ಮಾನವೀಯತೆಯ ಸಾವು: ಉತ್ತರಾಖಂಡದ ನದಿಯಲ್ಲಿ ಮಾನವನ ಮೃತದೇಹವನ್ನು ಕಿತ್ತು ತಿನ್ನುತ್ತಿರುವ ನಾಯಿಗಳು

ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ತೇಲುತ್ತಿರುವ ಘಟನೆಗಳು ವರದಿಯಾಗಿದ್ದವು. ಈಗ ಉತ್ತರಾಖಂಡದಲ್ಲಿಯೂ ಇಂತಹ ಘಟನೆಗಳು ವರದಿಯಾಗಿವೆ. ಜೊತೆಗೆ ನಾಯಿಗಳು ಮೃತದೇಹಗಳನ್ನು ಕಿತ್ತು ತಿನ್ನುತ್ತಿರುವ ದೃಶ್ಯಗಳು ಅಮಾನವೀಯತೆಗೆ ಸಾಕ್ಷಿಯಾಗಿದೆ.

ಮೃತ ದೇಹಗಳನ್ನು ಹೊರತೆಗೆಯುತ್ತಿರುವುದು.

ಮೃತ ದೇಹಗಳನ್ನು ಹೊರತೆಗೆಯುತ್ತಿರುವುದು.

 • Share this:
  ಉತ್ತರ ಕಾಶಿ (ಜೂನ್ 01); ಸಂಬಂಧಿಕರ ಮೃತ ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದ ಕಾರಣ ಇತ್ತೀಚೆಗೆ ಉತ್ತರಪ್ರದೇಶ ಮತ್ತು ಬಿಹಾರದ ಜನ ಗಂಗಾ ನದಿಯಲ್ಲಿ ಹೆಣಗಳನ್ನು ತೇಲಿಬಿಟ್ಟ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಮಾನವ ಹೆಣಗಳು ರಾಶಿ ರಾಶಿಯಾಗಿ ಗಂಗಾನದಿಯಲ್ಲಿ ತೇಲಿ ನದಿ ಪಾತ್ರದ ಜನರಲ್ಲಿ ಭಯ ಹುಟ್ಟಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಉತ್ತರಾಖಂಡದ ಉತ್ತರಕಾಶಿಯ ಭಾಗೀರಥಿ ನದಿಯ ದಡದಲ್ಲಿರುವ ಕೇದಾರ ಘಾಟ್‌ನಲ್ಲಿ ಬೀದಿ ನಾಯಿಗಳು ಮಾನವರ ಮೃತದೇಹಗಳನ್ನು ತಿನ್ನುತ್ತಿರುವ ಭೀಕರ ದೃಶ್ಯಗಳು ಹೊರಬಿದ್ದಿವೆ. ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಭಾಗೀರಥಿಯ ನೀರಿನ ಮಟ್ಟ ಏರಿಕೆಯಾಗಿ, ಹೀಗಾಗಿ ಶವಗಳು ಹೊರ ಬಂದಿವೆ. ಅವುಗಳಲ್ಲಿ ಕೆಲವು ಅರ್ಧ ಸುಟ್ಟುಹೋಗಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.  "ನಾನು ನಿನ್ನೆ ಇಲ್ಲಿ ಕೆಲವು ಚಿತ್ರಕಲೆ ರಚಿಸುತ್ತಿದ್ದೆ. ಆಗ ಅರ್ಧ ಸುಟ್ಟ ದೇಹಗಳನ್ನು ಬೀದಿ ನಾಯಿಗಳು ತಿನ್ನುವುದನ್ನು ನಾನು ನೋಡಿದೆ. ಜಿಲ್ಲಾಡಳಿತ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ಮಾನವೀಯತೆಯ ಸಾವು" ಎಂದು ಸ್ಥಳೀಯರು ಹೇಳಿದ್ದಾರೆ.

  ಇಲ್ಲಿ ಶವಸಂಸ್ಕಾರ ಮಾಡಿರುವ ದೇಹಗಳು ಕೊರೊನಾ ಸೋಂಕಿತರ ಮೃತದೇಹಗಳಿರುವ ಸಾಧ್ಯತೆ ಇದೆ. ಈಗ ಶವಗಳು ಹೊರ ಬಂದಿರುವ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಸ್ಥಳೀಯರು ಆಗ್ರಹಿಸಿದ್ದಾರೆ.

  ಘಟನೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ವಿನಂತಿಸಿದ್ದೇವೆ. ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರೂ, ಅಂತಿಮ ವಿಧಿಗಳನ್ನು ನಡೆಸಿದ ನಂತರ ಶವಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

  ಇದನ್ನೂ ಓದಿ: ಕೋವಿಡ್​ ನರ್ವಹಣೆಯಲ್ಲಿ ಎಡವಿದ ಯೋಗಿ ಆದಿತ್ಯನಾಥ್ ವಿರುದ್ಧ ಜನಾಕ್ರೋಶ; ಮುಂದಿನ ವರ್ಷದ ಚುನಾವಣೆ ಬಗ್ಗೆ ಚರ್ಚೆ

  ಪುರಸಭೆಯ ಅಧ್ಯಕ್ಷ ರಮೇಶ್ ಸೆಮ್ವಾಲ್ ಅವರು ಸ್ಥಳೀಯರಿಂದ ದೂರುಗಳನ್ನು ಸ್ವೀಕರಿಸಿದ ನಂತರ, ಕೇದಾರ್ ಘಾಟ್‌ನಲ್ಲಿ ನದಿಯ ದಂಡೆಯಲ್ಲಿ ಕೊಚ್ಚಿ ಅರ್ಧ ಸುಟ್ಟ ಶವಗಳನ್ನು ದಹನ ಮಾಡಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿದ್ದಾರೆ.

  "ಕಳೆದ ಕೆಲವು ದಿನಗಳಲ್ಲಿ, ನಮ್ಮ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೃತದೇಹಗಳನ್ನು ಸರಿಯಾಗಿ ಸುಡುವುದಿಲ್ಲ ಎಂದು ನನಗೆ ತಿಳಿದುಬಂದಿದೆ. ಆದ್ದರಿಂದ ಅರ್ಧ ಸುಟ್ಟ ಶವಗಳ ಅಂತ್ಯಕ್ರಿಯೆಗಾಗಿ ಕೇದಾರ ಘಾಟ್‌ನಲ್ಲಿ ವ್ಯವಸ್ಥೆ ಮಾಡಲು ನಾನು ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ" ಎಂದು ರಮೇಶ್ ಸೆಮ್ವಾಲ್ ಹೇಳಿದ್ದಾರೆ.

  ಇದನ್ನೂ ಓದಿ: LockDown: ಕರ್ನಾಟಕದಲ್ಲಿ ಮುಂದುವರೆಯಲಿದೆಯೇ ಲಾಕ್​ಡೌನ್?; ನಾಳೆಯ ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ!

  ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ತೇಲುತ್ತಿರುವ ಘಟನೆಗಳು ವರದಿಯಾಗಿದ್ದವು. ಈಗ ಉತ್ತರಾಖಂಡದಲ್ಲಿಯೂ ಇಂತಹ ಘಟನೆಗಳು ವರದಿಯಾಗಿವೆ. ಜೊತೆಗೆ ನಾಯಿಗಳು ಮೃತದೇಹಗಳನ್ನು ಕಿತ್ತು ತಿನ್ನುತ್ತಿರುವ ದೃಶ್ಯಗಳು ಅಮಾನವೀಯತೆಗೆ ಸಾಕ್ಷಿಯಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: