ಚನ್ನಪಟ್ಟಣದಲ್ಲಿ ಮೆಗಾ ಫುಡ್​ಪಾರ್ಕ್; ರಾಮನಗರದಲ್ಲಿ ಅತ್ಯಾಧುನಿಕ ಸಿಲ್ಕ್ ಮಾರ್ಕೆಟ್: ಡಿಸಿಎಂ, ಸಚಿವರ ಭರವಸೆ

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ರೇಷ್ಮೆ ಮಾರುಕಟ್ಟೆಗಳಿವೆ. ಇದು ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎನಿಸಿದೆ. ಈಗ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣವಾದರೆ ಜಿಲ್ಲೆಗೆ ಮತ್ತೊಂದು ಗರಿ ಬಂದಂತಾಗುತ್ತದೆ.

ರಾಮನಗರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಮತ್ತು ಸಚಿವ ನಾರಾಯಣಗೌಡರಿಂದ ಸಭೆ

ರಾಮನಗರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಮತ್ತು ಸಚಿವ ನಾರಾಯಣಗೌಡರಿಂದ ಸಭೆ

 • Share this:
  ರಾಮನಗರ(ಮೇ 11): ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಇಂದು ರಾಮನಗರದ ಕೋವಿಡ್-19 ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ನೂತನ ICU ವಾರ್ಡ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, 16 ಬೆಡ್​​ಗಳ ರಿಮೋಟ್ ಐಸಿಯು ರೂಮ್ ಹಾಗೂ ಕೋವಿಡ್-19 ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಾಗಿ ವಾರ್ ರೂಮ್ ಸಹ ಇಂದು ರಾಮನಗರದಲ್ಲಿ ತೆರೆಯಲಾಗಿದೆ ಎಂದರು.

  ಜಿಲ್ಲೆಯಲ್ಲಿ ನೂತನ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಜೊತೆಗೆ ಮಾವು ಸಂಸ್ಕರಣ ಘಟಕ ಸ್ಥಾಪಿಸಲು ತ್ವರಿತವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ಭರವಸೆ ನೀಡಿದರು.

  ಕೊರೋನಾ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅಶ್ವತ್ಥ ನಾರಾಯಣ, ನಮ್ಮ ರಾಜ್ಯದ 1.06 ಲಕ್ಷ ಜನರು ಹೊರ ರಾಜ್ಯದಲ್ಲಿ ಇದ್ದಾರೆ. ಅಂತಹವರನ್ನ ಕರೆಸಿಕೊಳ್ಳಲಾಗುತ್ತಿದೆ. ಅವರನ್ನ 15 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಪಾದರಾಯನಪುರದ ಪುಂಡರನ್ನ ಕರೆತರುವಲ್ಲಿ ಕೆಲ ಸಮಸ್ಯೆಗಳು ಹಾಗಿದ್ದವು. ಅವರ ಟೆಸ್ಟ್​ನ ರಿಪೋರ್ಟ್ ಬಂದ ಮೇಲೆ ರಾಮನಗರಕ್ಕೆ ಕರೆತರಬೇಕಾಗಿತ್ತು. ಆದರೆ ಅದರಲ್ಲಿ ಕೆಲ ಸಮಸ್ಯೆಯಾಯ್ತು. ಈಗ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

  ಇದನ್ನೂ ಓದಿ: ಹಾಸನಕ್ಕೆ ಕಾಲಿಟ್ಟಿದೆಯಾ ಕೊರೊನಾ ವೈರಸ್? ಇಲ್ಲ ಎಂದಿದ್ಧಾರೆ ಜಿಲ್ಲಾಧಿಕಾರಿ

  ಇದೇ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಸಚಿವ ನಾರಾಯಣಗೌಡ, ರಾಮನಗರದಲ್ಲಿ 70 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೇಷ್ಮೆ ಮಾರ್ಕೆಟ್ ನಿರ್ಮಾಣ ಮಾಡಲಾಗುವುದು. ಜೊತೆಗೆ ಚನ್ನಪಟ್ಟಣದಲ್ಲಿ ಮಾವು ಬೆಳೆಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಚನ್ನಪಟ್ಟಣದಲ್ಲೇ ಒಂದು ಬೃಹತ್ ಮೆಗಾ ಫುಡ್​ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು.

  ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ರೇಷ್ಮೆ ಮಾರುಕಟ್ಟೆಗಳಿವೆ. ಇದು ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎನಿಸಿದೆ. ಈಗ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣವಾದರೆ ಜಿಲ್ಲೆಗೆ ಮತ್ತೊಂದು ಗರಿ ಬಂದಂತಾಗುತ್ತದೆ.

  ವರದಿ: ಎ.ಟಿ. ವೆಂಕಟೇಶ್

  First published: