HOME » NEWS » Coronavirus-latest-news » DCM LAXMAN SAVADI WARNS PRIVATE VEHICLE OWNERS WHO EXTORTING MONEY FROM PUBLIC GNR

‘ಕೊರೋನಾ ಬಂಡವಾಳ ಮಾಡ್ಕಂಡು ಪ್ರಯಾಣಿಕರ ಸುಲಿಗೆ ಮಾಡಿದ್ರೆ ಕೇಸ್‘​​; ಖಾಸಗಿ ವಾಹನಗಳ ಮಾಲೀಕರಿಗೆ ಸವದಿ ವಾರ್ನಿಂಗ್​​

ಯಾರು ಕೂಡ ಜನರ ಜೀವದ ಜತೆಗೆ ಚೆಲ್ಲಾಟ ಆಡಬಾರದು. ಇಂತಹ ಪ್ರಕರಣಗಳು ಮರುಕಳಿಸಿದರೆ ಮಾಲೀಕರ ವಿರುದ್ಧ ಬಿಗಿ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಈ ಸಂದರ್ಭದಲ್ಲಿ ದುಡ್ಡು ಮಾಡಲು ಮುಂದಾದರೆ ತಕ್ಕಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

news18-kannada
Updated:March 23, 2020, 2:58 PM IST
‘ಕೊರೋನಾ ಬಂಡವಾಳ ಮಾಡ್ಕಂಡು ಪ್ರಯಾಣಿಕರ ಸುಲಿಗೆ ಮಾಡಿದ್ರೆ ಕೇಸ್‘​​; ಖಾಸಗಿ ವಾಹನಗಳ ಮಾಲೀಕರಿಗೆ ಸವದಿ ವಾರ್ನಿಂಗ್​​
ಡಿಸಿಎಂ ಲಕ್ಷ್ಮಣ ಸವದಿ.
  • Share this:
ಬೆಂಗಳೂರು(ಮಾ.23): ಅತ್ತ ಕೊರೋನಾ ವೈರಸ್​​ ನಿಗ್ರಹಕ್ಕೆ ಮುಂಜಾಗೃತ ಕ್ರಮವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಕಡಿಮೆ ಮಾಡಿ ಆದೇಶಿಸಿದೆ. ಬಹುತೇಕ ಸರ್ಕಾರ ಬಸ್​​ ಮತ್ತು ರೈಲು ಸಂಚಾರ ಸ್ಥಗಿತಗೊಳಿಸಿದೆ. ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ವಾಹನಗಳು, ಬಸ್ಸುಗಳ ಮತ್ತು ಆಟೋರಿಕ್ಷಾಗಳ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದಾರೆ. ಆದರೀಗ, ಪ್ರಯಾಣಿಕರ ಸುಲಿಗೆಗೆ ಮುಂದಾದ ಖಾಸಗಿ ವಾಹನಗಳ ಮಾಲೀಕರಿಗೆ ಬ್ರೇಕ್​​ ಹಾಕಲು ಡಿಸಿಎಂ ಲಕ್ಷ್ಮಣ್​​ ಸವದಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹೀಗೆ ಸುಲಿಗೆ ಮಾಡುತ್ತಿದ್ದ ಮಾಲೀಕರನ್ನು ಜೈಲಿಗೆ ಕಳುಹಿಸುವುದಾಗಿ ವಾರ್ನ್​​ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಡಿಸಿಎಂ ಲಕ್ಷ್ಮಣ್​​ ಸವದಿ, ಕೊರೋನಾ ತಡೆಗೆ ಸರ್ಕಾರಿ ಬಸ್​​ ಮತ್ತು ರೈಲು ಸಂಚಾರ ಸೇವೆ ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಕೆಲವು ಜಿಲ್ಲೆಗಳನ್ನು ಲಾಕ್‍ಔಟ್ ಮಾಡಿ ಘೋಷಿಸಲಾಗಿದೆ. ಇಂತಹ ಕಡೆ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಎಂದರು.

ಇನ್ನು, ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೀಗೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಯಾರು ಸರ್ಕಾರದ ಈ ನಿರ್ಧಾರವನ್ನು ಉಲ್ಲಂಘಿಸಬಾರದು. ಹಾಗೆಯೇ ಪ್ರಯಾಣಕರಿಂದ ಯಾರು ಸುಲಿಗೆ ಮಾಡಬಾರದು. ಸುಲಿಗೆ ಪ್ರಕರಣಗಳು ಕಂಡು ಬಂದರೆ ಕೂಡಲೇ ಅವರ ವಿರುದ್ಧ ಕೇಸ್​ ದಾಖಲಿಸಬೇಕೆಂದು ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸವದಿ ಹೇಳಿದರು.

ಇದನ್ನೂ ಓದಿ: ನಾಳೆಯಿಂದ ಇಡೀ ಕರ್ನಾಟಕ ಲಾಕ್​ಡೌನ್?; ಇಂದು ಸಂಜೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಯಾರು ಕೂಡ ಜನರ ಜೀವದ ಜತೆಗೆ ಚೆಲ್ಲಾಟ ಆಡಬಾರದು. ಇಂತಹ ಪ್ರಕರಣಗಳು ಮರುಕಳಿಸಿದರೆ ಮಾಲೀಕರ ವಿರುದ್ಧ ಬಿಗಿ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಈ ಸಂದರ್ಭದಲ್ಲಿ ದುಡ್ಡು ಮಾಡಲು ಮುಂದಾದರೆ ತಕ್ಕಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಎಲ್ಲ ಸೇವೆಗಳನ್ನೂ ಬಂದ್ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರ್ಗಿ, ಬೆಳಗಾವಿ, ಮಂಗಳೂರು ಜಿಲ್ಲೆಗಳು ಮಾರ್ಚ್ 31ರವರೆಗೆ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ದಿನ ನಿತ್ಯದ ವಸ್ತುಗಳು ದೊರೆಯಲಿವೆ. ತುರ್ತು ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಸೌಲಭ್ಯಗಳು ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
First published: March 23, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories