ಕೊರೊನಾ ವೈರಸ್: ಚಿಂತೆಗೊಂಡ ಭಾರತದ ಸ್ಮಾರ್ಟ್​ಫೋನ್ ಉದ್ಯಮ; ಅತಂತ್ರಗೊಂಡ ಹಡಗುಗಳು

ಜಪಾನ್ ದೇಶದ ಕರಾವಳಿ ತೀರದ ಸಮೀಪ ಇರುವ ಡೈಮಂಡ್ ಪ್ರಿನ್ಸೆಸ್ ಹಡಗಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇಲ್ಲಿ ಇನ್ನೂ 39 ಜನರು ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ಧಾರೆ. ಅಲ್ಲಿಗೆ ಈ ಹಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 174ಕ್ಕೆ ಏರಿದಂತಾಗಿದೆ. ಈ ಹಡಗಿನಲ್ಲಿ ಭಾರತೀಯರೂ ಇದ್ದಾರೆ.

ಚೀನಾದ ಆಂಬುಲೆನ್ಸ್

ಚೀನಾದ ಆಂಬುಲೆನ್ಸ್

  • News18
  • Last Updated :
  • Share this:
ಬೆಂಗಳೂರು(ಫೆ. 12): ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಅಥವಾ ಕೋವಿಡ್-19 ವೈರಸ್ ಇಡೀ ವಿಶ್ವಕ್ಕೆ ತಲೆನೋವಾಗಿ ಮುಂದುವರಿದಿದೆ. ಈ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 1,100 ದಾಟಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ನೀಡಿರುವ ಮಾಹಿತಿ ಪ್ರಕಾರ 16,067 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅವರಲ್ಲಿ 8,204 ರೋಗಿಗಳ ಪರಿಸ್ಥಿತಿ ಗಂಭೀರವಾಗಿಯೇ ಇದೆ ಎನ್ನಲಾಗಿದೆ. ನಿನ್ನೆ ಹುಬೇ ಪ್ರಾಂತ್ಯದಲ್ಲಿ 97 ಜನರು ಈ ರೋಗಕ್ಕೆ ತುತ್ತಾಗಿ ಅಸುನೀಗಿದ್ದರು. ಅಲ್ಲಿ 44,653 ಮಂದಿಗೆ ಸೋಂಕು ತಗುಲಿರುವ ಮಾಹಿತಿ ಇದೆ.

ವೈರಸ್​ನ ಉಗಮವಾಯಿತೆಂದು ನಂಬಲಾದ ವುಹಾನ್​ನಲ್ಲಿ ವಿವಿಧ ರಾಷ್ಟ್ರಗಳ ಪ್ರಜೆಗಳು ತಾಯ್ನಾಡಿಗೆ ಮರಳಲು ಪರಿತಪಿಸುತ್ತಿದ್ದಾರೆ. ಕೆಲ ಭಾರತೀಯರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ಧಾರೆ. ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ರಕ್ಷಣೆ ಕೋರಿದ್ಧಾರೆ. ಸತಾರಾ ಜಿಲ್ಲೆಯ ಅಶ್ವಿನಿ ಅವಿನಾಶ್ ಪಾಟೀಲ್ ಅವರು ವುಹಾನ್​ನಲ್ಲಿ ತಮ್ಮಂತೆ ಇನ್ನೂ 70-80 ಭಾರತೀಯರು ಸಿಲುಕಿಕೊಂಡು ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ತಮ್ಮನ್ನು ಇಲ್ಲಿಂದ ಹೊರ ಸಾಗಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

 ಇದನ್ನೂ ಓದಿ: ಕೊರೊನಾ ವೈರಸ್​ಗೆ ಕೋವಿಡ್​​-19 ಎಂದು ಅಧಿಕೃತವಾಗಿ ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ಇನ್ನು, ಜಪಾನ್ ದೇಶದ ಕರಾವಳಿ ತೀರದ ಸಮೀಪ ಇರುವ ಡೈಮಂಡ್ ಪ್ರಿನ್ಸೆಸ್ ಹಡಗಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇಲ್ಲಿ ಇನ್ನೂ 39 ಜನರು ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ಧಾರೆ. ಅಲ್ಲಿಗೆ ಈ ಹಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 174ಕ್ಕೆ ಏರಿದಂತಾಗಿದೆ. ಈ ಹಡಗಿನಲ್ಲಿ ಭಾರತೀಯರೂ ಇದ್ದಾರೆ.

ಕೊರೊನಾ ವೈರಸ್​ಗೆ ಹೆದರಿ ಈ ಹಡಗನ್ನು ಬರಮಾಡಿಕೊಳ್ಳಲು ಯಾವ ದೇಶವೂ ಸಿದ್ಧವಿಲ್ಲ. ಜಪಾನ್, ತೈವಾನ್, ಫಿಲಿಪ್ಪೈನ್ಸ್ ದೇಶಗಳ ನಂತರ ಥಾಯ್ಲೆಂಡ್ ಕೂಡ ಡೈಮಂಡರ್ ಪ್ರಿನ್ಸೆನ್ಸ್​ಗೆ ಜಾಗ ಕೊಡಲು ನಿರಾಕರಿಸಿದೆ.

ಇದೇ ವೇಳೆ, ಅಮೆರಿಕದಿಂದ ಸಾಗಿ ಹೋಗಿರುವ ವೆಸ್ಟರ್​ಡ್ಯಾಮ್ ಎಂಬ ಹಡಗಿಗೂ ಮುಕ್ತಿ ಸಿಗುತ್ತಿಲ್ಲ. ಇವತ್ತು ಥಾಯ್ಲೆಂಡ್ ದೇಶ ಕೂಡ ಈ ಹಡಗಿಗೆ ತನ್ನ ಬಂದರಿಗೆ ಬಂದಿಳಿಯಲು ಅವಕಾಶ ನಿರಾಕರಿಸಿದೆ. ಸುಮಾರು 2,000 ಜನರು ಈ ವೆಸ್ಟರ್​ಡ್ಯಾಮ್ ಹಡಗಿನಲ್ಲಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಕೆಳಜಾತಿ ಯುವಕನನ್ನು ಮದುವೆಯಾದ ಯುವತಿ; ಬಾವಿಗೆ ಹಾರಿ ಪ್ರಾಣಬಿಟ್ಟ ಕುಟುಂಬಸ್ಥರು

ಇನ್ನು, ಮನುಷ್ಯರಿಗೆ ಹರಡುವ ವೈರಸ್ ಈಗ ಸ್ಮಾರ್ಟ್​ಫೋನ್ ಉದ್ಯಮವನ್ನೂ ಹೈರಾಣಗೊಳಿಸುತ್ತಿದೆ. ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದ ಸ್ಮಾರ್ಟ್​ಫೋನ್ ಉದ್ಯಮಕ್ಕೆ ಈಗಾಗಲೇ ಕೊರೊನಾ ಬಿಸಿ ತಟ್ಟುತ್ತಿದೆ. ಭಾರತದಲ್ಲಿ ಸಿದ್ಧವಾಗುವ ಸ್ಮಾರ್ಟ್​ಫೋನ್​ನ ಅನೇಕ ಬಿಡಿಭಾಗಗಳು ಚೀನಾದಲ್ಲೇ ತಯಾರಾಗಿ ಬರುತ್ತವೆ. ಆದರೆ, ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಈ ಸ್ಮಾರ್ಟ್​ಫೋನ್ ಬಿಡಿಭಾಗ ತಯಾರಿಸುವ ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಿವೆ. ಹೀಗಾಗಿ, ಚೀನಾದಿಂದ ಸದ್ಯಕ್ಕೆ ಸ್ಮಾರ್ಟ್​​ಫೋನ್ ಬಿಡಿಭಾಗಗಳು ಬರುವುದು ತೀರಾ ಕಡಿಮೆಯಾಗಿದೆ. ಇದು ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಸಂಕಷ್ಟಕ್ಕೆ ದೂಡಿದೆ. ಇದೇ ಪರಿಸ್ಥಿತಿ ಹೆಚ್ಚು ದಿನ ಮುಂದುವರಿದರೆ ಭಾರತಕ್ಕೆ ಕಷ್ಟವಾಗಬಹುದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: