ಕೊರೋನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೂ ವಕ್ಕರಿಸಿದ ಮಾರಕ ಕೋವಿಡ್ ಸೋಂಕು

ಸೋಂಕಿತ ವ್ಯಕ್ತಿಗಳು ಬಂದಾಗ ಕೂಡಲೇ ಬೆಡ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಬೇಕು. ಒಂದು ವೇಳೆ ವ್ಯವಸ್ಥೆ ಆಗದಿದ್ದರೆ ಬೇರೆ ಆಸ್ಪತ್ರೆಗೆ  ಕೂಡಲೇ ಶಿಫ್ಟ್ ಮಾಡಬೇಕು.‌ ಆಸ್ಪತ್ರೆ ಸಿಬ್ಬಂದಿಗಳು ಸೋಂಕಿತರ ಹಾಗೂ ಕುಟುಂಬಸ್ಥರ ಬಳಿ ಸಭ್ಯತೆಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೋ‌ನಾ ಸೊಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಫ್ರಂಟ್​ ಲೈನ್ ನಲ್ಲಿ ಕೆಲಸ ಮಾಡುವ ಕೊರೋನಾ ವಾರಿಯರ್ಸ್ ಗೂ ಮಾರಕ ಸೋಂಕು ವಕ್ಕರಿಸಿದೆ. ಈ ನಡುವೆ ಸೋಂಕಿತ ಸಿಬ್ಬಂದಿಯ ಬೆನ್ನುಲುಬಾಗಿ ಪೊಲೀಸ್ ಕಮಿಷನರ್ ನಿಂತಿದ್ದಾರೆ. ಬೆಂಗಳೂರಿನಲ್ಲಿ ಶರವೇಗದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಎರಡನೇ ಅಲೆ ಆತಂಕ ಹುಟ್ಟಿಸಿದೆ. ಈ ನಡುವೆ ಕೊರೋನಾ ವಾರಿಯರ್ಸ್ ಆಗಿ ಫ್ರಂಟ್ ಲೈನ್ ವರ್ಕರ್ಸ್ ಆಗಿರುವ ಪೊಲೀಸ್ ಸಿಬ್ಬಂದಿಯನ್ನು ಮಾರಕ ಸೋಂಕು ಬೆಂಬಿಡದೆ ಕಾಡುತ್ತಿದೆ.

ಪೊಲೀಸ್ ಸಿಬ್ಬಂದಿಯೆಲ್ಲಾ, ವ್ಯಾಕ್ಸಿನೇಷನ್‌ ತೆಗೆದುಕೊಂಡಿದ್ದರೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇದುವರೆಗೂ 193 ಮಂದಿಗೆ ಕಾಣಿಸಿಕೊಂಡಿದ್ದು, ಮೂವರು ಪೊಲೀಸರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ನಗರದ ಪಶ್ಚಿಮ ವಿಭಾಗದಲ್ಲೇ ಹೆಚ್ಚು ಸಿಬ್ಬಂದಿಗೆ ಸೋಂಕು‌ ಕಾಣಿಸಿಕೊಂಡು ಆತಂಕ ತಂದಿದೆ. ಎರಡನೇ ಅಲೆ ಪ್ರಾರಂಭವಾದ ಬಳಿಕ ಪಶ್ಚಿಮ ವಿಭಾಗದಲ್ಲಿ 52 ಸಿಬ್ಬಂದಿಗೆ ಕೊರೋನಾ ಸೋಂಕು ಬಂದಿದ್ದು, ಹೋಮ್ ಐಸೋಲೆಷನ್ ನಲ್ಲಿ ಇದ್ದಾರೆ.

ಇನ್ನು ಪೂರ್ವ ಸಂಚಾರಿ ವಿಭಾಗದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಿಎಆರ್ ಹೆಡ್ ಕ್ವಾಟ್ರಸ್ ನಲ್ಲಿ ಒಬ್ಬರು ಮೃತರಾಗಿದ್ದಾರೆ. ಇನ್ನು ಯಾವ್ಯಾವ ವಿಭಾಗದಲ್ಲಿ ಅಂತ ನೋಡೋದಾದರೆ, ಪಶ್ಚಿಮ ವಿಭಾಗ- 52, ಕೇಂದ್ರವಿಭಾಗ - 5, ಉತ್ತರ ವಿಭಾಗ -15, ದಕ್ಷಿಣವಿಭಾಗ -19, ಪೂರ್ವ ವಿಭಾಗ-29, ಈಶಾನ್ಯ ವಿಭಾಗ- 4, ಆಗ್ನೇಯ ವಿಭಾಗ 22, ವೈಟ್ ಫೀಲ್ಡ್ ವಿಭಾಗ -3, ಟ್ರಾಫಿಕ್ ಪೂರ್ವ ವಿಭಾಗ-13, ಸಂಚಾರಿ ಪಶ್ಚಿಮ ವಿಭಾಗ -13, ಸಂಚಾರಿ ಉತ್ತರ ವಿಭಾಗ-5, ಸಿಎಆರ್ ಹೆಡ್ ಕ್ವಾಟ್ರಸ್ -11, ಸಿಎಆರ್ ಉತ್ತರ ವಿಭಾಗ-2 ಪಾಸಿಟಿವ್ ಕೇಸ್ ಬಂದಿದೆ.‌

ಇದನ್ನು ಓದಿ: ಕೊರೋನಾ ಅಬ್ಬರ; ಬೆಡ್​ಗಳ ಕೊರತೆಯಿಂದ ಪರದಾಟ, ಐಸೋಲೇಶನ್ ಬೋಗಿಗಳ ಅಸ್ತಿತ್ವಕ್ಕೆ ಮುಂದಾದ ನೈರುತ್ಯ ರೈಲ್ವೆ

ಪೊಲೀಸ್ ಸಿಬ್ಬಂದಿಯ ಬೆನ್ನುಲುಬಾಗಿ ಕಮಿಷನರ್ ಕಮಲ್ ಪಂಥ್ ನಿಂತಿದ್ದಾರೆ. ಕೊರೋನಾದಿಂದ ಪೊಲೀಸರ ರಕ್ಷಣೆಗಾಗಿ ಕಂಟ್ರೋಲ್‌ ರೂಂ ಪ್ರಾರಂಭಿಸಲು ಮುಂದಾಗಿದ್ದು, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತೆರೆಯಲು ಸಿದ್ಧತೆ ನಡೆದಿದೆ. ಇಲಾಖೆಯಲ್ಲಿ ಸಿಬ್ಬಂದಿಗೆ ಕೊರೋನಾ ಬಂದರೆ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ, ದಿನದ 24 ಗಂಟೆಯೂ ಕಂಟ್ರೋಲ್ ರೂಂ ಕೆಲಸ ನಿರ್ವಹಿಸಲಿದೆ‌. ಕಂಟ್ರೋಲ್ ಗಾಗಿ 7 ಮಂದಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಆಯಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗಳಿಂದ ಆಸ್ಪತ್ರೆಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ, ಕಮಾಂಡ್ ಸೆಂಟರ್ ಡಿಸಿಪಿ ಇಶಾಪಂತ್ ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಸೋಂಕಿತ ಪೊಲೀಸ್ ಸಿಬ್ಬಂದಿಗೆ ಸೂಕ್ತ ಬೆಡ್, ಗುಣಮಟ್ಟದ ಚಿಕಿತ್ಸೆ ಸಿಗಲು ನೋಡೆಲ್ ಅಧಿಕಾರಿಗಳನ್ನ ನೇಮಿಸಲಾಗಿದೆ.

ಸದ್ಯ ಪೊಲೀಸ್ ಆಯುಕ್ತರು ಎಲ್ಲಾ ವಿಭಾಗ ಡಿಸಿಪಿಗಳ ಜೊತೆ ಚರ್ಚಿಸಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಮೌಖಿಕವಾಗಿದೆ ಆದೇಶಿಸಲಾಗಿದೆ. ಜೊತೆಗೆ ಗುಂಪು ಸೇರದಂತೆ ನೋಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಸಮಸ್ಯೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಜೊತೆಗೆ ಸೋಂಕಿತ ವ್ಯಕ್ತಿಗಳು ಬಂದಾಗ ಕೂಡಲೇ ಬೆಡ್ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಬೇಕು. ಒಂದು ವೇಳೆ ವ್ಯವಸ್ಥೆ ಆಗದಿದ್ದರೆ ಬೇರೆ ಆಸ್ಪತ್ರೆಗೆ  ಕೂಡಲೇ ಶಿಫ್ಟ್ ಮಾಡಬೇಕು.‌ ಆಸ್ಪತ್ರೆ ಸಿಬ್ಬಂದಿಗಳು ಸೋಂಕಿತರ ಹಾಗೂ ಕುಟುಂಬಸ್ಥರ ಬಳಿ ಸಭ್ಯತೆಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
Published by:HR Ramesh
First published: