HOME » NEWS » Coronavirus-latest-news » DECODING LONG COVID A GASTROENTEROLOGIST EXPLAINS WHY ACIDITY LOSS OF APPETITE SHOULDNT BE IGNORED MAK

ಲಾಂಗ್ ಕೋವಿಡ್ ಅಂದರೆ ಏನು..? ಆ್ಯಸಿಡಿಟಿ, ಹಸಿವಿನ ಕೊರತೆಯನ್ನು ಏಕೆ ನಿರ್ಲಕ್ಷಿಸಬಾರದು?; ಇಲ್ಲಿದೆ ಮಾಹಿತಿ

ಕೋವಿಡ್‌ ನೆಗೆಟಿವ್‌ ಬಂದ 3 ತಿಂಗಳೊಳಗೆ ಯಾವುದೇ ಸಮಯದಲ್ಲಿ ಜಿಐ ಸೀಕ್ವೆಲೆ ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಲ್ಯಾನ್ಸೆಟ್ ವರದಿಯ ಸಂಶೋಧನೆಗಳು ಸೂಚಿಸುತ್ತವೆ.

Trending Desk
Updated:June 13, 2021, 10:59 PM IST
ಲಾಂಗ್ ಕೋವಿಡ್ ಅಂದರೆ ಏನು..? ಆ್ಯಸಿಡಿಟಿ, ಹಸಿವಿನ ಕೊರತೆಯನ್ನು ಏಕೆ ನಿರ್ಲಕ್ಷಿಸಬಾರದು?; ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ.
  • Share this:

ಭಾರತದಲ್ಲಿ ಸದ್ಯ ಮಾರಕ ಕೊರೊನಾದ ಎರಡನೇ ಅಲೆ ಅಂತ್ಯವಾಗುತ್ತಿದ್ದು, ಚೇತರಿಸಿಕೊಳ್ಳುತ್ತಿರುವ ಹಲವಾರು ರೋಗಿಗಳು ನಿರಂತರ ರೋಗಲಕ್ಷಣಗಳನ್ನು ಎದುರಿಸುತ್ತಿದ್ದಾರೆ. ಹಾಗೂ, ದೀರ್ಘಾವಧಿಯವರೆಗೆ ಅನೇಕ ಲಕ್ಷಣಗಳನ್ನು ಎದುರಿಸಬೇಕಾದ ಸಾಧ್ಯತೆ ಇದೆ. ಈಗ ಇದನ್ನು ವೈದ್ಯರು ‘ಲಾಂಗ್ ಕೋವಿಡ್’ ಎಂದು ವ್ಯಾಖ್ಯಾನಿಸಿದ್ದಾರೆ. ಈ ಬಗ್ಗೆ ನ್ಯೂಸ್‌ 18 ಜತೆ ಮಣಿಪಾಲ್‌ ಆಸ್ಪತ್ರೆಯ ಡಾ. ಕುನಾಲ್ ದಾಸ್ ಎಂಬ ಗ್ಯಾಸ್ಟ್ರೋಎಂಟರಾಲಜಿಸ್ಟ್, ಜಠರಗರುಳಿನ ಸೀಕ್ವೆಲೇ, ಆ್ಯಸಿಡ್ ರಿಫ್ಲಕ್ಸ್ ಮತ್ತು ಹಸಿವಿನ ನಷ್ಟದ ಬಗ್ಗೆ ವಿವರಿಸಿರುವುದು ಹೀಗೆ.. ಲಾಂಗ್ ಕೋವಿಡ್ ಹಲವಾರು ರೋಗಲಕ್ಷಣಗಳನ್ನು ಒಳಗೊಂಡಿರಬಹುದು, ಅವುಗಳಲ್ಲಿ ಒಂದು ಗ್ಯಾಸ್ಟ್ರೋಇಂಟೆಸ್ಟೈನಲ್‌ ಅಥವಾ ಜಠರಗರುಳಿನ ಸೀಕ್ವೆಲೇ. ಇದರಲ್ಲಿ ಹಸಿವು, ವಾಕರಿಕೆ, ಆ್ಯಸಿಡ್ ರಿಫ್ಲಕ್ಸ್ ಮತ್ತು ಅತಿಸಾರವನ್ನು ಒಳಗೊಂಡಿದೆ. ಕೊರೊನಾ ನೆಗೆಟಿವ್‌ ಬಂದ ಬಳಿಕ ಅಥವಾ ರೋಗಿ ಚೇತರಿಸಿಕೊಂಡ ಬಳಿಕವೂ ಸುಮಾರು ಮೂರು ತಿಂಗಳ ಕಾಲ ಈ ಲಕ್ಷಣಗಳು ಮುಂದುವರಿಯಬಹುದು ಎಂದು ಅಧ್ಯಯನಗಳು ಹೇಳುತ್ತವೆ.


“ಕೋವಿಡ್ -19 ಪ್ರಾಥಮಿಕ ಉಸಿರಾಟದ ವ್ಯವಸ್ಥೆಯ ಮೂಲಕ ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 60% ರೋಗಿಗಳಲ್ಲಿ ಗ್ಯಾಸ್ಟ್ರೋಇಂಟೆಸ್ಟೈನಲ್‌ ಲಕ್ಷಣಗಳು ಕಂಡುಬರುತ್ತವೆ. ಕೊರೊನಾ ಎರಡನೇ ಅಲೆಯಲ್ಲಿ, ಹೆಚ್ಚಿನ ಕೋವಿಡ್ ರೋಗಿಗಳಲ್ಲಿ ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದ ಲಕ್ಷಣಗಳನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ” ಎಂದು ಡಾ. ದಾಸ್‌ ಹೇಳಿದ್ದಾರೆ.

ಮೇ 2021 ರಲ್ಲಿ ಲ್ಯಾನ್ಸೆಟ್ ಗ್ಯಾಸ್ಟ್ರೋ ಹೆಪಟೋಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೊರೊನಾದಿಂದ ಚೇತರಿಸಿಕೊಂಡ 44% ರೋಗಿಗಳಲ್ಲಿ ಜಿಐ ಸಿಕ್ವೆಲೇ ಇದೆ ಎಂದು ದಾಸ್ ಹೇಳಿದರು.


ಈ ಗ್ಯಾಸ್ಟ್ರೋಇಂಟಸ್ಟೈನಲ್‌ ಸ್ಥಿತಿಗೆ ಹೈಪೋಕ್ಸಿಯಾ ಕಾರಣವಾಗಿರಬಹುದು ಎಂದು ಲ್ಯಾನ್ಸೆಟ್ ವರದಿ ಮಾಡಿದೆ. ಆಮ್ಲಜನಕದ ಪೂರೈಕೆಯು ಕಡಿಮೆಯಾದ ಕಾರಣ ದೇಹದ ಒಂದು ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಆಮ್ಲಜನಕದ ಶುದ್ಧತ್ವವು ತೀವ್ರವಾದ ನ್ಯುಮೋನಿಯಾಕ್ಕೆ ನಿಕಟ ಸಂಬಂಧ ಹೊಂದಿರುವ ಲಕ್ಷಣವಾಗಿದೆ ಮತ್ತು ಇದು ಜಠರಗರುಳಿನ ಸೀಕ್ವೆಲೇಗೆ ಸಂಬಂಧಿಸಿದೆ. "ಹೈಪೋಕ್ಸಿಯಾವು ಕೋವಿಡ್-19 ರೋಗಿಗಳಲ್ಲಿ ಡಿಸ್ಪ್ನಿಯಾದೊಂದಿಗೆ ಮಾತ್ರವಲ್ಲದೆ ಡಿಸ್ಪ್ನಿಯಾ ಇಲ್ಲದ ಅನೇಕ ರೋಗಿಗಳಲ್ಲಿಯೂ ಕಂಡುಬರುತ್ತದೆ" ಎಂದು ಈ ಅಧ್ಯಯನವು ಹೇಳಿದೆ.


ಇದನ್ನೂ ಓದಿ: Petrol Price: ಪೆಟ್ರೋಲ್‌ ದರ ಹೆಚ್ಚಳಕ್ಕೆ ಕಾರಣವೇನು?; ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟನೆ!

ಕಿಬ್ಬೊಟ್ಟೆಯ ತೊಂದರೆ, ಬೆಲ್ಚಿಂಗ್, ವಾಂತಿ ಮತ್ತು ಹೊಟ್ಟೆ ನೋವಿನಂತಹ ಕೆಲವು ಕಡಿಮೆ ಸಾಮಾನ್ಯ ಲಕ್ಷಣಗಳು ಸಹ ಜಿಐ ಸೀಕ್ವೆಲೆಯ ಲಕ್ಷಣಗಳಾಗಿರಬಹುದು ಎಂದು ಡಾ. ದಾಸ್‌ ವಿವರಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ, ಜನರಿಗೆ ಮಲದೊಂದಿಗೆ ರಕ್ತ ಬಂದಿದೆ. ಈ ಹಿನ್ನೆಲೆ ಕೊರೊನಾದಿಂದ ಚೇತರಿಕೆಯಾದ ಜನರಲ್ಲಿ ಅಂತಹ ಲಕ್ಷಣಗಳು ಕಂಡುಬಂದರೆ, ಅವರು ವಿಳಂಬ ಮಾಡದೆ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದೂ ಡಾ. ದಾಸ್‌ ಸಲಹೆ ನೀಡಿದ್ದಾರೆ.


ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ SUVಗಳಲ್ಲಿ ಒಂದಾದ ಮರ್ಸಿಡಿಸ್‌-ಮೇಬ್ಯಾಕ್ ಜಿಎಲ್ಎಸ್ 600: ಬೆಲೆ ಎಷ್ಟು ಗೊತ್ತಾ..?

ಕೋವಿಡ್‌ ನೆಗೆಟಿವ್‌ ಬಂದ 3 ತಿಂಗಳೊಳಗೆ ಯಾವುದೇ ಸಮಯದಲ್ಲಿ ಜಿಐ ಸೀಕ್ವೆಲೆ ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಲ್ಯಾನ್ಸೆಟ್ ವರದಿಯ ಸಂಶೋಧನೆಗಳು ಸೂಚಿಸುತ್ತವೆ. ಜಿಐ ಸೀಕ್ವೆಲೆಯಿಂದ ಬಳಲುತ್ತಿರುವ ರೋಗಿಗಳು ಡಿಸ್ಪ್ನಿಯಾ ಮತ್ತು ಮೈಯಾಲ್ಜಿಯಾದೊಂದಿಗೆ ಹೆಚ್ಚಾಗಿ ಸಂಬಂಧ ಹೊಂದಿದ್ದಾರೆಂದು ಸಹ ಕಂಡುಬಂದಿದೆ.



Youtube Video

ಜಿಐ ರೋಗಲಕ್ಷಣಗಳ ಚಿಕಿತ್ಸೆಯು ಆ್ಯಂಟಾಸಿಡ್‌, ಆ್ಯಂಟಿ-ಎಮೆಟಿಕ್ಸ್ ಮತ್ತು ಆ್ಯಂಟಿ-ಡಯೇರಿಯಲ್‌ ಏಜೆಂಟ್‌ಗಳ ರೋಗಲಕ್ಷಣದ ಬಳಕೆಯಾಗಿದೆ. ಹೆಚ್ಚಾಗಿ ಅವರಿಗೆ ಆ್ಯಂಟಿ-ಬಯಾಟಿಕ್ಸ್‌ ಅಥವಾ ಯಾವುದೇ ದುಬಾರಿ ಚಿಕಿತ್ಸಾ ಇನ್ವೆಸ್ಟಿಗೇಷನ್‌ನ ಅಗತ್ಯವಿಲ್ಲ. ಉತ್ತಮ ಮತ್ತು ಪೌಷ್ಟಿಕ ಆಹಾರವನ್ನು ಹೊಂದಿರುವುದು ಬಹಳ ಮುಖ್ಯ ಹಾಗೂ ಅಂತಹ ರೋಗಿಗಳ ಚೇತರಿಕೆಗೆ ಸಹಾಯ ಮಾಡುತ್ತದೆ. ಅಲ್ಲದೆ, ನಿಯಮಿತ ವ್ಯಾಯಾಮ ಮತ್ತು ಒತ್ತಡ ರಹಿತ ಜೀವನಶೈಲಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದೂ ಗ್ಯಾಸ್ಟರೋಎಂಟರಾಲಜಿಸ್ಟ್‌ ಡಾ. ದಾಸ್‌ ಹೇಳಿದರು.

First published: June 13, 2021, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories