HOME » NEWS » Coronavirus-latest-news » CURFEW IN ANDHRA PRADESH FROM WEDNESDAY DUE TO COVID 19 KVD

ಉಚಿತ ಕೋವಿಡ್ ಚಿಕಿತ್ಸೆಯಾಚೆಗೂ ಕಂಟ್ರೋಲ್​​ಗೆ ಬರದ ಕೊರೋನಾ; ಕರ್ಫ್ಯೂ ಮೊರೆ ಹೋದ ಆಂಧ್ರಪ್ರದೇಶ

ಆಂಧ್ರಪ್ರದೇಶದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಉಚಿತ ಲಸಿಕೆಯನ್ನೂ ಘೋಷಿಸಲಾಗಿದೆ. ಅದರಾಚೆಗೂ ಆಂಧ್ರದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ ತಗ್ಗುತ್ತಿಲ್ಲ.

Kavya V | news18-kannada
Updated:May 3, 2021, 4:29 PM IST
ಉಚಿತ ಕೋವಿಡ್ ಚಿಕಿತ್ಸೆಯಾಚೆಗೂ ಕಂಟ್ರೋಲ್​​ಗೆ ಬರದ ಕೊರೋನಾ; ಕರ್ಫ್ಯೂ ಮೊರೆ ಹೋದ ಆಂಧ್ರಪ್ರದೇಶ
ಜಗನ್ ಮೋಹನ್ ರೆಡ್ಡಿ.
  • Share this:
ಹೈದ್ರಾಬಾದ್​: ಕೊರೋನಾ 2ನೇ ಅಲೆ ಸರ್ಕಾರಗಳ ಅಂದಾಜು ಮೀರಿ ಜನರನ್ನು ಕಂಗಾಲಾಗಿಸುತ್ತಿದೆ. ದೇಶದ ಬಹುತೇಕ ರಾಜ್ಯ ಸರ್ಕಾರಗಳು ಕೊರೋನಾ ಹರಡುವಿಕೆಗೆ ಬ್ರೇಕ್​ ಹಾಕಲು ಕರ್ಫ್ಯೂ, ನೈಟ್​ ಕರ್ಫ್ಯೂ ಮೊರೆ ಹೋಗಿದೆ. ಇದಕ್ಕೆ ಹೊಸದಾಗಿ ಆಂಧ್ರಪ್ರದೇಶ ಸರ್ಕಾರವೂ ಸೇರ್ಪಡೆಯಾಗಿದೆ. ಬುಧವಾರದಿಂದ 2 ವಾರಗಳ ಕಾಲ ಆಂಧ್ರಪ್ರದೇಶದಾದ್ಯಂತ ಕರ್ಫ್ಯೂ ಜಾರಿಯಾಗಲಿದೆ ಎಂದು ಸಿಎಂ ಜಗನ್​ಮೋಹನ್​ ರೆಡ್ಡಿ ಇಂದು ಘೋಷಿಸಿದ್ದಾರೆ. ಸಂಪುಟ ಸಭೆ ನಡೆಸಿ ಕೊರೋನಾ ಪರಿಸ್ಥಿತಿ ಬಗ್ಗೆ ಚರ್ಚಿಸಿದ ಬಳಿಕ ಕರ್ಫ್ಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಂಧ್ರದಲ್ಲಿ ದಿನೇ ದಿನೇ ಕೊರೋನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ಹರಡುವಿಕೆಯ ಚೈನ್​ ಕಟ್​ ಮಾಡಲು ಕರ್ಫ್ಯೂ ಮೊರೆ ಹೋಗಲಾಗಿದೆ.

ಕರ್ನಾಟಕದಂತೆಯೇ ಆಂಧ್ರಪ್ರದೇಶಲ್ಲೂ ಬುಧವಾರದಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಲು, ದಿನಸಿ, ಹಣ್ಣು-ತರಕಾರಿ ಅಂಗಡಿಗಳು ಓಪನ್​ ಇರಲಿದೆ. ಮಧ್ಯಾಹ್ನದ ಬಳಿಕ ಕರ್ಫ್ಯೂ ಜಾರಿಯಾಗಲಿದ್ದು, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧವೇರಲಾಗಿದೆ. ರಾಜ್ಯದ ಜನ ಅನಗತ್ಯವಾಗಿ ಹೊರ ಬರದೆ ಮನೆಯಲ್ಲೇ ಇದ್ದು ಕರ್ಫ್ಯೂ ನಿಯಮ ಪಾಲಿಸಬೇಕು ಎಂದು ಸಿಎಂ ಜಗನ್​ಮೋಹನ್​ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದಂತೆಯೇ ಲಾಕ್​ಡೌನ್​ ಎಂಬ ಹೆಸರು ಬಳಸದೆಯೇ ಕರ್ಫ್ಯೂ ಹೆಸರಲ್ಲಿ ಬಹುತೇಕ ಲಾಕ್​ಡೌನ್​ ಘೋಷಿಸಲಾಗಿದೆ.

ನಿನ್ನೆ ಭಾನುವಾರ ಒಂದೇ ದಿನ ಆಂಧ್ರಪ್ರದೇಶದಲ್ಲಿ ಬರೋಬ್ಬರಿ 23,920 ಪಾಸಿಟಿವ್​ ಕೇಸ್​ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಭೆ ನಡೆಸಿದ ಸಿಎಂ ಜಗನ್​ ಮೇ 5ರಿಂದ ಕರ್ಫ್ಯೂ ಹೇರಲು ನಿರ್ಧರಿಸಿದ್ದಾರೆ. 2 ವಾರಗಳ ಕಾಲ ಅಗತ್ಯ ಸೇವೆಗಳ ಹೊರತಾಗಿ ಎಲ್ಲವೂ ಬಂದ್​ ಆಗಲಿದೆ. ಮಧ್ಯಾಹ್ನ 12 ಗಂಟೆ ನಂತರ ಸಿಆರ್​ ಪಿಸಿ ಸಿಬ್ಬಂದಿ ಕರ್ಫ್ಯೂ ಜಾರಿಯ ಹೊಣೆ ಹೊರಲಿದ್ದಾರೆ.

ಇದನ್ನೂ ಓದಿ: ನನ್ನ ತಾಯಿಗೇ ಬೆಡ್ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟ ಶಾಸಕಿ ಕುಸುಮಾ ಶಿವಳ್ಳಿ!

ಆಂಧ್ರಪ್ರದೇಶದಲ್ಲಿ ಸರ್ಕಾರಿ ಇರಲಿ ಖಾಸಗಿ ಆಸ್ಪತ್ರೆಗಳಲ್ಲೇ ಆಗಲಿ ಕೋವಿಡ್​ ಚಿಕಿತ್ಸೆಯನ್ನು ಸಂಪೂರ್ಣ ಉಚಿತ ಮಾಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆಯನ್ನೂ ಉಚಿತವಾಗಿ ನೀಡೋದಾಗಿ ಸಿಎಂ ಜಗನ್​ ಘೋಷಿಸಿದ್ದರು. ಎಲ್ಲಾ ಉಚಿತ ಸೌಲಭ್ಯಗಳಾಚೆಗೂ ಆಂಧ್ರದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ.
Published by: Kavya V
First published: May 3, 2021, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories