‘ಗಾಂಧಿ ನುಡಿದಂತೆ ಕಾಂಗ್ರೆಸ್​​ ಆಯಸ್ಸು ಮುಗಿದಿದೆ‘ - ಡಿಸಿಎಂ ಗೋವಿಂದ ಕಾರಜೋಳ

ನೂರು ವಷ೯ ಆದ್ಮೇಲೆ ಕಾಂಗ್ರೆಸ್ ಆಯುಷ್ಯ ಮುಗಿದಂತೆ. ಗಾಂಧೀಜಿ ಕಾಲಜ್ಞಾನಿಗಳಂತೆ ಮುನ್ನುಡಿ ಬರೆದಿದ್ರು. ಸ್ವಾತಂತ್ರ್ಯಕ್ಕಾಗಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್​ನ ವಿಸಜಿ೯ಸಿ ಅಂದಿದ್ರು. ಅದು ಹೋರಾಟಕ್ಕಾಗಿ ಕಟ್ಟಿದ ಸಂಸ್ಥೆ, ರಾಜಕೀಯ ಪಕ್ಷ ಅಲ್ಲ. ವಿಸಜಿ೯ಸಿದೆ ಹೋದ್ರೆ ಅದು ಕಳ್ಳರು ಕಾಕರ ಸಂಸ್ಥೆಯಾಗಿ ಹೆಸರು ಕೆಡಿಸುತ್ತೇ ಅಂತ ಬರೆದಿದ್ದರು ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.

  • Share this:
ಬಾಗಲಕೋಟೆ(ಜೂ.9): ಲೋಕೋಪಯೋಗಿ ಇಲಾಖೆಯಲ್ಲಿ ಹಿರಿಯ ಅಭಿಯಂತರರಿಗೆ ಬಡ್ತಿ ನೀಡಿದ ಹಿನ್ನೆಲೆಯಲ್ಲಿ ಕೆಳಮಟ್ಟದಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೊರತೆಯಾಗಿದೆ. ಹೀಗಾಗಿ 1 ಸಾವಿರ ತರಬೇತಿ ಅಭಿಯಂತರರನ್ನು ನೇಮಿಕಾತಿಗೆ ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ , ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ನೇಮಕಾತಿಗೆ ಕೆಪಿಎಸ್​​ಸಿಗೆ ಕೋರಲಾಗಿತ್ತು. ಆದರೆ ನೇಮಕಾತಿ ಪ್ರಶ್ನಿಸಿ ಕೆಲವರು ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಕೆಳಮಟ್ಟದಲ್ಲಿ ಕೆಲಸ ಕಾರ್ಯಕ್ಕಾಗಿ ತರಬೇತಿ ಅಭಿಯಂತರರನ್ನು ನೇಮಿಕಾತಿಗೆ ನಿರ್ಧರಿಸಿದ್ದು,700 ಸಹಾಯಕ ಅಭಿಯಂತರರು, 300 ಡಿಪ್ಲೊಮಾ ಪದವೀಧರರನ್ನು 1 ವರ್ಷದ ಅವಧಿಗಾಗಿ ನೇಮಿಸಲಾಗುತ್ತಿದೆ. ಈ ಮೂಲಕ ತರಬೇತಿ ಕೊಟ್ಟಂತಾಗುತ್ತದೆ.ಇಲಾಖೆ ಕಾರ್ಯ ನಡೆಯಲಿದೆ ಎಂದರು.

ಇನ್ನು, ನೇಮಕಾತಿಯಾದವರಿಗೆ ಸೂಕ್ತ ಸಂಭಾವನೆ ಕೊಡಲಾಗುವುದು. ಹಾಗೆಯೇ ಲೋಕೋಪಯೋಗಿ ಇಲಾಖೆಯಲ್ಲಿ ಬ್ಯಾಕ್​​ಲಾಗ್ ಇಂಜಿನಿಯರ್ ಬಡ್ತಿ ಸಂಬಂಧ ಅಧಿಕಾರಿಗಳಿಗೆ ಸಭೆ ಮಾಡಲು ಸೂಚಿಸಿದ್ದೇನೆ. ಹಿರಿತನ ಆಧರಿಸಿ ಬ್ಯಾಕ್ ಲಾಗ್ ಇಂಜಿನಿಯರ್​ಗೆ ಬಡ್ತಿ ಪರಿಗಣಿಸಲಾಗುತ್ತದೆ ಎಂದು ಕಾರಜೋಳ.

ಹೀಗೆ ಮುಂದುವರಿದ ಅವರು, ರಾಜ್ಯದಲ್ಲಿ 28 ಸಾವಿರ ಕಿಲೋ ಮೀಟರ್ ರಸ್ತೆ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. 18 ಸಾವಿರ ಕಿಲೋ ಮೀಟರ್ ಹಳ್ಳಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆ ಹಾಗೂ 10 ಸಾವಿರ ಕಿಲೋಮೀಟರ್ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

10 ವರ್ಷಗಳ ಬಳಿಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ದಲಿತ ಎನ್ನುವುದು ಪದ ಸಂವಿಧಾನದಲ್ಲಿ ಇಲ್ಲ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಪತ್ರ ಬಂದಿದೆ. ದಲಿತ ಪದಕ್ಕೆ ಪರ್ಯಾಯ ಪದ ಬಳಸಲು, ಜೊತೆಗೆ ಪರ್ಯಾಯ ಪದ ತಿಳಿಸಲು ಅಧಿಕಾರಿಗಳಿಗೆ  ಸೂಚಿಸಿದ್ದೇನೆ ಎಂದು ತಿಳಿಸಿದರು.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿವೆ. ಆದರೆ ದಲಿತ ಪದ ಇಲ್ಲ. ಹೀಗಾಗಿ ದಲಿತ ಪದ ಬಳಸದಂತೆ ಆದೇಶಿಸಲಾಗಿತ್ತು.ಕೆಲವರು ವಿರೋಧಿಸಿದ್ದು ಗಮನಕ್ಕೆ ಬಂದಿದೆ ಎಂದರು.

ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ  ಟಿಕೆಟ್ ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷರು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟಿದ್ದಾರೆ. ಪಕ್ಷ ನಿಷ್ಠೆ, ಕೆಲಸ ಕಾರ್ಯ ಮೆಚ್ಚಿ ಟಿಕೆಟ್ ನೀಡಿದ್ದಾರೆ. ರಾಜ್ಯದಿಂದ ಕಳುಹಿಸಿದ ಪಟ್ಟಿಯಲ್ಲಿ ಇಲ್ಲದವರಿಗೆ ಟಿಕೆಟ್ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ನಾವೇನು ಪಟ್ಟಿ ನಿಮಗೆ ತೋರಿಸಿವೇನು ಎಂದು ಮರು ಪ್ರಶ್ನಿಸಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಗಾಂಧಿ ಪ್ರತಿಮೆ ಧ್ವಂಸ: ಇದೊಂದು ನಾಚಿಕೆಗೇಡಿನ ಸಂಗತಿ ಎಂದ ಡೊನಾಲ್ಡ್​ ಟ್ರಂಪ್ ಆಕ್ರೋಶ​​​​

ಇದು ಇಡೀ ಪಕ್ಷದ ಆಯ್ಕೆಯಾಗಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಂತೋಷದ ಸಂಗತಿ. ಎಪ್ಪತ್ತು ವರ್ಷ ಸಾಮಾಜಿಕ ನ್ಯಾಯವೆಂದು ಕಾಂಗ್ರೆಸ್​ನವರು ಭಾಷಣ ಮಾಡಿದರು. ಅದನ್ನು ಅನುಷ್ಠಾನಕ್ಕೆ ನಾವು ತಂದಿದ್ದೇವೆಂದು ಕಾಂಗ್ರೆಸ್​ಗೆ ಒಳಯೇಟು ನೀಡಿದರು.

ಕ್ಷೌರಿಕ ಸಮಾಜವದವ, ಹಿಂದುಳಿದ ಜಿಲ್ಲೆ, ಯಾವುದೋ ಹಳ್ಳಿಯವನಿಗೆ ಬಿಜೆಪಿ ಪಕ್ಷ ಗುರುತಿಸಿ ಟಿಕೆಟ್ ಕೊಟ್ಟಿದ್ದು ಸಾಮಾಜಿಕ ನ್ಯಾಯವೆಂದರು. ರಾಜ್ಯಸಭೆ ಟಿಕೆಟ್ ಹಂಚಿಕೆಯಲ್ಲಿ ಸಿಎಂ ಬಿಎಸ್ವೈಗೆ ಅಸಮಾಧಾನ ಇಲ್ಲ. ನೀವು ಬಾಗಲಕೋಟೆಯಲ್ಲಿದ್ದು ಕೇಳುತ್ತಿದ್ದೀರಿ. ನಾನು ಯಾವಾಗಲೂ ಯಡಿಯೂರಪ್ಪನವರ ಪಕ್ಕದಲ್ಲೇ ಇರುತ್ತೇನೆ. ಹೈಕಮಾಂಡ್ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ರಾಜ್ಯದ ಸಿಎಂ, ರಾಜ್ಯಾಧ್ಯಕ್ಷ, ಪರಿಗಣಿಸುವುದು ಸಂಪ್ರದಾಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ.

ಮಾಜಿ ಸಚಿವ ಮುರುಗೇಶ್ ನಿರಾಣಿ ಶುಗರ್ಸ್ ಗೆ ಸರ್ಕಾರಿ ಸ್ವಾಮ್ಯದ ಮಂಡ್ಯದ ಪಿಎಸ್ಎಸ್ ಸಕ್ಕರೆ ಕಾರ್ಖಾನೆ ಲೀಜ್ ಕೊಟ್ಟಿರುವ ವಿಚಾರಕ್ಕೆ ಕಾರಜೋಳ ಪ್ರತಿಕ್ರಿಯೆಗೆ ಹಿಂದೇಟು ಹಾಕಿದರು‌. ನನಗೆ ಯಾವುದೋ ಉದ್ಯೋಗದ ಬಗ್ಗೆ ನಾಲೆಡ್ಜ್ ಇಲ್ಲ. ಹಳ್ಳಿಯೊಳಗೆ ಒಂದು ಮಾತಿದೆ. ತೊಗಲಾಗಿನ ಬಲ್ಲ  ತಿಮ್ಮಣ್ಣವೆಂದು.

ಅದರ ಬಗ್ಗೆ ನನಗೇನು ನಾಲೆಡ್ಜ್ ಇಲ್ಲ. ಆ ವ್ಯಾಪಾರಕ್ಕೂ ನನಗೂ ಸಂಬಂಧವಿಲ್ಲದ ಮನುಷ್ಯ. ರೈತರ ಕಾಳಜಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಮಾಡ್ತೇವೆ. ಅವರ ವ್ಯಾಪಾರ ಉದ್ಯೋಗದಲ್ಲಿ ನನಗೇನು ಗೊತ್ತು. ಬಿಡ್ ನಲ್ಲಿ ಭಾಗವಹಿಸಿ ತಗೊಂಡಾರ ಅದರ ಬಗ್ಗೆ ನನಗೆ ಪರಿಕಲ್ಪನೆ ಇಲ್ಲ. ಟೆಂಡರ್ ನಲ್ಲಿ ಹೆಚ್ಚು ಯಾರು ಬಿಡ್ ಕೊಟ್  ಮಾಡಿರ್ತಾರೋ ಅವ್ರಿಗೆ ಕೊಡೋದು ಸ್ವಾಭಾವಿಕ. ಸರ್ಕಾರಕ್ಕೆ ಆದಾಯ ಹೆಚ್ಚುವ ಬರುವ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮವಾಗಿದೆ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ದೇಶದ 130 ಕೋಟಿ ಜನ ಯಾವ ಪಕ್ಷಕ್ಕೆ ಭವಿಷ್ಯ ಇದೆ, ಯಾವ ಪಕ್ಷಕ್ಕೆ ಇಲ್ಲ ಅಂತ ಸಾಬೀತು ಮಾಡಿದ್ದಾರೆ. ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಇನ್ಮೇಲೆ ಕಾಂಗ್ರೆಸ್ ಮೇಲೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮುನ್ನಡೆಸತಕ್ಕ ನಾಯಕರಿಲ್ಲ. ಸೋನಿಯಾ ಗಾಂಧಿ ಅಧ್ಯಕ್ಷರಾಗಲು ಒಲ್ಲೆ ಅಂದ್ರು. ರಾಹುಲ್ ನಾನೊಲ್ಲೆ ಅಂತ 3 ತಿಂಗಳು ಗಾಯಬ್ ಆಗಿದ್ದರು ಎಂದು ಹೇಳಿದರು.

ನೂರು ವಷ೯ ಆದ್ಮೇಲೆ ಕಾಂಗ್ರೆಸ್ ಆಯುಷ್ಯ ಮುಗಿದಂತೆ. ಗಾಂಧೀಜಿ ಕಾಲಜ್ಞಾನಿಗಳಂತೆ ಮುನ್ನುಡಿ ಬರೆದಿದ್ರು. ಸ್ವಾತಂತ್ರ್ಯಕ್ಕಾಗಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್ನ ವಿಸಜಿ೯ಸಿ ಅಂದಿದ್ರು. ಅದು ಹೋರಾಟಕ್ಕಾಗಿ ಕಟ್ಟಿದ ಸಂಸ್ಥೆ, ರಾಜಕೀಯ ಪಕ್ಷ ಅಲ್ಲ. ವಿಸಜಿ೯ಸಿದೆ ಹೋದ್ರೆ ಅದು ಕಳ್ಳರು ಕಾಕರ ಸಂಸ್ಥೆಯಾಗಿ ಹೆಸರು ಕೆಡಿಸುತ್ತೇ ಅಂತ ಬರೆದಿದ್ದರು ಎಂದರು.

ರಾಜ್ಯ ಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಬೆಂಬಲಿಸುವ ವಿಚಾರದಲ್ಲಿ ನಮ್ಮ ಪಕ್ಷದ ನಿಣ೯ಯ ಹೇಗಾಗುತ್ತೋ ಹಾಗೆ ಮಾಡ್ತೀವಿ. ಪಕ್ಷದಲ್ಲಿ ಈ ವಿಷಯ ಇನ್ನೂ ಚಚೆ೯ಗೆ ಬಂದಿಯೇ ಇಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲೂ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಸಿಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಚುನಾವಣೆ ನೋಟಿಫಿಕೇಶನ್ ಆಗುತ್ತಲೇ ನಮ್ಮ ಪಕ್ಷದ ವೇದಿಕೆಯಲ್ಲಿ ಚಚೆ೯ಯಾಗುತ್ತೆ ಎಂದರು.
First published: