Coronavirus In Delhi: ದೆಹಲಿ ಬೆಟಾಲಿಯನ್​ ಒಂದರಲ್ಲೇ 122 ಸಿಆರ್​ಪಿಎಫ್​ ಯೋಧರಿಗೆ ಕೊರೋನಾ!

Delhi Coronavirus Updates: ದೆಹಲಿಯ ಸಿಆರ್​ಪಿಎಫ್​ ಬೆಟಾಲಿಯನ್ ಒಂದರಲ್ಲೇ ಕೊರೋನಾ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 127 ಸಿಆರ್​ಪಿಎಫ್ ಸಿಬ್ಬಂದಿಗೆ ಕೊರೋನಾ ತಗುಲಿದಂತಾಗಿದೆ.

ಭಾರತೀಯ ಸೈನಿಕರ ಪ್ರಾತಿನಿಧಿಕ ಚಿತ್ರ

ಭಾರತೀಯ ಸೈನಿಕರ ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ (ಮೇ 2): ದೇಶದಲ್ಲಿ ಕೊರೋನಾ ವೈರಸ್​​ಗೆ ಈಗಾಗಲೇ ಓರ್ವ ಸಿಆರ್​ಪಿಎಫ್​ ಯೋಧ ಬಲಿಯಾಗಿದ್ದಾರೆ. ದೇಶ ಕಾಯುವ ನೂರಾರು ಸೈನಿಕರಿಗೆ ಕೊರೋನಾ ಸೋಂಕು ತಗುಲಿದೆ. ದೆಹಲಿ ಸಿಆರ್​ಪಿಎಫ್​ ಬೆಟಾಲಿಯನ್ ಒಂದರಲ್ಲೇ 122 ಯೋಧರಿಗೆ ಕೊರೋನಾ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ದೆಹಲಿ ಬೆಟಾಲಿಯನ್​ನಲ್ಲಿ ಹೊಸದಾಗಿ 68 ಜನರಿಗೆ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಈ ಬೆಟಾಲಿಯನ್​ನಲ್ಲಿ ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಇನ್ನೂ 100ಕ್ಕೂ ಅಧಿಕ ಯೋಧರ ಪರೀಕ್ಷೆಯ ವರದಿ ಹೊರಬೀಳಬೇಕಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ 55 ವರ್ಷದ ಸಿಆರ್​ಪಿಎಫ್​ ಯೋಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು.ದೆಹಲಿಯ ಸಿಆರ್​ಪಿಎಫ್​ ಬೆಟಾಲಿಯನ್ ಒಂದರಲ್ಲೇ ಕೊರೋನಾ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 127 ಸಿಆರ್​ಪಿಎಫ್ ಸಿಬ್ಬಂದಿಗೆ ಕೊರೋನಾ ತಗುಲಿದಂತಾಗಿದೆ. ಇದುವರೆಗೂ ಓರ್ವ ಯೋಧ ಸಾವನ್ನಪ್ಪಿದ್ದು, ಓರ್ವ ಸಿಬ್ಬಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನೂ ಓದಿ: ಕೊರೋನಾಗೆ ದೇಶದಲ್ಲಿ ಮೊದಲ ಯೋಧ ಬಲಿ; ಮಾರಕ ಸೋಂಕಿನಿಂದ ಸಿಆರ್​ಪಿಎಫ್​ ಸಿಬ್ಬಂದಿ ಸಾವು

ಈಗ ಕೊರೋನಾ ಪಾಸಿಟಿವ್ ಬಂದಿರುವ ಯೋಧರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆ ಯೋಧರೆಲ್ಲರಿಗೂ ರಜೆ ನೀಡಲಾಗಿದ್ದು, 14 ದಿನಗಳ ಕಾಲ ಮನೆಯೊಳಗೇ ಇರುವಂತೆ ಯೋಧರಿಗೆ ಸೂಚನೆ ನೀಡಲಾಗಿದೆ. ರಜೆಯ ಮೇಲೆ ತೆರಳಿದ್ದ ನರ್ಸಿಂಗ್​ ಅಸಿಸ್ಟೆಂಟ್​ ಇತ್ತೀಚೆಗೆ ಕೆಲಸಕ್ಕೆ ವಾಪಾಸಾಗಿದ್ದರು. ಅವರಿಂದ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಆ ವ್ಯಕ್ತಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ, ಯಾವ ಮೂಲದಿಂದ ಭಾರತೀಯ ಸೇನೆಗೆ ಕೊರೋನಾ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
First published: