ಕುಟುಂಬದಲ್ಲಿ ಎರಡು ಸಾವು ಸಂಭವಿಸಿದ್ದರೂ ಕರ್ತವ್ಯ ಮರೆಯದ ಸವದಿ; ಸ್ವಂತ ಹಣದಲ್ಲಿ ಆಕ್ಸಿಜನ್ ಪೂರೈಕೆ

ಡಿಸಿಎಂ ಲಕ್ಷ್ಮಣ ಸವದಿ ಕುಟುಂಬಕ್ಕೆ ಕೊರೊನಾ ದೊಡ್ಡ ಆಘಾತವನ್ನೇ ನೀಡಿದೆ. ಎರಡೇ ದಿನಗಳ ಅಂತರದಲ್ಲಿ ಇಬ್ಬರು ಕುಟುಂಬ ಸದಸ್ಯರನ್ನು ಕೊರೊನಾ ಬಲಿ ಪಡೆದಿದೆ. 

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಳಗಾವಿ: 2 ದಿನಗಳ ಅಂತರದಲ್ಲಿ ಕುಟುಂಬದಲ್ಲಿ ಎರಡು ಸಾವು ಸಂಭವಿಸಿದ್ದರೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೋವಿಡ್​ ಪರಿಹಾರ ಕಾರ್ಯಕ್ಕೆ ನಿಂತಿದ್ದಾರೆ. ಸಾವಿನ ನೋವಿನ ಮಧ್ಯೆಯೂ ಕೊರೋನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸೂತಕದ ಮನೆಯಲ್ಲಿ ಕೂರದೆ ಹೊರಬಂದು ಕೊರೊನಾ ರೋಗಿಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ಸ್ವಕ್ಷೇತ್ರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮಾಡುವುದರ ಜೊತೆಗೆ ತಮ್ಮ ಸ್ವಂತ ಖರ್ಚಿನಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ಕುಟುಂಬಕ್ಕೆ ಕೊರೊನಾ ದೊಡ್ಡ ಆಘಾತವನ್ನೇ ನೀಡಿದೆ. ಎರಡೇ ದಿನಗಳ ಅಂತರದಲ್ಲಿ ಇಬ್ಬರು ಕುಟುಂಬ ಸದಸ್ಯರನ್ನು ಕೊರೊನಾ ಬಲಿ ಪಡೆದಿದೆ. ಮೇ 11 ರಂದು ಲಕ್ಷ್ಮಣ ಸವದಿ ಸಹೋದರ ಪರಪ್ಪ ಸವದಿ ಅವರ ಕಿರಿಯ ಪುತ್ರ 36 ವರ್ಷದ ವಿನೋದ ಸವದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದರು. ವಿನೋದ್ ಕಳೆದ ಕೆಲ ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುತೇಕ ಗುಣಮುಖರಾಗಿದ್ದು ವಿನೋದ್ ಕೊನೆಯ ಘಳಿಗೆಯಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿನೋದ್ ಅಂತ್ಯ ಸಂಸ್ಕಾರ ಮುಗಿದ ಎರಡು ದಿನಗಳಲ್ಲಿ ಲಕ್ಷ್ಮಣ ಸವದಿ ಸಹೋದರ ಸಂಬಂಧಿ ಕಾಕನ ಮಗ 75 ವರ್ಷದ ದುಂಡಪ್ಪಾ ಮಲ್ಲಪ್ಪಾ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದುಂಡಪ್ಪಾ ಸವದಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ.

ದುಃಖದ ನಡುವೆಯೂ ಡಿಸಿಎಂ ಲಕ್ಷ್ಮಣ ಸವದಿ ಸಾಮಾಜೀಕ ಕೆಲಸಗಳಿಗೆ ಮುಂದಾಗಿದ್ದಾರೆ. ಅಥಣಿ ಪಟ್ಟಣದಲ್ಲಿ ಡಿಸಿಎಂ ಲಕ್ಷ್ಮಣ ಸವದಿ 50 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ ನೀಡಿದ್ದಾರೆ. ಅಥಣಿ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನಲೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ರೋಗಿಗಳು ಪರದಾಡುವಂತಾಗಿತ್ತು. ಈ ಹಿನ್ನಲೆ ಹೆಚ್ಚುವರಿಯಾಗಿ ಪಟ್ಟಣದ ಹೊರ ವಲಯದಲ್ಲಿರುವ ರಾಣಿ ಚನ್ನಮ್ನ ವಸತಿ ಶಾಲೆಯಲ್ಲಿ ಈ ಕೋವಿಡ್ ಸೆಂಟರ್ ತೆರೆಯಲಾಗಿದೆ. ಇನ್ನು ಈ ಆಸ್ಪತ್ರೆಯಲ್ಲಿ ಒಟ್ಟು 50 ಬೇಡ್ ಗಳ ವ್ಯವಸ್ಥೆ ಮಾಡಲಾಗಿದ್ದು 40 ಬೆಡ್ ಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ಅಳವಡಿಸಲಾಗಿದೆ.

ಇದೇ ಕೋವಿಡ್ ಸೆಂಟರ್​​​ಗೆ ಸವದಿ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು 50 ಲಕ್ಷ ಮೌಲ್ಯದ 40 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ತಮ್ಮದೇ ಸತ್ಯಸಂಗಮ ಗ್ರಾಮ ವಿಕಾಸ ಫೌಂಡೆಶನ್ ಮೂಲಕ ದೇಣಿಗೆ ನೀಡಿದ್ದು, ಹೆಚ್ಚುವರಿಯಾಗಿ ಆಕ್ಸಿಜನ್ ಬೇಡಿಕೆ ಇರುವ 40 ರೋಗಿಗಳಿಗೆ ಅನುಕೂಲವಾಗಲಿದೆ. ಬೆಡ್ ಸಿಗದೆ ಪರದಾಡುವ ರೋಗಿಗಳಿಗೆ ಪ್ರಾಥಮಿಕ ಹಂತವಾಗಿ ಇಲ್ಲಿಯೆ ಚಿಕಿತ್ಸೆ ನೀಡಿ ಬಳಿಕ ಬೆಡ್ ಇರುವ ಕಡೆ ರೋಗಿಗಳನ್ನ ಶಿಫ್ಟ್​​ ಮಾಡಿ ಚಿಕಿತ್ಸೆ ನೀಡಲು ತಾಲೂಕಾಡಳಿತ ಮುಂದಾಗಿದೆ.

ಕುಟುಂಬದಲ್ಲಾದ ಸಾವಿನ ಬಗಗ್ಎ ಮಾತನಾಡಿರುವ ಲಕ್ಷ್ಮಣ ಸವದಿ ಅವರು ತಮ್ಮವರು ತೀರಿಹೋದ ಬಳಿಕ ಸಾರ್ವಜನಿಕ ಜೀವನದಲ್ಲಿ ಇರುವವರು ಅದನ್ನೇ ಆಲೋಚನೆ ಮಡುತ್ತಾ ಕುಳಿತುಕೊಳ್ಳಲು ಆಗಲ್ಲ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಸಂಸಾರಕ್ಕೆ ಮಾತ್ರ ಸೀಮಿತವಾಗಿರಲು ಸಾಧ್ಯವಿಲ್ಲ. ನಾವು ಸಾರ್ವಜನಿಕ ಆಸ್ತಿ, ಸಮಾಜ ಚೆನ್ನಾಗಿ ಇದ್ದಾಗ ಖಾಸಗಿ ಬದುಕು ಇದ್ದೆ ಇರುತ್ತೆ. ಸಮಾಜಕ್ಕೆ ಕಂಟಕ್ಕೆ ಬಂದಾಗ ಸಮಾಜದ ಜೋತೆಗೆ ನಾವು ಇರಬೇಕಾಗುತ್ತದೆ ಎಂದಿದ್ದಾರೆ.
Published by:Kavya V
First published: