• Home
 • »
 • News
 • »
 • coronavirus-latest-news
 • »
 • ಇರಾನ್​ನಲ್ಲಿ ಸಚಿವರಿಗೇ ತಗುಲಿದ ಕೊರೊನಾ​; ವಿಶ್ವದೆಲ್ಲೆಡೆ ಹಬ್ಬುತ್ತಿದೆ ಭೀಕರ ವೈರಸ್

ಇರಾನ್​ನಲ್ಲಿ ಸಚಿವರಿಗೇ ತಗುಲಿದ ಕೊರೊನಾ​; ವಿಶ್ವದೆಲ್ಲೆಡೆ ಹಬ್ಬುತ್ತಿದೆ ಭೀಕರ ವೈರಸ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಶುಕ್ರವಾರ ಮುಸ್ಲಿಮರಿಗೆ ಪವಿತ್ರ ದಿನ. ಹೀಗಾಗಿ ಇರಾನ್​ನಲ್ಲಿ ಇಂದು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಕೊರೊನಾ ವೈರಸ್​ ಭೀತಿ ಹೆಚ್ಚಿದ್ದರಿಂದ ಈ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.  

 • Share this:

  ತೆಹ್ರಾನ್​ (ಫೆ.28): ಚೀನಾದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್​ ಅಟ್ಟಹಾಸ ಇರಾನ್​ನಲ್ಲೂ ಮುಂದುವರಿದಿದೆ. ಈವರೆಗೆ ಇರಾನ್​ ದೇಶದಲ್ಲೇ 26 ಜನರು ಮೃತಪಟ್ಟಿದ್ದು, ಈ ದೇಶದ ಉನ್ನತ ಹುದ್ದೆಯಲ್ಲಿರುವವರಿಗೂ ಈ ಭೀಕರ ವೈರಸ್​ ತಗುಲಿದೆ.  


  ಚೀನಾ ಹೊರತುಪಡಿಸಿದರೆ ಕೊರನಾ ವೈರಸ್​ಗೆ ಮೃತಪಟ್ಟವರ ಸಂಖ್ಯೆ ಇರಾನ್​ನಲ್ಲಿ ಹೆಚ್ಚಿದೆ. ತೆಹ್ರಾನ್​ ಸೇರಿ ದೇಶದ ಅನೇಕ ಕಡೆಗಳಲ್ಲಿ ನಮಾಜ್​ ಮಾಡುವುದನ್ನು ನಿಷೇಧಿಸಲಾಗಿದೆ. ಈ ಮೂಲಕ ವೈರಸ್​ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.


  ಇನ್ನು, ಇರಾನ್​ನ ಅನೇಕ ಸಚಿವರಿಗೆ ಕೊರನಾ ವೈರಸ್​ ತಟ್ಟಿದೆ. ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪಾಧ್ಯಕ್ಷೆ ಮಾಸೌಮೆಹ್​ ಎಬ್ಟೆಕರ್​, ಉಪ ಆರೋಗ್ಯ ಸಚಿವ ಇರಾಜ್​ಗೂ ಕೊರನಾ ವೈರಸ್​ ತಟ್ಟಿದೆ. ಇನ್ನು, ಚೀನಾ ಮಾದರಿಯಲ್ಲೇ ಇರಾನ್​ನಲ್ಲೂ ಕೊರೊನಾ ವೈರಸ್​ ತಗುಲಿದವರ ಸಂಖ್ಯೆ ದಿನೇ ದಿನೇ ಹೆಚ್ಚುತಲೇ ಇದೆ. ಗುರುವಾರ ಒಂದೇ ದಿನ 106 ಹೊಸ ಪ್ರಕರಣ ದಾಖಲಾಗಿದೆ.


  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್‌ ಭೀತಿ- ಅವಳಿ ನಗರದ ಜನರಲ್ಲಿ ಹೆಚ್ಚಿದ ಆತಂಕ


  ಶುಕ್ರವಾರ ಮುಸ್ಲಿಮರಿಗೆ ಪವಿತ್ರ ದಿನ. ಹೀಗಾಗಿ ಇರಾನ್​ನಲ್ಲಿ ಇಂದು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಕೊರೊನಾ ವೈರಸ್​ ಭೀತಿ ಹೆಚ್ಚಿದ್ದರಿಂದ ಈ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.


  ಚೀನಾದಲ್ಲಿ ಮುಂದುವರಿದ ಮರಣ ಮೃದಂಗ:


  ಕೊರೊನಾ ವೈರಸ್​ಗೆ ಮೃತಪಡುವವರ ಸಂಖ್ಯೆ ಚೀನಾದಲ್ಲಿ ಮುಂದುವರಿದಿದೆ. ಈ ವರೆಗೆ ಸುಮಾರು 2,744 ಜನರು ಅಸುನೀಗಿದ್ದಾರೆ. ಕೊರನಾ ವೈರಸ್​ ತಗುಲಿದವರ ಸಂಖ್ಯೆ 78,497ಕ್ಕೆ ಏರಿಕೆ ಆಗಿದೆ.

  Published by:Rajesh Duggumane
  First published: