HOME » NEWS » Coronavirus-latest-news » DEAR PM MAJOR OPPOSITION PARTIES SEND JOINT LETTER WITH 9 POINTS TO NARENDRA MODI MAK

ಆತ್ಮೀಯ ಪ್ರಧಾನಿಗಳೇ; ನರೇಂದ್ರ ಮೋದಿಗೆ 9 ಅಂಶಗಳೊಂದಿಗೆ ಜಂಟಿ ಪತ್ರ ಬರೆದ ವಿರೋಧ ಪಕ್ಷಗಳು

ಈ ಪತ್ರಕ್ಕೆ ಮಾಯಾವತಿಯ ಬಹುಜನ ಸಮಾಜ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

news18-kannada
Updated:May 12, 2021, 8:42 PM IST
ಆತ್ಮೀಯ ಪ್ರಧಾನಿಗಳೇ; ನರೇಂದ್ರ ಮೋದಿಗೆ 9 ಅಂಶಗಳೊಂದಿಗೆ ಜಂಟಿ ಪತ್ರ ಬರೆದ ವಿರೋಧ ಪಕ್ಷಗಳು
ನರೇಂದ್ರ ಮೋದಿ.
  • Share this:
ನವ ದೆಹಲಿ (ಮೇ 12); ಹನ್ನೆರಡು ಪ್ರಮುಖ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಕೋವಿಡ್‌ ಎರಡನೇ ಅಲೆಯು ದೇಶಾದ್ಯಂತ ಹರಿದಾಡುತ್ತಿರುವುದರಿಂದ ಕೇಂದ್ರವು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗದೆ ನೂರಾರು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇದನ್ನು "ಅಪೋಕ್ಯಾಲಿಪ್ಸ್ ಮಾನವ ದುರಂತ" ಎಂದು ಕರೆದಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸಗಳನ್ನು ನಿಲ್ಲಿಸುವುದು, ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಹಾಗೂ ಉಚಿತ ಲಸಿಕೆ ನೀಡುವುದು ಸೇರಿದಂತೆ ಹಲವಾರು ಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆಯಲಾಗಿದೆ.

"ಕೇಂದ್ರ ಸರ್ಕಾರವು ಕೈಗೊಳ್ಳಬೇಕಾದ ಮತ್ತು ಕಡ್ಡಾಯವಾಗಿ ಕಾರ್ಯಗತಗೊಳಿಸ ಲೇಬೇಕಾದ ಹಲವು ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ಮೋದಿ ಅವರ ಗಮನ ಸೆಳೆಯಲು ನಾವು ಈ ಹಿಂದೆ ಸ್ವತಂತ್ರವಾಗಿ ಮತ್ತು ಜಂಟಿಯಾಗಿ ಹಲವಾರು ಪತ್ರಗಳನ್ನು ಬರೆದಿದ್ದೇವೆ. ದುರದೃಷ್ಟವಶಾತ್, ನಿಮ್ಮ ಸರ್ಕಾರವು ಈ ಎಲ್ಲ ಸಲಹೆಗಳನ್ನು ನಿರ್ಲಕ್ಷಿಸಿದೆ ಅಥವಾ ನಿರಾಕರಿಸಿದೆ. ಇದು ಕೊರೋನಾ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಮುಂದಿನ ಅಂತಹ ಅಪೋಕ್ಯಾಲಿಪ್ಸ್ ಮಾನವ ದುರಂತವನ್ನು ತಪ್ಪಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಈ ಪತ್ರವನ್ನು ಬರೆಯುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿರೋಧ ಪಕ್ಷಗಳು ಪಟ್ಟಿಮಾಡಿರುವ ಅಂಶಗಳು:

  1. ಲಭ್ಯವಿರುವ ಎಲ್ಲಾ ಜಾಗತಿಕ-ವಿದೇಶಿ ಮೂಲಗಳಿಂದಲೂ ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಬೇಕು.

  2. ತಕ್ಷಣ ಉಚಿತ ಮತ್ತು ಸಾರ್ವತ್ರಿಕ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸಬೇಕು.

  3. ಕಡ್ಡಾಯ ಪರವಾನಿ ನೀಡುವ ಮೂಲಕ ದೇಶೀಯ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕು.
  4. ಲಸಿಕೆಗಳಿಗಾಗಿ ಬಜೆಟ್​ನಲ್ಲಿ ಮೀಸಲಿಟ್ಟ 35,000 ಕೋಟಿ ಹಣವನ್ನು ಲಸಿಕೆಗಳಿಗಾಗಿ ಹಂಚಿಕೆ ಮಾಡಬೇಕು.

  5. ದುಬಾರಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿಲ್ಲಿಸಬೇಕು ಮತ್ತು ಆ ಹಣವನ್ನು ಆಮ್ಲಜನಕ-ಲಸಿಕೆಗಳ ಖರೀದಿಗೆ ಬಳಸಬೇಕು.

  6. "ಲೆಕ್ಕವಿಲ್ಲದ ಖಾಸಗಿ ಟ್ರಸ್ಟ್ ಫಂಡ್" ಹಾಗೂ ಪಿಎಂ ಕೇರ್ಸ್​ನಲ್ಲಿರುವ ಎಲ್ಲಾ ಹಣವನ್ನು ಬಿಡುಗಡೆ ಮಾಡಬೇಕು. ಆ ಹಣದಲ್ಲಿ ಲಸಿಕೆಗಳು, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಬೇಕು.

  7. ನಿರುದ್ಯೋಗಿಗಳಿಗೆ ತಿಂಗಳಿಗೆ 6000 ರೂ. ನೀಡಬೇಕು.

  8.  ಅಗತ್ಯವಿರುವವರಿಗೆ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಬೇಕು.

  9. ಕೋವಿಡ್‌ಗೆ ಬಲಿಯಾಗುವ ರೈತರನ್ನು ರಕ್ಷಿಸಲು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು.


ಈ ಪತ್ರಕ್ಕೆ ಮಾಯಾವತಿಯ ಬಹುಜನ ಸಮಾಜ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

ಅಲ್ಲದೆ, ಈ ಪತ್ರಕ್ಕೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಾರ್ಯಾಲಯ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿರುವ ವಿರೋಧ ಪಕ್ಷಗಳು, "iದು ನಿಮ್ಮ ಕಚೇರಿ ಅಥವಾ ಸರ್ಕಾರದ ಅಭ್ಯಾಸವಾಗಿರದಿದ್ದರೂ, ಭಾರತ ಮತ್ತು ನಮ್ಮ ಜನರ ಹಿತಾಸಕ್ತಿಗಳ ಉದ್ದೇಶಕ್ಕಾಗಿ ನಮ್ಮ ಸಲಹೆಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ" ಎಂದು ಬರೆಯಲಾಗಿದೆ.

ಇದನ್ನೂ ಓದಿ: Manish Sisodia: ದೆಹಲಿಗೆ ಕೋವಾಕ್ಸಿನ್ ಲಸಿಕೆ ನೀಡದಂತೆ ಕೇಂದ್ರ ಭಾರತ್ ಬಯೋಟೆಕ್​ಗೆ ಸೂಚಿಸಿದೆ; ಮನೀಶ್ ಸಿಸೋಡಿಯಾ ಆರೋಪ

ನಿನ್ನೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, "ಕೊರೋನಾ ಬಿಕ್ಕಟ್ಟನ್ನು ಎದುರಿಸುವಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ. ಪರಿಣಾಮ ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದರು.
Youtube Video

"ನಿಮ್ಮ ನಾಯಕತ್ವದಲ್ಲಿ, ನಿಮ್ಮ ಪಕ್ಷವು ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದಾಗಲೂ, ಉತ್ತರ ಭಾರತದಲ್ಲಿ ಸೂಪರ್ ಸ್ಪ್ರೆಡರ್ ರಾಜಕೀಯ ರ್ಯಾಲಿಗಳನ್ನು ಸಂತೋಷದಿಂದ ನಡೆಸಿದ್ದಾರೆ. ಈ ರ್ಯಾಲಿಗಳಲ್ಲಿ ಯಾರೂ ಮಾಸ್ಕ್​ ಧರಿಸಿಲ್ಲ. ಇನ್ನೂ ಸಾಮಾಜಿಕ ಅಂತರ ದೂರದ ಮಾತು. ದೇಶದಲ್ಲಿ ಕೊರೋನಾ ಸೋಂಕು ಅಧಿಕವಾಗಲು ಇದು ಸಹ ಒಂದು ಕಾರಣ" ಎಂದು ಸೋನಿಯಾ ಗಾಂಧಿ ಕಟು ಟೀಕೆಗಳನ್ನು ಮುಂದಿಟ್ಟಿದ್ದರು.
Published by: MAshok Kumar
First published: May 12, 2021, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories