• ಹೋಂ
  • »
  • ನ್ಯೂಸ್
  • »
  • Corona
  • »
  • Covid Vaccine: ವ್ಯಾಕ್ಸಿನ್​ ಫಾರ್ಮುಲಾವನ್ನು ಇತರೆ ಕಂಪನಿಗಳಿಗೂ ನೀಡಿ, ಲಸಿಕೆ ಕೊರತೆ ನೀಗಿಸಿ; ಕೇಂದ್ರಕ್ಕೆ ದೆಹಲಿ ಸಿಎಂ ಸಲಹೆ

Covid Vaccine: ವ್ಯಾಕ್ಸಿನ್​ ಫಾರ್ಮುಲಾವನ್ನು ಇತರೆ ಕಂಪನಿಗಳಿಗೂ ನೀಡಿ, ಲಸಿಕೆ ಕೊರತೆ ನೀಗಿಸಿ; ಕೇಂದ್ರಕ್ಕೆ ದೆಹಲಿ ಸಿಎಂ ಸಲಹೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ಲಸಿಕೆ ಉತ್ಪಾದನೆ ಮಾಡುತ್ತಿರುವ ಎರಡು ಕಂಪನಿಗಳು ಒಂದು ಕೋಟಿ ಲಸಿಕೆ ಉತ್ಪಾದನೆ ಮಾಡಲು ಆರರಿಂದ ಏಳು ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಈ ರೀತಿಯಾದರೆ ದೇಶದ ಪ್ರತಿಯೊಬ್ಬರಿಗೆ ಲಸಿಕೆ ನೀಡಲು ಇನ್ನು ಎರಡು ವರ್ಷ ಸಮಯ ಬೇಕಾಗುತ್ತದೆ

  • Share this:

    ನವದೆಹಲಿ (ಮೇ. 11): ಕೋವಿಡ್​ ಸೋಂಕಿನ ವಿರುದ್ಧ ರಕ್ಷಣೆಗಾಗಿ ಜನರು ಲಸಿಕೆಗಾಗಿ ಮುಗಿಬೀಳುತ್ತಿದ್ದು, ದೇಶದ ಎಲ್ಲಡೆ ಲಸಿಕೆ ಅಲಭ್ಯತೆ ಕಂಡು ಬಂದಿದೆ. ಇದೇ ಹಿನ್ನಲೆ ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕೆ ವಿತರಣೆ ಕಾರ್ಯ ಇನ್ನು ಆರಂಭಗೊಂಡಿಲ್ಲ. ಈ ಹಿನ್ನಲೆ ಕೇಂದ್ರಕ್ಕೆ ಸಲಹೆ ನೀಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ದೇಶದಲ್ಲಿ ಪ್ರಸ್ತುತ ಸೆರಂ ಮತ್ತು ಭಾರತ್​ ಬಯೋಟೆಕ್​ ಕಂಪನಿಗಳು ಮಾತ್ರ ಈ ಕೋವಿಡ್​ ಲಸಿಕೆ ಉತ್ಪಾದನೆ ಮಾಡುತ್ತಿದೆ. ಲಸಿಕೆ ಉತ್ಪಾದನೆಗೆ ಇನ್ನು ಹಲವು ಕಂಪನಿಗಳಿಗೆ ಅವಕಾಶ ನೀಡಿ. ಈ ಮೂಲಕ ಲಸಿಕೆ ಕೊರತೆಯನ್ನು ನೀಗಿಸಬೇಕು ಎಂದು ಮನವಿ ಮಾಡಿದ್ದಾರೆ. ಸೆರಂ ಸಂಸ್ಥೆ ಕೋವಿಶೀಲ್ಡ್​ ಉತ್ಪಾದನೆ ಮಾಡುತ್ತಿದ್ದು, ಭಾರತ್​ ಬಯೋಟೆಕ್​ ಕೋವಾಕ್ಸಿನ್​ ಉತ್ಪಾದಿಸುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಿಸುವಲ್ಲಿ ಎರಡು ಕಂಪನಿಗಳು ಹರಸಾಹಸ ನಡೆಸುತ್ತಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್​ ವಿ ಕೋವಿಡ್​ ಪರೀಕ್ಷೆ ಪಾಸ್​ ಮಾಡಿದ್ದರೂ ಅದು ದೇಶದಲ್ಲಿ ಸಿಗುವುದಕ್ಕೆ ಇನ್ನು ಹೆಚ್ಚಿನ ಸಮಯ ಬೇಕಾಗಿದೆ.


    ಈ ಹಿನ್ನಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿ ಪತ್ರ ಬರೆದಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಲಸಿಕೆ ತಯಾರಿಸಲು ಹೆಚ್ಚಿನ ಸಂಸ್ಥೆಗಳಿಗೆ ಅವಕಾಶ ನೀಡುವ ಮೂಲಕ ಪೂರೈಕೆಯನ್ನು ಹೆಚ್ಚಿಸಬಹುದು ಎಂದಿದ್ದಾರೆ.


    ಲಸಿಕೆ ಉತ್ಪಾದನೆ ಮಾಡುತ್ತಿರುವ ಎರಡು ಕಂಪನಿಗಳು ಒಂದು ಕೋಟಿ ಲಸಿಕೆ ಉತ್ಪಾದನೆ ಮಾಡಲು ಆರರಿಂದ ಏಳು ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಈ ರೀತಿಯಾದರೆ ದೇಶದ ಪ್ರತಿಯೊಬ್ಬರಿಗೆ ಲಸಿಕೆ ನೀಡಲು ಇನ್ನು ಎರಡು ವರ್ಷ ಸಮಯ ಬೇಕಾಗುತ್ತದೆ. ಸೋಂಕಿನ ಮತ್ತಷ್ಟು ಅಲೆ ಎದುರಾಗಲಿದ್ದು, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.


    ಇದನ್ನು ಓದಿ: ಕೊರೋನಾಗೆ ಹಸುವಿನ ಸಗಣಿ, ಗಂಜಲವೇ ರಾಮಬಾಣ ಎನ್ನುತ್ತಿವೆ ಆಶ್ರಮಗಳು; ವೈದ್ಯರಿಂದ ಎಚ್ಚರಿಕೆ


    ಈ ಹಿನ್ನಲೆ ಸರ್ಕಾರ ಎರಡು ಕಂಪನಿಗಳಿಂದ ಲಸಿಕೆ ಸೂತ್ರವನ್ನು ಪಡೆದು ಇತರೆ ಕಂಪನಿಗೆ ನೀಡಬೇಕು. ಈ ಮೂಲಕ ಲಸಿಕೆಗಳನ್ನು ಸುರಕ್ಷಿತವಾಗಿ ಉತ್ಪಾದಿಸಬಹುದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಂಪನಿಗಳಿಂದ ಲಸಿಕೆ ಸೂತ್ರ ಪಡೆದು ಬೇರೆ ಕಂಪನಿಗಳಿಗೆ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಈ ಕುರಿತು ಕೇಂದ್ರ ಗಮನಹರಿಸಬೇಕು. ಈ ಮೂಲಕ ಪ್ರತಿಯೊಬ್ಬ ಭಾರೀಯನಿಗೂ ಲಸಿಕೆ ಸಿಗವಂತೆ ಆಗಬೇಕು. ಇದಕ್ಕಾಗಿ ನಾವು ಕೂಡ ಕಾರ್ಯನಿರ್ವಹಿಸಲು ಸಿದ್ಧವಿದ್ದೇವೆ ಎಂದಿದ್ದಾರೆ.


    ದೆಹಲಿಯಲ್ಲಿ ಪ್ರತಿನಿತ್ಯ 1. 25 ಲಕ್ಷ ಡೋಸ್​ ಲಸಿಕೆ ನೀಡಲಾಗುತ್ತಿದೆ. ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕುತ್ತಿದ್ದೇವೆ. ರಾಜ್ಯದ ಎಲ್ಲರಿಗೂ ಮೂರು ತಿಂಗಳೊಳಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಆದರೆ, ಲಸಿಕೆ ಕೊರತೆ ನಮಗೆ ಎದುರಾಗಿದೆ ಎಂದಿದ್ದಾರೆ ಕೇಜ್ರಿವಾಲ್​​.


    ಇದೇ ವೇಳೆ ದೆಹಲಿಯಲ್ಲಿ ಸೋಂಕಿನ ಇಳಿಕೆ ಬಗ್ಗೆ ಕೂಡ ಅವರು ಮಾತನಾಡಿದ್ದು, ಜನರ ಸಹಕಾರದಿಂದ ಲಾಕ್​ಡೌನ್​ ಯಶಸ್ವಿಯಾಗಿದೆ. ಆಕ್ಸಿಜನ್​ ಬೆಡ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸದ್ಯ ಐಸಿಯು ಮತ್ತು ಆಕ್ಸಿಜನ್​ ಬೆಡ್​ ಕೊರತೆ ಇಲ್ಲ ಎಂದಿದ್ದಾರೆ.

    Published by:Seema R
    First published: