ಕೊರೋನಾ ಭೀತಿ; ಗುಂಡು ಹಾರಿಸಿಕೊಂಡು ಕಾಶ್ಮೀರದಲ್ಲಿ ಸಿಆರ್​ಪಿಎಫ್​ ಯೋಧ ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಫತೇ ಸಿಂಗ್ ಅವರನ್ನು ಸಿಆರ್​ಪಿಎಫ್​ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರೀನಗರ (ಮೇ 12): ದೇಶದ ಸೈನಿಕರೂ ಕೊರೋನಾ ಭೀತಿ ಎದುರಾಗಿದ್ದು, ತನಗೆ ಸೋಂಕು ತಗುಲಿದೆ ಎಂಬ ಆತಂಕದಿಂದ ಸಿಆರ್​ಪಿಎಫ್​ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಶ್ಮೀರದ ಗಡಿಯಲ್ಲಿ ಇಂದು ಈ ಘಟನೆ ನಡೆದಿದ್ದು, ತಾನು ಕೊರೋನಾ ಆತಂಕದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೂಸೈಡ್ ನೋಟ್ ಬರೆದಿಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿ ಬೆಟಾಲಿಯನ್​ನಲ್ಲಿ 68 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ಮೂಲಕ ದೆಹಲಿಯ ಬೆಟಾಲಿಯನ್​ನಲ್ಲಿ ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆಯಾಗಿತ್ತು. ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ 55 ವರ್ಷದ ಸಿಆರ್​ಪಿಎಫ್​ ಯೋಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು ಒಂದೇ ದಿನ 63 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆ

ಕೊರೋನಾ ಪಾಸಿಟಿವ್ ಬಂದಿರುವ ಸಿಆರ್​ಪಿಎಫ್​ ಯೋಧರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಆ ಯೋಧರೆಲ್ಲರಿಗೂ ರಜೆ ನೀಡಲಾಗಿದ್ದು, 14 ದಿನಗಳ ಕಾಲ ಮನೆಯೊಳಗೇ ಇರುವಂತೆ ಯೋಧರಿಗೆ ಸೂಚನೆ ನೀಡಲಾಗಿತ್ತು. ಇಂದು ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ಸಿಆರ್​ಪಿಎಫ್ ಅಸಿಸ್ಟೆಂಟ್ ಸಬ್ ಇನ್​ಸ್ಪೆಕ್ಟರ್ ಆಗಿದ್ದ ಫತೇ ಸಿಂಗ್ ತಮ್ಮದೇ ಸರ್ವಿಸ್​ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಂಡು ಹಾರಿಸಿಕೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಫತೇ ಸಿಂಗ್ ಅವರನ್ನು ಸಿಆರ್​ಪಿಎಫ್​ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು. ಅವರು ಬರೆದಿಟ್ಟಿರುವ ಸೂಸೈಡ್​ ನೋಟ್ ಪ್ರಕಾರ ಕೊರೋನಾ ಭೀತಿಯಿಂದ ರಾಜಸ್ತಾನ ಮೂಲದ ಫತೇ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೊರೋನಾ ಭೀತಿಯಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರೂ ನನ್ನ ದೇಹವನ್ನು ಮುಟ್ಟಬೇಡಿ. ನನಗೆ ಕೊರೋನಾ ಇದೆ ಎಂದು ನನಗೆ ಅನುಮಾನವಿದೆ ಎಂದು ಅವರು ಪತ್ರದಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮೇ 16ರಿಂದ 22ರವರೆಗೆ ವಿದೇಶದಲ್ಲಿ‌ ಸಿಲುಕಿರುವವರ ಏರ್ ಲಿಫ್ಟ್; ಕರ್ನಾಟಕಕ್ಕೆ 17 ವಿಮಾನಗಳು

ಆದರೆ, ಅವರಿಗೆ ಕೊರೋನಾ ಇರುವ ಬಗ್ಗೆ ಯಾವುದೇ ವೈದ್ಯಕೀಯ ದಾಖಲೆಗಳು ಪತ್ತೆಯಾಗಿಲ್ಲ. ಕೊರೋನಾ ಸೋಂಕಿನ ಬಗ್ಗೆ ಖಚಿತ ಮಾಹಿತಿ ತಿಳಿಯಲು ಅವರ ರಕ್ತದ ಸ್ಯಾಂಪಲ್ ಅನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಸಾವನ್ನಪ್ಪಿದ ಅಧಿಕಾರಿಗೆ ಕೊರೋನಾ ಇತ್ತಾ? ಎಂಬುದು ಖಚಿತವಾಗಲಿದೆ.
First published: