಗ್ಯ ಸಚಿವರಿಗೆ ಕೋವಿಡ್​​-19 ಕಾಣಿಸಿಕೊಂಡ ಕಾರಣ ಈ ಸೋಂಕು ಯಾರನ್ನ ಯಾವಾಗ ಬಲಿ ತೆಗೆದುಕೊಳ್ಳಲಿದೆಯೋ ಎಂದು ಜನ ಆತಂಕದಲ್ಲಿದ್ದಾರೆ.
First published: June 23, 2020, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading