‘ಕಮೀಷನರ್​​ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ‘ - ಇನ್ಸ್​​ಪೆಕ್ಟರ್​​ಗಳಿಗೆ ಡಿಸಿಪಿಗಳ ಸೂಚನೆ

ಇನ್ನು, ಡಿಸಿಪಿಗಳ ಆದೇಶ ಮೇರೆಗೆ ಸದ್ಯ 500ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಹೆಸರನ್ನು ಪಟ್ಟಿ ಮಾಡಲಾಗಿದೆ. ಇವರು ಪ್ರತೀದಿನ ಆರೋಗ್ಯ ಟೆಸ್ಟ್​​ ಮಾಡಿಸಿ ಆಯಾ ಠಾಣೆಗಳಿಗೆ ರಿಪೋರ್ಟ್​ ಮಾಡಬೇಕು ಎಂದು ಕಟ್ಟುನಿಟ್ಟಿನಿಂದ ಹೇಳಲಾಗಿದೆ.

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

  • Share this:
ಬೆಂಗಳೂರು(ಜೂ.22): ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ‌ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ. ಈ ನಡುವೆ ಪೊಲೀಸರಿಗೆ ಸೋಂಕು ಬೆಂಬಿಡದೆ ಕಾಡುತ್ತಿದ್ದು, ಮಹಾಮಾರಿ ಕೊರೋನಾದಿಂದ ಮೂವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ ಠಾಣೆಗಳಿಗೆ ಸೂಚನೆ ರವಾನಿಸಿದ್ದಾರೆ.

ಪೊಲೀಸ್​​ ಸ್ಷೇಷನ್​​ಗೆ ಬರದೇ 55 ವರ್ಷ ಮೇಲ್ಪಟ್ಟ ಸಿಬ್ಬಂದಿ ಮನೆಯಲ್ಲಿರಬೇಕೆಂದು ಕಮೀಷನರ್​​ ಸೂಚನೆ ನೀಡಿದ್ದಾರೆ. ಇದರ​​ ಬೆನ್ನಲ್ಲೀಗ ಎಚ್ಚೆತ್ತುಕೊಂಡ ಡಿಸಿಪಿಗಳು ಎಲ್ಲಾ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​ಗಳಿಗೆ ಕಮೀಷನರ್​ ಆದೇಶ ಪಾಲಿಸಬೇಕು ಎಂದು ಆದೇಶಿಸಿದ್ದಾರೆ.

55 ವರ್ಷ ಮೇಲ್ಪಟ್ಟ ಸಿಬ್ಬಂದಿ ಹಾಗೂ ಅನಾರೋಗ್ಯವುಳ್ಳ ಪೊಲೀಸರು ಮನೆಯಲ್ಲೇ ಇರಲಿ. ಬಿಪಿ, ಶುಗರ್, ಕಿಡ್ನಿ ಸಮಸ್ಯೆ ಹಾಗೂ ಇತರೆ ಏನೇ ಆರೋಗ್ಯದ ಸಮಸ್ಯೆಯಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಡಿಸಿಪಿಗಳು ಇನ್ಸ್​ಪೆಕ್ಟರ್​​ಗಳಿಗೆ ನಿರ್ದೇಶಿಸಿದ್ಧಾರೆ.

ಇದನ್ನೂ ಓದಿ: ‘ದೇಶದ ಸುರಕ್ಷತೆ ಕಾಪಾಡಲು ಕಾಂಗ್ರೆಸ್​ ಸಿದ್ದ, ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿ‘ - ಕೇಂದ್ರಕ್ಕೆ ಮನಮೋಹನ್​​ ಸಿಂಗ್​​ ಒತ್ತಾಯ​​

ಇನ್ನು, ಡಿಸಿಪಿಗಳ ಆದೇಶ ಮೇರೆಗೆ ಸದ್ಯ 500ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಹೆಸರನ್ನು ಪಟ್ಟಿ ಮಾಡಲಾಗಿದೆ. ಇವರು ಪ್ರತೀದಿನ ಆರೋಗ್ಯ ಟೆಸ್ಟ್​​ ಮಾಡಿಸಿ ಆಯಾ ಠಾಣೆಗಳಿಗೆ ರಿಪೋರ್ಟ್​ ಮಾಡಬೇಕು ಎಂದು ಕಟ್ಟುನಿಟ್ಟಿನಿಂದ ಹೇಳಲಾಗಿದೆ.

ಯಾವುದೇ ಕೇಸ್​ನಲ್ಲೂ ಆರೋಪಿಗಳನ್ನು ಮುಟ್ಟಬಾರದು. ವಯಸ್ಸಾದ ಸಿಬ್ಬಂದಿ ಬದಲಿಗೆ ಯಂಗ್​ ಇರುವ ಸಿಬ್ಬಂದಿಯನ್ನು ಹೆಚ್ಚುವರಿವಾಗಿ ನೇಮಿಸಬೇಕು. ಅಲ್ಲದೇ  ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಹೊಯ್ಸಳಾ ಪೊಲೀಸರು ಸುಖಾಸುಮ್ಮನೇ ತಿರುಗಾಡಬಾರದು. ಸ್ಟೇಷನ್​​ನಲ್ಲಿ ಎಲ್ಲದಕ್ಕೂ ಬಿಸಿ ನೀರು, ಸ್ಯಾನಿಟೈಸರ್​​​ ಕಡ್ಡಾಯಬಾಗಿರಬೇಕು ಎಂದು ಖಡಕ್​​ ಆಗಿ ಆರ್ಡರ್​​ ಮಾಡಲಾಗಿದೆ.
First published: