HOME » NEWS » Coronavirus-latest-news » CVID19 DEATH CASES INCREASE IN BANGLORE MAK

Covid Death: ಮಹಾಮಾರಿಗೆ ತತ್ತರಿಸಿದೆ ಬೆಂಗಳೂರು; ತಾಯಿಯನ್ನು ಕಳೆದುಕೊಂಡವನು ತಂದೆಯನ್ನು ಉಳಿಸಿಕೊಳ್ಳಲು ಪರದಾಟ!

ದುರಾದೃಷ್ಟವಶಾತ್ ಆತನ ತಾಯಿ ನಿನ್ನೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಆತನ ತಂದೆಯೂ ಸಹ ಕೊರೋನಾದಿಂದಾಗಿ ತತ್ತರಿಸಿದ್ದು, ಇದೀಗ ಅವರನ್ನಾದರೂ ಉಳಿಸಿಕೊಳ್ಳುವ ಹೋರಾಟಕ್ಕೆ ಯುವಕ ಮುಂದಾಗಿದ್ದಾನೆ.

news18-kannada
Updated:May 4, 2021, 4:49 PM IST
Covid Death: ಮಹಾಮಾರಿಗೆ ತತ್ತರಿಸಿದೆ ಬೆಂಗಳೂರು; ತಾಯಿಯನ್ನು ಕಳೆದುಕೊಂಡವನು ತಂದೆಯನ್ನು ಉಳಿಸಿಕೊಳ್ಳಲು ಪರದಾಟ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಮೇ 04); ಕೊರೋನಾ ಎರಡನೇ ಅಲೆಗೆ ಇಡೀ ದೇಶ ತತ್ತರಿಸಿದೆ. ರಾಜ್ಯ ರಾಜಧಾನಿ ಬೆಂಗಳೂರು ಸಹ ಇದಕ್ಕೆ ಹೊರತಾಗೇನಿಲ್ಲ. ಆಕ್ಸಿಜನ್​ ಕೊರತೆ ಹಾಗೂ ಬೆಡ್ ಇಲ್ಲದ ಕಾರಣ ಅನೇಕ ಕೊರೋನಾ ರೋಗಿಗಳು ನಾಡಿನಲ್ಲಿ ಮೃತಪಡುತ್ತಿದ್ದಾರೆ. ಇನ್ನೂ ಖಾಸಗಿ ಆಸ್ಪತ್ರೆಗಳ ಬಿಲ್​ ನೊಡಿಯೇ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಆಸ್ಪತ್ರೆಯಲ್ಲಿ ಬೆಡ್​ ಸಿಗದ ಕಾರಣ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಇದೀಗ ಮೃತಪಟ್ಟಿದ್ದು, ಇದೀಗ ತಂದೆಯನ್ನೂ ಉಳಿಸಿಕೊಳ್ಳಲು ಹೋರಾಡುತ್ತಿರುವ ಯುವಕನೊಬ್ಬನ ಹೃದಯವಿದ್ರಾವಕ ಕಥೆ ಇದೀಗ ಬಯಲಾಗಿದೆ.

ಈತನ ಹೆಸರು ಸಂದೀಪ್ (ಹೆಸರು ಬದಲಿಸಲಾಗಿದೆ). ಬಿಟಿಎಂ ಲೇಔಟ್ ನಿವಾಸಿ. ಈತನ ತಂದೆ ಮತ್ತು ತಾಯಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿದೆ. ರಕ್ತದಲ್ಲಿ ಆಕ್ಸಿಜನ್​ ಪ್ರಮಾಣ ಕಡಿಮೆಯಾದ ಕಾರಣ ಅವರನ್ನು ಐಸಿಯು ನಲ್ಲಿ ದಾಖಲಿಸಲು ಈತ ಸಾಕಷ್ಟು ಪ್ರಯತ್ನ ನಡೆಸಿದ್ದಾನೆ. ಆದರೆ, ಕಳೆದ ಒಂದು ವಾರದಿಂದ ಎಷ್ಟೇ ಪ್ರಯತ್ನ ನಡೆಸಿದರೂ ಸಹ ಒಂದು ಆಕ್ಸಿಜನ್ ಐಸಿಯು ಬೆಡ್​ ಅನ್ನು ಪಡೆಯಲು ಆತನಿಂದ ಸಾಧ್ಯವಾಗಿಲ್ಲ.

ದುರಾದೃಷ್ಟವಶಾತ್ ಆತನ ತಾಯಿ ನಿನ್ನೆ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಆತನ ತಂದೆಯೂ ಸಹ ಕೊರೋನಾದಿಂದಾಗಿ ತತ್ತರಿಸಿದ್ದು, ಇದೀಗ ಅವರನ್ನಾದರೂ ಉಳಿಸಿಕೊಳ್ಳುವ ಹೋರಾಟಕ್ಕೆ ಯುವಕ ಮುಂದಾಗಿದ್ದಾನೆ. ಕಣ್ಣೆದುರು ತಾಯಿಯ ಶವ ಇದ್ದರೂ ಸಹ ತಂದೆಯನ್ನು ಉಳಿಕೊಳ್ಳುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಆದರೆ, ಈವರೆಗೆ ಅವರಿಗೂ ಸಹ ಬೆಡ್ ಸಿಕ್ಕಿಲ್ಲ. ನೆನ್ನೆಯಷ್ಟೆ ಬದುಕಿದ್ದ ತಾಯಿ ಸಾವಿಗೀಡಾದ ಪರಿಣಾಮ ಕುಟುಂಬಸ್ಥರ ಗೋಳಾಟ ಹೇಳತೀರದಾಗಿದೆ.

ದೇಶದಲ್ಲಿ ಕೈಮೀರಿದ ಕೊರೋನಾ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಮೂರೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಅಲ್ಲದೆ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿ ದಾಟಿದೆ.

ಇದನ್ನೂ ಓದಿ: BS Yeddyurappa: ಆಕ್ಸಿಜನ್, ರೆಮ್​ಡಿಸಿವಿರ್ ಅಕ್ರಮ ಮಾರಾಟದ ಬಗ್ಗೆ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ; ಯಡಿಯೂರಪ್ಪ ಎಚ್ಚರಿಕೆ!

ಸೋಮವಾರ 3,57,229 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,20,289 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,02,82,833ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಸೋಮವಾರ 3,449 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,22,408ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 4, 2021, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories