HOME » NEWS » Coronavirus-latest-news » DELHI AAP GOVERNMENT IMPOSED A SPECIAL CORONA TAX ON ALCOHOL MAK

ದೆಹಲಿಯಲ್ಲಿ ಸಿಕ್ಕಾಪಟ್ಟೆ ಕಹಿಯಾಗಲಿದೆ ಎಣ್ಣೆ; ಮದ್ಯದ ಮೇಲೆ ವಿಶೇಷ ಕೊರೋನಾ ಸುಂಕ ವಿಧಿಸಿದ ಆಪ್‌ ಸರ್ಕಾರ

ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೋಢೀಕರಣ ಮತ್ತು ಮದ್ಯದ ಅಂಗಡಿಗಳ ಮುಂದೆ ಜನ ಜಂಗುಳಿಯನ್ನು ನಿಯಂತ್ರಿಸಲು ಮುಂದಾಗಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ಮುಂದಾಗಿದೆ.

news18-kannada
Updated:May 5, 2020, 8:51 AM IST
ದೆಹಲಿಯಲ್ಲಿ ಸಿಕ್ಕಾಪಟ್ಟೆ ಕಹಿಯಾಗಲಿದೆ ಎಣ್ಣೆ; ಮದ್ಯದ ಮೇಲೆ ವಿಶೇಷ ಕೊರೋನಾ ಸುಂಕ ವಿಧಿಸಿದ ಆಪ್‌ ಸರ್ಕಾರ
ಪ್ರಾತಿನಿಧಿಕ ಚಿತ್ರ
  • Share this:
ನವ ದೆಹಲಿ (ಮೇ 05); ರಾಷ್ಟ್ರದಾದ್ಯಂತ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ನಿನ್ನೆಯಿಂದಲೇ ಮದ್ಯ ಮಾರಾಟ ಜೋರಾಗಿದೆ. ಈ ನಡುವೆ ದೆಹಲಿ ಸರ್ಕಾರ ಮದ್ಯದ ಮೇಲೆ ವಿಶೇಷ ಕೊರೋನಾ ತೆರಿಗೆ ವಿಧಿಸಿದ್ದು ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಮದ್ಯ ಸಿಕ್ಕಾಪಟ್ಟೆ ಕಹಿಯಾಗಿದೆ. ಮದ್ಯಪ್ರಿಯರಿಗೆ ನಿರಾಸೆ ಉಂಟಾಗಿದೆ. 

ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೋಢೀಕರಣ ಮತ್ತು ಮದ್ಯದ ಅಂಗಡಿಗಳ ಮುಂದೆ ಜನ ಜಂಗುಳಿಯನ್ನು ನಿಯಂತ್ರಿಸಲು ಮುಂದಾಗಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ಮುಂದಾಗಿದೆ. ಇಂದಿನಿಂದ ಎಣ್ಣೆ ಮೇಲೆ ಶೇ.70ರಷ್ಟು ವಿಶೇಷ ಕೊರೋನಾ ಶುಲ್ಕ ವಿಧಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ದೆಹಲಿಯ 150 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದ್ಯಪ್ರಿಯರು ದಿನವಿಡೀ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಿದ್ದರು. ಆದರೆ, ಈ ವೇಳೆ ಹಲವು ಕಡೆಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಯಡವಟ್ಟು ಮಾಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಕಡಿಮೆ ಮಾಡಬೇಕು ಎಂದು ಯೋಚಿಸಿರುವ ದೆಹಲಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟ; ಎಣ್ಣೆ ಸಿಕ್ಕ ಖುಷಿಗೆ ದೇವರ ಗುಡಿಯ ಮುಂದೆ ಧ್ಯಾನಿಸಿದ ಕುಡುಕ!
First published: May 5, 2020, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories