Assam Floods: ಅಸ್ಸಾಂನಲ್ಲಿ ಮುಂದುವರಿದ ಪ್ರವಾಹ: 18 ಜಿಲ್ಲೆ ಸಂಪೂರ್ಣ ಜಲಾವೃತ, ಸಾವಿನ ಸಂಖ್ಯೆ 37ಕ್ಕೆ ಏರಿಕೆ

Assam Floods: ದೇಮಾಜಿ, ಲಾಕೀಂಪುರ್, ಬಿಸ್ವನಾಥ್, ಡರ್ರಾಂಗ್, ನಾಲ್ಬಾರಿ, ಬಾರ್ಪೆಟಾ ಸೇರಿದಂತೆ 18 ಜಿಲ್ಲೆಗಳಲ್ಲಿ 11 ಲಕ್ಷ ಮಂದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. 1,412 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 53,348 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.

ಅಸ್ಸಾಂ ಪ್ರವಾಹ

ಅಸ್ಸಾಂ ಪ್ರವಾಹ

 • Share this:
  ನವದೆಹಲಿ(ಜು.05): ತೀವ್ರ ಕೋವಿಡ್​​-19 ಸಂಕಷ್ಟದ ನಡುವೆಯೇ ಭಾರೀ ಮಳೆ ಸುರಿಯುತ್ತಿರುವ ಕಾರಣ ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ತಿನ್ಸುಕಿಯಾ ಮತ್ತು ಮೊರಿಂಗಾವ್​ ಜಿಲ್ಲೆಗಳಲ್ಲಿ ತಲಾ ಒಂದು ಸಂಭವಿಸಿದ ಪರಿಣಾಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

  ಇನ್ನು, ಅಸ್ಸಾಂನ 18 ಜಿಲ್ಲೆಗಳಲ್ಲಿ ಪ್ರವಾಹದ ಆರ್ಭಟ ಜೋರಾಗಿದೆ. ಇದರಿಂದ ಸುಮಾರು 11 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಂದಿನೆಂಟು ಜಿಲ್ಲೆಗಳ ಪೈಕಿ ಏಳರಲ್ಲಿ ಭಾರೀ ಪ್ರಮಾಣದಲ್ಲಿ ಜನರಿಗೆ ತೊಂದರೆಯಾಗಿದೆ.

  ದೇಮಾಜಿ, ಲಾಕೀಂಪುರ್, ಬಿಸ್ವನಾಥ್, ಡರ್ರಾಂಗ್, ನಾಲ್ಬಾರಿ, ಬಾರ್ಪೆಟಾ ಸೇರಿದಂತೆ 18 ಜಿಲ್ಲೆಗಳಲ್ಲಿ 11 ಲಕ್ಷ ಮಂದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. 1,412 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 53,348 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.

  ಇನ್ನು, ಸೂರು ಕಳೆದುಕೊಂಡ 6,531 ಜನರಿಗೆ 171 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಜತೆಗೆ ಪ್ರವಾಹ ಸಂಬಂಧ ಮಾತಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬೇಕಾದ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ.

  ಇದನ್ನೂ ಓದಿ: Sunday lockdown: ಇಂದು ಸಂಪೂರ್ಣ ಲಾಕ್​ಡೌನ್​; ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

  ನಮಗೆ ತುರ್ತು ಸರ್ಕಾರದ ನೆರವು ಬೇಕಾಗಿದೆ. ಇಲ್ಲಿಯತನಕ ನಮ್ಮ ಪ್ರದೇಶಕ್ಕೆ ಸರ್ಕಾರದ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿರುವುದಾಗಿ ವರದಿ ವಿವರಿಸಿದೆ.
  Published by:Ganesh Nachikethu
  First published: