ಕೊರೋನಾ ವಿರುದ್ಧ ಹೋರಾಟ: ತಲೆ ಬೋಳಿಸಿ ವಾರ್ನರ್ ವಿಶೇಷ ಗೌರವ; ಕೊಹ್ಲಿಗೂ ಚಾಲೆಂಜ್

Coronavirus: ಕೊರೋನಾ ಭೀತಿಯ ನಡುವೆಯೂ ವಿಶ್ವದಲ್ಲಿ ಹಗಲಿರುಳು ಜನರಿಗಾಗಿ ದುಡಿಯುವ ಪೊಲೀಸರು, ಸೈನಿಕರು, ವೈದ್ಯರು ಹಾಗೂ ಪೌರ ಕಾರ್ಮಿಕರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ವಿಶೇಷವಾಗಿ ಗೌರವ ಸೂಚಿಸಿದ್ದಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

  • Share this:
ಇಂದು ಇಡೀ ಜಗತ್ತನ್ನೇ ಪೆಡಂಭೂತದಂತೆ ಕಾಡುತ್ತಿರುವ ಕೊರೋನಾ ವೈರಸ್ ಸದ್ಯಕ್ಕಂತೂ ದೂರಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಮಹಾಮಾರಿ ಸೋಂಕಿನಿಂದ ಮರಣ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. ದೇಶಾದ್ಯಂತ ಸೋಮವಾರ 227 ಹೊಸ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 1251ಕ್ಕೆ ಏರಿಕೆ ಆಗಿದೆ. ಸಾವಿನ ಸಂಖ್ಯೆ 32ರ ಗಡಿ ತಲುಪಿದೆ.

ಇನ್ನೂ ಮಾರಕ ವೈರಸ್​ಗೆ ಜಾಗತಿಕವಾಗಿ 35 ಸಾವಿರ ಜನರು ಬಲಿಯಾಗಿದ್ದು, ಏಳು ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಭೀತಿ ಹುಟ್ಟುಹಾಕಿದೆ. ಸೋಮವಾರ ಜಾಗತಿಕವಾಗಿ ಮಾರಕ ಸೋಂಕಿಗೆ 37,805 ಸಾವಿರ ಮಂದಿ ಮರಣವನ್ನಪ್ಪಿದ್ದಾರೆ ಎಂದು ಜಾನ್​ ಹಾಪ್​ಕಿನ್ಸ್​ ವಿಶ್ವವಿದ್ಯಾಲಯದ ವರದಿ ಹೇಳಿದೆ.

ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಅಲ್ಲ; ಮತ್ಯಾರು?; ಇಲ್ಲಿದೆ ಸಂಪೂರ್ಣ ಮಾಹಿತಿ

ಸದ್ಯ ವಿಶ್ವದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ದೇಣಿಗೆ ಹರಿದು ಬರುತ್ತಿದೆ. ಕ್ರೀಡಾಪಟುಗಳು, ಸಿನಿಮಾ ನಟಿ- ನಟಿಯರು ಸೇರಿದಂತೆ ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಈ ನಡುವೆ ಕೊರೋನಾ ಭೀತಿಯ ನಡುವೆಯೂ ವಿಶ್ವದಲ್ಲಿ ಹಗಲಿರುಳು ಜನರಿಗಾಗಿ ದುಡಿಯುವ ಪೊಲೀಸರು, ಸೈನಿಕರು, ವೈದ್ಯರು ಹಾಗೂ ಪೌರ ಕಾರ್ಮಿಕರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ವಿಶೇಷವಾಗಿ ಗೌರವ ಸೂಚಿಸಿದ್ದಾರೆ.

 
Coronavirus: ಮನೆಯೊಳಗೆ ಕ್ರಿಕೆಟ್ ಆಡಿ ಜನತೆಗೆ ವಿಶೇಷ ಸಂದೇಶ ನೀಡಿದ ಪಾಂಡ್ಯ ಬ್ರದರ್ಸ್​​

ತನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿ ವಾರ್ನರ್ ಅವರು ಕೋರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸೂಚಿಸಿದ್ದಾರೆ. ಈ ಕುರಿತ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಸಹ ಕ್ರೀಡಾಳುಗಳಿಗೆ ವಾರ್ನರ್ ಚಾಲೆಂಜ್ ಪಾಸ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಜೋ ಬರ್ನ್ಸ್, ತ್ರಾವಿಸ್ ಸ್ಮಿತ್, ಪಿಯರ್ಸ್ ಮೋರ್ಗನ್ (ಕ್ರೀಡಾ ನಿರೂಪಕ, ‌ಪತ್ರಕರ್ತ), ಆ್ಯಡಂ ಜಂಪಾ ಅವರಿಗೆ ಈ ರೀತಿ ಮಾಡುವಂತೆ ಚಾಲೆಂಜ್ ನೀಡಿದ್ದಾರೆ.
First published: