• ಹೋಂ
 • »
 • ನ್ಯೂಸ್
 • »
 • Corona
 • »
 • Delhi Lockdown: ದೆಹಲಿಯಲ್ಲಿ ಸಮ-ಬೆಸ ಆಧಾರದ ಮೇಲೆ ಮಾಲ್​, ಮಾರ್ಕೆಟ್​ ತೆರೆಯಲು ಅನುಮತಿ

Delhi Lockdown: ದೆಹಲಿಯಲ್ಲಿ ಸಮ-ಬೆಸ ಆಧಾರದ ಮೇಲೆ ಮಾಲ್​, ಮಾರ್ಕೆಟ್​ ತೆರೆಯಲು ಅನುಮತಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ಖಾಸಗಿ ಕಚೇರಿಗಳು ಕೂಡ ಶೇ 50ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಸಿಬ್ಬಂದಿಗಳನ್ನು ಕಚೇರಿಗೆ ಕರೆದುಕೊಳ್ಳಬಹುದು

 • Share this:

  ನವದೆಹಲಿ (ಜೂ. 5): ಎರಡನೇ ಅಲೆ ಕೊರೋನಾ ಸೋಂಕಿಗೆ ತತ್ತರಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದೆ. ಕಳೆದವಾರವಷ್ಟೇ ಈ ಕುರಿತು ತಿಳಿಸಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಜ್ಞರ ಅಭಿಪ್ರಾಯದಂತೆ ಹಂತಹಂತವಾಗಿ ಲಾಕ್​ಡೌನ್​ ಸಡಿಲ ಮಾಡಲಾಗುವುದು ಎಂದಿದ್ದರು. ಮೊದಲ ಹಂತದಲ್ಲಿ ಅವರು ಕಟ್ಟಡ ಕಾರ್ಮಿಕ ಸೇರಿ ಬಡ ಕುಟುಂಬದ ಜೀವನ ನಿರ್ವಹಣೆಗೆ ಸಹಾಯವಾಗುವಂತೆ ಅನ್​ಲಾಕ್​ ಪ್ರಕ್ರಿಯೆ ನಡೆಸಿದ್ದರು. ಇದೀಗ ಎರಡನೇ ಹಂತದ ಅನ್​ಲಾಕ್​ ಪ್ರಕ್ರಿಯೆಗೆ ಅವರು ಹಸಿರು ನಿಶಾನೆ ತೋರಿದ್ದಾರೆ. ಆದರೂ ಕೂಡ ಕೆಲವು ನಿರ್ಬಂಧಗಳು ಮುಂದುವರೆಯಲಿದ್ದು, ಜೂನ್​ 14ರವರೆಗೆ ಲಾಕ್​ಡೌನ್​ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.


  ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ- ಬೆಸ ಸಂಖ್ಯೆ ಆಧಾರದ ಮೇಲೆ ಮಾರ್ಕೆಟ್​ ಮತ್ತು ಮಾಲ್​ಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ, ಶೇ 50 ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಮೆಟ್ರೋ ಚಾಲನೆಗೆ ಸೋಮವಾರದಿಂದ ಅವಕಾಶ ನೀಡಲಾಗಿದೆ.


  ಖಾಸಗಿ ಕಚೇರಿಗಳು ಕೂಡ ಶೇ 50ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಸಿಬ್ಬಂದಿಗಳನ್ನು ಕಚೇರಿಗೆ ಕರೆದುಕೊಳ್ಳಬಹುದು. ಸರ್ಕಾರಿ ಕಚೇರಿಯಲ್ಲಿ 100ರಷ್ಟು ಸಾಮರ್ಥ್ಯದ ಆಧಾರದ ಮೇಲೆ ಕೆಲಸ ನಿರ್ವಹಿಸಬಹುದು ಎಂದಿದ್ದು, ಗ್ರೂಪ್​ ಬಿ ವರ್ಷಕ್ಕೆ ಮಾತ್ರ ಶೇ 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಿದ್ದಾರೆ.


  ಮೂರನೇ ಅಲೆ ಕೋವಿಡ್​ ಸೋಂಕು ಎದುರಿಸಲು ಆಡಳಿತ ಸಜ್ಜಾಗಿದೆ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲು ಅಪಾಯ ಇರುವ ಹಿನ್ನಲೆ ಮಕ್ಕಳ ಕಾರ್ಯಪಡೆ ಸ್ಥಾಪಿಸಲಾಗಿದೆ. ನಗರದ ಲೋಕ ನಾಯಕರ್​ ಜೈ ಪ್ರಕಾಶ್​ ಆಸ್ಪತ್ರೆ ಮತ್ತು ಇನ್ಸಿಟ್ಯಾಟ್​ ಆಫ್​ ಲಿವರ್​ ಮತ್ತು ಬಿಲಿಯರಿ ಸೈನ್ಸಸ್​ನಲ್ಲಿ ಜಿನೋಮ್​ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುವುದು. ಕೋವಿಡ್​ ಮೂರನೇ ಅಲೆಗಾಗಿ 420 ಟನ್​ ಆಮ್ಲಜನಕ ಸಂಗ್ರಹದ ಸಾಮರ್ಥ್ಯವನ್ನು ಸಿದ್ಧಪಡಿಸಲಾಗುತ್ತಿದೆ, 150 ಟನ್​ ಆಮ್ಲಜನಕವನ್ನು ಉತ್ಪಾದಿಸಲು ಈಗಾಗಲೇ ಇಂದ್ರಪ್ರಸ್ಥ ಗ್ಯಾಸ್​ ಲಿಮಿಟೆಡ್​ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು


  ಇದನ್ನು ಓದಿ: ಕೋವಿಡ್​ ಬಿಕ್ಕಟ್ಟಿನಲ್ಲಿ ಮೃಗಾಲಯಗಳು; ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್​ ಮನವಿ


  ಆಸ್ಪತ್ರೆ, ಹೆಲ್ತ್​ ಕೇರ್​, ಪೊಲೀಸ್​, ಅಗ್ನಿ ಶಾಮಕ ಘಟಕ ಗಳು ಸೇರಿದಂತ ಹಲವು ಅಗತ್ಯ ಸೇವೆಗಳು ಶೇ 100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ,
  ಎಲ್ಲಾ ರೀತಿಯ ಸರಕುಗಳ ಡೆಲಿವರಿಗೆ ಅವಕಾಶ ನೀಡಲಾಗಿದೆ, ಇ ಕಾಮರ್ಸ್​ ಗಳ ಡೆಲಿವರಿಗೂ ಅನುಮತಿ ನೀಡಲಾಗಿದೆ.


  ಇಳಿಕೆ ಹಾದಿಯಲ್ಲಿ ಸೋಂಕು


  ಎರಡನೇ ಅಲೆ ಕೊರೋನಾ ಸೋಂಕಿನಲ್ಲಿ ದಾಖಲೆ ಮಟ್ಟದ ಏರಿಕೆ ಕಂಡು ಜಗತ್ತಿನ ಗಮನ ಸೆಳೆದ ಭಾರತದಲ್ಲಿ ಕಳೆದ ಒಂಭತ್ತು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದೆ, ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾಗುವವರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿವೆ. ಕೊರೋನಾದಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಚಿಗರುತ್ತಲೇ ಇದೆ. ಇದರಿಂದಾಗಿ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗಬಹುದು ಎಂಬ ಲಕ್ಷಣಗಳು ಗೋಚರಿಸತೊಡಗಿವೆ. ಎರಡು ತಿಂಗಳಲ್ಲೇ ನಿನ್ನೆ (ಜೂನ್ 4ರಂದು) ಅತ್ಯಂತ ಕಡಿಮೆ ಕೊರೋನಾ ಕೇಸುಗಳು ಪತ್ತೆ ಆಗಿವೆ


  ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು.

  Published by:Seema R
  First published: