HOME » NEWS » Coronavirus-latest-news » DEEPIKA PADUKONE FATHER PRAKASH PADUKONE HOSPITALIZED DUE TO COVID 19 SESR

Prakash Padukone: ಪ್ರಕಾಶ್​ ಪಡುಕೋಣೆಗೆ ಕೋವಿಡ್​ ಸೋಂಕು; ಆಸ್ಪತ್ರೆಗೆ ದಾಖಲಾದ ಬ್ಯಾಡ್ಮಿಂಟನ್​ ದಿಗ್ಗಜ

ಕಳೆದ ಹತ್ತು ದಿನಗಳ ಹಿಂದೆ ಪ್ರಕಾಶ್​ ಪಡುಕೋಣೆ ಅವರ ಹೆಂಡತಿ ಮತ್ತು ಎರಡನೇ ಮಗಳಲ್ಲಿ ಸೋಂಕು ಕಂಡು ಬಂದಿತು.

news18-kannada
Updated:May 4, 2021, 5:27 PM IST
Prakash Padukone: ಪ್ರಕಾಶ್​ ಪಡುಕೋಣೆಗೆ ಕೋವಿಡ್​ ಸೋಂಕು; ಆಸ್ಪತ್ರೆಗೆ ದಾಖಲಾದ ಬ್ಯಾಡ್ಮಿಂಟನ್​ ದಿಗ್ಗಜ
ಮಗಳು ದೀಪಿಕಾ ಜೊತೆ ಅಪ್ಪ ಪ್ರಕಾಶ್​ ಪಡುಕೋಣೆ
  • Share this:
ಖ್ಯಾತ ಬ್ಯಾಡ್ಮಿಂಟನ್​ ದಿಗ್ಗಜರಲ್ಲಿ ಒಬ್ಬರಾಗಿರುವ ಪ್ರಕಾಶ್​ ಪಡುಕೋಣೆ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಇತ್ತೀಚಿಗಷ್ಟೇ ಪ್ರಕಾಶ್​ ಪಡುಕೋಣೆ ಮತ್ತು ಅವರ ಹೆಂಡತಿ ಉಜ್ವಲಾ ಹಾಗೂ ಅವರ ಎರಡನೇ ಮಗಳು ಅನಿಶಾ ಕೋವಿಡ್​ ಸೋಂಕಿಗೆ ತುತ್ತಾಗಿದ್ದರು. ಹೋಂ ಐಸೋಲೇಷನ್​ಗೆ ಒಳಗಾಗಿದ್ದ ಪ್ರಕಾಶ್​ ಪಡುಕೋಣೆಗೆ ಜ್ವರ ತಗದ ಹಿನ್ನಲೆ ಅವರುನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 65 ವರ್ಷದ ಪಡುಕೋಣೆ ಆರೋಗ್ಯ ಸ್ಥಿರವಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಅವರು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಪ್ರಕಾಶ್​ ಪಡುಕೋಣೆ ಬ್ಯಾಡ್ಮಿಂಟರ್​ ಅಕಾಡೆಮಿಯ​ ಕೋಚ್​​ ವಿಮಲ್​ ಕುಮಾರ್​, ಕಳೆದ ಹತ್ತು ದಿನಗಳ ಹಿಂದೆ ಪ್ರಕಾಶ್​ ಪಡುಕೋಣೆ ಅವರ ಹೆಂಡತಿ ಮತ್ತು ಎರಡನೇ ಮಗಳಲ್ಲಿ ಸೋಂಕು ಕಂಡು ಬಂದಿತು. ಪರೀಕ್ಷೆಗೆ ಒಳಗಾದ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆ ಅವರು ಐಸೋಲೇಷನ್​ಗೆ ಒಳಗಾಗಿದ್ದರು. ಶನಿವಾರದವರೆಗೂ ಅವರ ಜ್ವರ ಕಡಿಕಮೆಯಾಗಿಲ್ಲ ಈ ಹಿನ್ನಲೆ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರು ಹುಷಾರಾಗಿದ್ದಾರೆ. ಇನ್ನು ಎರಡು ಮೂರು ದಿನದಲ್ಲಿ ಡಿಸ್ಚಾರ್ಜ್​ ಆಗುತ್ತಾರೆ ಎಂದಿದ್ದಾರೆ.

1970 ಮತ್ತು 80ರ ದಶಕದಲ್ಲಿ ವಿಶ್ವ ಬ್ಯಾಡ್ಮಿಂಟನ್​ನಲ್ಲಿ ಹೆಸರು ಮಾಡಿದವರು ಪ್ರಕಾಶ್​​ ಪಡುಕೋಣೆ, ಮೂಲತಃ ದಕ್ಷಿಣ ಕನ್ನಡ ಮೂಲದ ಇವರು 1983ರ ಆವೃತ್ತಿಯಲ್ಲಿ ಇಂಗ್ಲೆಡ್​ ಚಾಂಪಿಯನ್​ ಶಿಪ್​ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಇವರಾಗಿದ್ದಾರೆ. ಡೆನ್ಮಾರ್ಕ್​ ಓಪನ್​, ಆಲ್​ ಇಂಗ್ಲೆಡ್​ ಚಾಂಪಿಯನ್​ ಶಿಪ್​ ಮತ್ತು ಸ್ವೀಡಿಷ್​ ಓಪನ್​ನಲ್ಲಿ ಒಂದರ ಹಿಂದೆ ಒಂದರಂತೆ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದರು. 1980ರಲ್ಲಿ ವಿಶ್ವದ ನಂಬರ್​ ಒನ್​ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಇದನ್ನು ಓದಿ: ಶಾಕಿಂಗ್​: ಬೆಂಗಳೂರಿನ ಅರ್ಧದಷ್ಟು ಜನರು ಸೋಂಕಿತರ ಸಂಪರ್ಕಕ್ಕೆ ಒಳಗಾದವರು; ಸಮೀಕ್ಷೆಯಲ್ಲಿ ಬಹಿರಂಗ

1991ರಲ್ಲಿ ಬಾಡ್ಮಿಂಟನ್​ನಿಂದ ನಿವೃತ್ತಿ ಪಡೆದ ಅವರು ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಆಫ್​ ಇಂಡಿಯಾ (ಬಿಎಐ) ಅಧ್ಯಕ್ಷರಾಗಿದ್ದರು. 1993ರಿಂದ 1996ರವರೆಗೆ ಭಾರತೀಯ ತಂಡದ ಕೋಚ್​ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಪ್ರಕಾಶ್​ ಪಡುಕೋಣೆ ಮೊದಲ ಮಗಳು ದೀಪಿಕಾ ಪಡುಕೋಣೆಯಾಗಿದ್ದು, ಬಾಲಿವುಡ್​ನ ಪ್ರಖ್ಯಾತ ನಟಿಯಾಗಿದ್ದಾರೆ. ಸ್ಟೇಟ್​ಲೆವೆಲ್​ ಬ್ಯಾಡ್ಮಿಂಟನ್​ ಆಟಗಾರ್ತಿಯಾಗಿರುವ ನಟಿ ಮಾಡೆಲಿಂಗ್​ ಜಗತ್ತಿನಲ್ಲಿ ಗುರಿತಿಸಿಕೊಂಡು ಬಾಲಿವುಡ್​ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಕೋವಿಡ್​ ಹಿನ್ನಲೆ ಮುಂಬೈನಲ್ಲಿ ಲಾಕ್​ಡೌನ್​ ಘೋಷಿಸಿದ ಬಳಿಕ ದೀಪಿಕಾ ಪತಿ ರಣಬೀರ್​ ಸಿಂಗ್​ ಸಮೇತ ಬೆಂಗಳೂರಿನ ತಂದೆ ಪ್ರಕಾಶ್​ ಪಡುಕೋಣೆ ಮನೆಗೆ ಆಗಮಿಸಿದ್ದು, ಸಾಕಷ್ಟು ಸುದ್ದಿಯಾಗಿತ್ತು.

ಇನ್ನು ಮತ್ತೊಬ್ಬ ಮಗಳು ಅನಿಶಾ ಪಡುಕೋಣೆ ಅಂತರಾಷ್ಟ್ರೀಯ ಗಾಲ್ಫ್​ ಆಟಗಾರ್ತಿಯಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
Published by: Seema R
First published: May 4, 2021, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories