ಶಂಕಿತರನ್ನು ಕ್ವಾರಂಟೈನ್​ನಲ್ಲಿಡಲು ಐಷಾರಾಮಿ ಲಾಡ್ಜ್​ಗಳನ್ನು ಸುಪರ್ದಿಗೆ ಪಡೆದ ದಾವಣಗೆರೆ ಜಿಲ್ಲಾಡಳಿತ

ಸದರಿ ಹೋಟಲ್​ಗಳಲ್ಲಿ ತಂಗುವ ವ್ಯಕ್ತಿಗಳಿಗೆ ಉಪಾಹಾರ ಭೋಜನದ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯ ಆರೋಗ್ಯ ಅಧಿಕಾರಿಗಕಳು ಪರಿಶೀಲನೆ ಮಾಡಲಿದ್ದಾರೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

news18-kannada
Updated:April 2, 2020, 7:35 AM IST
ಶಂಕಿತರನ್ನು ಕ್ವಾರಂಟೈನ್​ನಲ್ಲಿಡಲು ಐಷಾರಾಮಿ ಲಾಡ್ಜ್​ಗಳನ್ನು ಸುಪರ್ದಿಗೆ ಪಡೆದ ದಾವಣಗೆರೆ ಜಿಲ್ಲಾಡಳಿತ
ದಾವಣಗೆರೆ ನಗರ.
  • Share this:
ದಾವಣಗೆರೆ: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ರಾಜ್ಯದಲ್ಲಿ ಈವರೆಗೂ 110 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಬಂದವರನ್ನು ಎಲ್ಲೆಡೆ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಆದರೆ, ಅವರಲ್ಲಿ ಕೆಲವರು ಮನಸ್ಸಿಗೆ ಇಚ್ಛೆ ಬಂದಂತ ಹೊರಗೆ ಅಡ್ಡಾಡುತ್ತಿದ್ದಾರೆ. ಅದಕ್ಕಾಗಿ ದಾವಣಗೆರೆ ಜಿಲ್ಲಾಡಳಿತ ನಗರದ ಐಷಾರಾಮಿ ಲಾಡ್ಜ್​ಗಳನ್ನು ಸುಪರ್ದಿಗೆ ಪಡೆದಿದ್ದು, ಅಲ್ಲಿನ ರೂಮುಗಳಲ್ಲಿ ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇಡಲು ತೀರ್ಮಾನಿಸಿದೆ.

ದಾವಣಗೆರೆ ಜಿಲ್ಲೆಯ ಒಟ್ಟು 342 ರೂಮುಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.  ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಗಳ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಕ್ವಾರಂಟೈನ್​ನಲ್ಲಿ ಇಡಲು ಈ ಲಾಡ್ಜ್​ಗಳ ರೂಮುಗಳನ್ನು ಬಳಕೆ ಮಾಡಿಕೊಳ್ಳಲಿದೆ.

ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 5 ಲಾಡ್ಜ್ ಗಳಲ್ಲಿ 250 ರೂಮ್​ಗಳು,  ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲ್ಲೂಕಿನ ಲಾಡ್ಜ್​ಗಳಿಂದ ಒಟ್ಟು 92 ಸುಸಜ್ಜಿತ ರೂಮುಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಸದರಿ ಹೊಟೇಲ್​ಗಳಲ್ಲಿ ಎಸಿ ಬಂದ್ ಮಾಡಬೇಕು, ಸೊಂಕು ಶಂಕಿತ ವ್ಯಕ್ತಿಗಳ ಸಂಖ್ಯೆಗೆ ಆನುಗುಣವಾಗಿ ಹಣ ಪಾವತಿ ಮಾಡಲಾಗುವುದು.

ಕೊಠಡಿ, ಉಪಾಹಾರ, ಭೋಜನದ ಸಿದ್ಧಪಡಿಸುವವರನ್ನು ವಿಪತ್ತು ಪ್ರಾಧಿಕಾರದ ಅಧ್ಯಕ್ಷರು ನಿರ್ಧಾರ ಮಾಡಲಿದ್ದಾರೆ. ಸದರಿ ಹೋಟಲ್​ಗಳಲ್ಲಿ ತಂಗುವ ವ್ಯಕ್ತಿಗಳಿಗೆ ಉಪಾಹಾರ ಭೋಜನದ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯ ಆರೋಗ್ಯ ಅಧಿಕಾರಿಗಕಳು ಪರಿಶೀಲನೆ ಮಾಡಲಿದ್ದಾರೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 9 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 110ಕ್ಕೇರಿಕೆ
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading